ಬೆಂಗಳೂರು:ಕನ್ನಡದ ಹಿರಿಯ ನಟ ದಿವಂಗತ ಉದಯ್ ಕುಮಾರ್ ಅವರ ಧರ್ಮಪತ್ನಿ ಕಮಲಮ್ಮ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ.
ಕಲಾಕೇಸರಿ ನಟ ಉದಯ್ ಕುಮಾರ್ ಪತ್ನಿ ನಿಧನ - actor uday kumar
ಕನ್ನಡ ಚಿತ್ರರಂಗದ ಧ್ರುವತಾರೆ ಕಲಾ ಕೇಸರಿ ಉದಯ್ ಕುಮಾರ್ ಪತ್ನಿ ಕಮಲಮ್ಮ (85) ಇಂದು ಬೆಳಗ್ಗೆ 10.30ಕ್ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಉದಯ್ ಕುಮಾರ್ ಪತ್ನಿ ಕಮಲಮ್ಮ ಪಾರ್ವತಮ್ಮ ರಾಜ್ಕುಮಾರ್ ಜೊತೆ
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕಮಲಮ್ಮ ಉದಯ್ ಕುಮಾರ್ ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಅವರ ಪಾರ್ಥಿವ ಶರೀರವನ್ನು ಆನೇಕಲ್ನ ಸ್ವಗೃಹದಲ್ಲಿ ಇಡಲಾಗಿದೆ.
ಉದಯ್ ಕುಮಾರ್ ನಿಧನದ ನಂತರ ಚಿತ್ರರಂಗದಲ್ಲಿ ಅಷ್ಟಾಗಿ ಗುರುತಿಸಿಕೊಳ್ಳದ ಕಮಲಮ್ಮ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಇಂದು ಸಂಜೆ ಹಿಂದೂ ವಿಧಿವಿಧಾನಗಳ ಪ್ರಕಾರ ಅವರ ಅಂತ್ಯಕ್ರಿಯೆ ಮಾಡಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.