ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ಲಸಿಕೆ ಪಡೆಯಲು ಯುವಕರ ನೂಕುನುಗ್ಗಲು.. 2ನೇ ಡೋಸ್​​ಗಾಗಿ ಮುಗಿಬಿದ್ದ ವಯಸ್ಕರು - ಕೊರೊನಾ ವ್ಯಾಕ್ಸಿನೇಷನ್​

18 ವರ್ಷ ಮೇಲ್ಪಟ್ಟವರಿಗೆ ಬೆಂಗಳೂರಿನ ಕೆ.ಸಿ ಜನರಲ್, ನಿಮ್ಹಾನ್ಸ್, ಜಯನಗರ ಜನರಲ್, ಸರ್ ಸಿವಿ ರಾಮನ್, ಇ.ಎಸ್.ಐ ಹಾಗೂ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಮಾತ್ರ ಲಸಿಕೆ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಈ ಆಸ್ಪತ್ರೆಗಳಲ್ಲಿ ಜನರ ದಟ್ಟಣೆ ಹೆಚ್ಚಾಗಿದೆ. ಕೆಲವರು ಕಿ.ಮೀ ದೂರದವರೆಗೂ ಕ್ಯೂ ನಲ್ಲಿ ನಿಂತು ವ್ಯಾಕ್ಸಿನ್ ಪಡೆದರು.

large-number-of-people-came-to-hospital-for-vaccination
ಬೆಂಗಳೂರಲ್ಲಿ ಲಸಿಕೆ ಪಡೆಯಲು ಯುವಕರ ನೂಕುನುಗ್ಗಲು

By

Published : May 10, 2021, 1:52 PM IST

Updated : May 10, 2021, 2:54 PM IST

ಬೆಂಗಳೂರು:ನಗರದ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆಗಾಗಿ ಜನ ಮುಗಿಬಿದ್ದಿದ್ದಾರೆ.

ಒಂದೆಡೆ ಇಂದಿನಿಂದ 18ರಿಂದ 44 ವರ್ಷ ವಯಸ್ಸಿನವರಿಗೆ ಅಧಿಕೃತವಾಗಿ ಕೋವಿಡ್ ವ್ಯಾಕ್ಸಿನ್ ಆರಂಭವಾಗಿದೆ. ಆದರೆ 100ರಿಂದ 150 ಜನರಿಗೆ ಮಾತ್ರ ಅವಕಾಶ ಇರುವುದರಿಂದ ಆಸ್ಪತ್ರೆಯಲ್ಲಿ ನೂಕುನುಗ್ಗಲು ಉಂಟಾಗಿದೆ. ಎಲ್ಲರೂ ತಾವು ಹೆಸರು ನೋಂದಣಿ ಮಾಡಿಕೊಂಡಿದ್ದು, ಲಸಿಕೆ ಕೊಡಿ ಎಂದು ದುಂಬಾಲು ಬಿದ್ದಿದ್ದಾರೆ.

ಬೆಂಗಳೂರಲ್ಲಿ ಲಸಿಕೆ ಪಡೆಯಲು ಯುವಕರ ನೂಕುನುಗ್ಗಲು.. 2ನೇ ಡೋಸ್​​ಗಾಗಿ ಮುಗಿಬಿದ್ದ ವಯಸ್ಕರು

ಕೆ ಸಿ ಜನರಲ್ ಆಸ್ಪತ್ರೆಯ ಇನ್ನೊಂದು ಭಾಗದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಎರಡನೇ ಡೋಸ್ ನೀಡಲಾಗ್ತಿದೆ. ಕೋವ್ಯಾಕ್ಸಿನ್ ಲಸಿಕೆ ಈವರೆಗೆ ಲಭ್ಯ ಇರಲಿಲ್ಲ, ಸದ್ಯ ಬಂದಿದ್ದು ಎರಡನೇ ಡೋಸ್​​ಗಾಗಿ ಹೆಚ್ಚಿನ ಜನ ಆಗಮಿಸಿದ್ದಾರೆ. ನೂಕುನುಗ್ಗಲಿನಿಂದಾಗಿ ಪೊಲೀಸರು ಜನರ ಗುಂಪನ್ನು ಚದುರಿಸಿದರು. ಈ ಬಗ್ಗೆ ಸಾರ್ವಜನಿಕರು ಮಾತನಾಡಿ, ಮನೆಯಲ್ಲೇ ಇರಿ ಅಂತಾರೆ. ಆದರೆ ಮೊದಲನೇ ಡೋಸ್ ಪಡೆದು ಅವಧಿ ಮುಗಿದಿದ್ರೂ ಎರಡನೇ ಡೋಸ್ ಸಿಗುತ್ತಿಲ್ಲ. ಮೂರ್ನಾಲ್ಕು ದಿನದಿಂದ ಬಂದು ಕ್ಯೂ ನಿಂತರೂ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

18 ವರ್ಷ ಮೇಲ್ಪಟ್ಟವರಿಗೆ ನಗರದ ಕೆ.ಸಿ ಜನರಲ್, ನಿಮ್ಹಾನ್ಸ್, ಜಯನಗರ ಜನರಲ್, ಸರ್ ಸಿವಿ ರಾಮನ್, ಇ.ಎಸ್.ಐ ಹಾಗೂ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಮಾತ್ರ ಲಸಿಕೆ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಈ ಆಸ್ಪತ್ರೆಗಳಲ್ಲಿ ಜನರ ದಟ್ಟಣೆ ಹೆಚ್ಚಾಗಿದೆ. ಕೆಲವು ಜನ ಕಿ.ಮೀ ದೂರದವರೆಗೂ ಕ್ಯೂ ನಲ್ಲಿ ನಿಂತು ವ್ಯಾಕ್ಸಿನ್ ಪಡೆದರು. ರಿಜಿಸ್ಟರ್ ಮಾಡಿಯೂ, ಟೋಕನ್ ನಂಬರ್ ನೀಡಿಯೂ ವ್ಯಾಕ್ಸಿನ್ ಕೊಡುತ್ತಿಲ್ಲ ಎಂದು ದೂರಿದರು. ಸರ್ಕಾರ ಘೋಷಣೆ ಮಾಡಿದ ನಂತರ ವ್ಯಾಕ್ಸಿನ್ ಯಾಕೆ ಕೊಡುತ್ತಿಲ್ಲ ಎಂದು ಪ್ರಶ್ನಿಸಿದರು.

ಆಸ್ಪತ್ರೆಯ ಸೂಪರಿಂಡೆಂಟ್ ಡಾ.ವೆಂಕಟೇಶಯ್ಯ ಮಾತನಾಡಿ, ಕೆ ಸಿ ಜನರಲ್​ನಲ್ಲಿ ಪ್ರತಿನಿತ್ಯ 500ರಿಂದ 800 ಜನರಿಗೆ ಲಸಿಕೆ ಹಾಕುತ್ತಿದ್ದೇವೆ. ಇಂದಿನಿಂದ 18 ವರ್ಷ ಮೇಲ್ಪಟ್ಟವರಿಗೂ ಚುಚ್ಚುಮದ್ದು ಕೊಡಲಾಗುತ್ತಿದೆ. ‌ಎಲ್ಲರೂ ರಿಜಿಸ್ಟರ್ ಮಾಡಿಯೇ ಬರಬೇಕು. ಸರ್ಕಾರದ ಆದೇಶದಂತೆ ದಿನಕ್ಕೆ 150 ಜನರಿಗೆ ಕೊಡಲು ಮಾತ್ರ ಅವಕಾಶ ಇದೆ. ಇನ್ನು ಹೆಚ್ಚಿನ ಜನ ರಿಜಿಸ್ಟರ್ ಮಾಡದೆಯೇ ಬರುತ್ತಿದ್ದಾರೆ. ಎಲ್ಲರೂ ವ್ಯಾಕ್ಸಿನ್ ಬೇಕು ಅಂತ ಬಂದಿದ್ದು, ವ್ಯವಸ್ಥೆ ಮಾಡಲು ಕಷ್ಟ ಆಗುತ್ತಿದೆ. ಲಾಕ್​ಡೌನ್ ಇರುವುದದಿಂದ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆಯಿಂದಲೂ ಸಮಸ್ಯೆ ಆಗುತ್ತಿದೆ. ಕೋವಿಶೀಲ್ಡ್ ಲಭ್ಯತೆ ಇದೆ, ಆದರೆ ಕೋವ್ಯಾಕ್ಸಿನ್ ಲಭ್ಯತೆ ಕಡಿಮೆ ಇದೆ. ಹೀಗಾಗಿ ಸೆಕೆಂಡ್ ಡೋಸ್ ಮಾತ್ರ ಕೋವಾಕ್ಸಿನ್ ನೀಡಲಾಗುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ:ಇಂದಿನಿಂದ 14 ದಿನ ಕರ್ನಾಟಕ ಕಂಪ್ಲೀಟ್​ ಲಾಕ್​.. ಜಿಲ್ಲಾ ಗಡಿಗಳು ಬಂದ್​.. ಹೀಗಿತ್ತು ಮೊದಲ ದಿನದ ಸ್ಥಿತಿಗತಿ

Last Updated : May 10, 2021, 2:54 PM IST

ABOUT THE AUTHOR

...view details