ಕರ್ನಾಟಕ

karnataka

ETV Bharat / state

ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್​ ಲಸಿಕೆ ವಿತರಣೆ ಅಭಿಯಾನ ಆರಂಭ - Covid Vaccine Campaign in Private Hospitals

ಇಂದು ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್​ ಲಸಿಕೆ ವಿತರಣೆ ಅಭಿಯಾನ ಆರಂಭವಾಗಿದೆ. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ, ಕಾಕ್ಸ್ ಟೌನ್ ಆಸ್ಪತ್ರೆ, ಪಾಲಿಕೆಯ ಹೆರಿಗೆ ಆಸ್ಪತ್ರೆ, ಸೆಂಟ್ ಫಿಲೋಮಿನಾ ಆಸ್ಪತ್ರೆ ಹಾಗೂ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಲಸಿಕೆ ವಿತರಣೆ ಕಾರ್ಯಕ್ರಮ ನಡೆಯಲಿದೆ.

Covid Vaccine Campaign
ಖಾಸಗಿ ಆಸ್ಪತ್ರೆಗಳಲ್ಲಿ ಇಂದು ಕೋವಿಡ್​ ಲಸಿಕೆ ವಿತರಣೆ ಅಭಿಯಾನ ಆರಂಭ

By

Published : Jan 17, 2021, 12:25 PM IST

ಬೆಂಗಳೂರು:ಕಳೆದೊಂದು ವರ್ಷದಿಂದ ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್‌ ವಿರುದ್ಧ ನಿರ್ಣಾಯಕ ಹೋರಾಟಕ್ಕೆ ಇಡೀ ದೇಶವೇ ಸಜ್ಜಾಗಿದೆ. ನಿನ್ನೆಯಷ್ಟೇ ಕೋವಿಡ್​ ಲಸಿಕೆ ವಿತರಣೆಯ ಬೃಹತ್​ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಇಂದು ಖಾಸಗಿ ಆಸ್ಪತ್ರೆಗಳಲ್ಲಿ ಈ ಅಭಿಯಾನ ನಡೆಯುತ್ತಿದೆ.

ಕೋವಿಡ್​ ವ್ಯಾಕ್ಸಿನ್‌‌ ಪಡೆಯುತ್ತಿರುವ ಬ್ಯಾಪ್ಟಿಸ್ಟ್ ಆಸ್ಪತ್ರೆ ಸಿಇಓ ನವೀನ್ ಥಾಮಸ್

ನಗರದ ನಾಲ್ಕು ಆಸ್ಪತ್ರೆಗಳ‌ 6 ಸಾವಿರ ಆರೋಗ್ಯ ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತಿದೆ. ಮಣಿಪಾಲ್ ಆಸ್ಪತ್ರೆ, ಕಾಕ್ಸ್‌ಟೌನ್ ಆಸ್ಪತ್ರೆ, ಪಾಲಿಕೆಯ ಹೆರಿಗೆ ಆಸ್ಪತ್ರೆ, ಸೆಂಟ್ ಫಿಲೋಮಿನಾ ಆಸ್ಪತ್ರೆ ಹಾಗೂ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಲಸಿಕೆ ನೀಡುವ ಕಾರ್ಯಕ್ರಮ ನಡೆಯಲಿದೆ.

ಎಲ್ಲಿ, ಎಷ್ಟು ಜನರಿಗೆ ಲಸಿಕೆ?

  • ಮಣಿಪಾಲ್ ಆಸ್ಪತ್ರೆ: 4,052 ಆರೋಗ್ಯ ಸಿಬ್ಬಂದಿ
  • ಕಾಕ್ಸ್ ಟೌನ್ ಹೆರಿಗೆ ಆಸ್ಪತ್ರೆ: 98 ಸಿಬ್ಬಂದಿ
  • ಸೆಂಟ್ ಫಿಲೋಮಿನಾ: 700 ಸಿಬ್ಬಂದಿ
  • ಬ್ಯಾಪ್ಟಿಸ್ಟ್: 1,376 ಆರೋಗ್ಯ ಸಿಬ್ಬಂದಿಗೆ ಲಸಿಕೆ

ಇದನ್ನೂ ಓದಿ:ತುಮಕೂರು: ನೋಂದಾಯಿತರ ಪೈಕಿ 73ರಷ್ಟು ಮಂದಿಗೆ ಕೋವಿಡ್ ಲಸಿಕೆ ವಿತರಣೆ

ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ವ್ಯಾಕ್ಸಿನೇಷನ್‌ ಆರಂಭವಾಗಿದ್ದು, ಶಾಸಕ ಬೈರತಿ ಸುರೇಶ್ ಚಾಲನೆ ನೀಡಿದರು. ಈ ಆಸ್ಪತ್ರೆಯಲ್ಲಿ 14 ವ್ಯಾಕ್ಸಿನೇಷನ್ ಸೈಟ್​​ಗಳನ್ನು ಮಾಡಲಾಗಿದೆ. ಇಂದು 1,376 ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆಯಲಿದ್ದಾರೆ. ಬ್ಯಾಪ್ಟಿಸ್ಟ್ ಆಸ್ಪತ್ರೆ ಸಿಇಓ ನವೀನ್ ಥಾಮಸ್ ಮೊದಲ ವ್ಯಾಕ್ಸಿನೇಷನ್‌ ಪಡೆದರು.

ABOUT THE AUTHOR

...view details