ಬೆಂಗಳೂರು: ನಮ್ಮ ಎಲ್ಐಸಿ ಕಂತನ್ನು ಬೇಗ ಕಟ್ಟಿಸಿಕೊಳ್ಳಿ ಇಲ್ಲವಾದರೆ, ನೀವೇ ದಂಡವನ್ನು ಕಟ್ಟಿ ಎಂದು ಮಲ್ಲೇಶ್ವರಂನ ಎಲ್ಐಸಿ ಕಚೇರಿಯಲ್ಲಿ ಗ್ರಾಹಕರು ಸಿಬ್ಬಂದಿಗೆ ಒತ್ತಾಯಿಸಿದ ಘಟನೆ ನಡೆಯಿತು.
LIC ವಿಮೆ ಕಂತು ಕಟ್ಟಲು ಕೊನೆ ದಿನ: ಕಚೇರಿಯಲ್ಲಿ ಗೊಂದಲ - ಎಲ್ಐಸಿ ವಿಮೆ ಕಂತು
ಇಂದು ಎಲ್ಐಸಿ ವಿಮೆ ಕಂತು ಕಟ್ಟಲು ಕೊನೆಯ ದಿನವಾದ ಕಾರಣ ಹೆಚ್ಚು ಗ್ರಾಹಕರು ಕಚೇರಿಗೆ ಬಂದಿದ್ದರು. ಆದ್ರೆ ಸಿಬ್ಬಂದಿ ಕೊರತೆಯಿಂದ ಬೇಗ ಹಣವನ್ನು ಕಟ್ಟಿಸಿಕೊಳ್ಳಲಾಗುತ್ತಿರಲಿಲ್ಲ. ಇದರಿಂದ ಗ್ರಾಹಕರು ಮತ್ತು ಸಿಬ್ಬಂದಿ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.
ಎಲ್ಐಸಿ ವಿಮೆ ಕಂತು ಕಟ್ಟಲು ಕೊನೆ ದಿನ
ಕೇಂದ್ರ ಸರ್ಕಾರದ ನಿರ್ದೇಶನದಂತೆ ಕೆಲಸ ಮಾಡುತ್ತಿರುವ ಎಲ್ಐಸಿ ಸದ್ಯಕ್ಕೆ ಶೇ.33 ರಷ್ಟು ಮಾತ್ರ ಸಿಬ್ಬಂದಿಯನ್ನು ಒಳಗೊಂಡಿದೆ. ಇಂದು ವಿಮೆ ಕಂತು ಕಟ್ಟಲು ಕೊನೆಯ ದಿನವಾದ ಕಾರಣ ಹೆಚ್ಚು ಗ್ರಾಹಕರು ಕಚೇರಿಗೆ ಬಂದಿದ್ದರು.
ಹಾಗಾಗಿ ಸಿಬ್ಬಂದಿ ವೇಗವಾಗಿ ಕಂತನ್ನು ಪಾವತಿ ಮಾಡಿಸಿಕೊಳ್ಳಲು ಆಗುತ್ತಿರಲಿಲ್ಲ. ಇತ್ತ ಎಲ್ಐಸಿ ಗ್ರಾಹಕರು ಒಂದು ವೇಳೆ ಇವತ್ತು ಕಂತು ಕಟ್ಟದಿದ್ದರೆ, ದಂಡವನ್ನು ಕಟ್ಟಬೇಕಾಗುತ್ತದೆ. ನೀವ್ ಇಲ್ಲಿ ಏನ್ ಮಾಡುತ್ತಿದ್ದೀರಾ ಎಂದು ಎಲ್ಐಸಿ ಸಿಬ್ಬಂದಿಯನ್ನು ಪ್ರಶ್ನಿಸಿದ ಪ್ರಸಂಗ ಕಂಡುಬಂತು.