ಕರ್ನಾಟಕ

karnataka

ETV Bharat / state

ಕೆಲಸ ಮಾಡುತ್ತಿದ್ದ ಅಂಗಡಿಯಲ್ಲಿಯೇ ಕಳ್ಳತನ: ಆರೋಪಿ ಅರೆಸ್ಟ್​ - ಕೆಲಸ ಮಾಡುತ್ತಿದ್ದ ಅಂಗಡಿಯಲ್ಲಿಯೇ ಕಳ್ಳತನ

ಮಿಟ್ರ್ಸಿ ಮೈಂಡ್ ಐಟಿ ಅಂಡ್ ಇಂಜಿನಿಯರಿಂಗ್ ಸರ್ವೀಸ್ ಪ್ರೈವೇಟ್ ಲಿಮಿಟೆಡ್​ನಲ್ಲಿ ಈತ ಕಳೆದ 6 ವರ್ಷಗಳಿಂದ‌ ಕೆಲಸ ಮಾಡುತ್ತಿದ್ದ. ಅದೇ ಅಂಗಡಿಯಲ್ಲಿ ಮಾಲೀಕನಿಲ್ಲದ ವೇಳೆ ಲ್ಯಾಪ್​ಟಾಪ್ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳನ್ನ ಕಳ್ಳತನ ಮಾಡಿದ್ದಾನೆ ಎನ್ನಲಾಗ್ತಿದೆ.

accused Arrested inBangalore
ಕೆಲಸ ಮಾಡುತ್ತಿದ್ದ ಅಂಗಡಿಯಲ್ಲಿಯೇ ಕಳ್ಳತನ: ಆರೋಪಿ ಅರೆಸ್ಟ್​

By

Published : Mar 17, 2021, 3:31 PM IST

ಬೆಂಗಳೂರು: ಕೆಲಸ ಮಾಡುತ್ತಿದ್ದ ಮಾಲೀಕನ ಅಂಗಡಿಯಲ್ಲಿಯೇ ಕಳ್ಳತನ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ವೇಣು ಕುಮಾರ್ ಬಂಧಿತ ಆರೋಪಿ. ಮಿಟ್ರ್ಸಿ ಮೈಂಡ್ ಐಟಿ ಅಂಡ್ ಇಂಜಿನಿಯರಿಂಗ್ ಸರ್ವೀಸ್ ಪ್ರೈವೇಟ್ ಲಿಮಿಟೆಡ್​ನಲ್ಲಿ ಈತ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಅದೇ ಅಂಗಡಿಯಲ್ಲಿ ಮಾಲೀಕನಿಲ್ಲದ ವೇಳೆ ಲ್ಯಾಪ್​ಟಾಪ್ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳನ್ನ ಕಳ್ಳತನ ಮಾಡಿದ್ದಾನೆ. ಈ ಸಂಬಂಧ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಕಳ್ಳತನದ ದೂರು ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ವೇಣು ಕುಮಾರ್​ನನ್ನು ವಿಚಾರಣೆ ನಡೆಸಿದಾಗ ಕಳ್ಳತನದ ಪ್ರಕರಣ ಬೆಳಕಿಗೆ ಬಂದಿದೆ.

ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು, 25 ಲಕ್ಷ ರೂ. ಮೌಲ್ಯದ 21 ಲ್ಯಾಪ್​​ಟಾಪ್, 21 ಮಾನೀಟರ್, 79 ರ್ಯಾಮ್​, 43 ಹಾರ್ಡ್ ಡಿಸ್ಕ್, 18 ಕೀ ಬೋರ್ಡ್, 21 ಪ್ರೊಸೆಸರ್ ಹಾಗೂ 12 ಮದರ್ ಬೋರ್ಡ್​ಗಳನ್ನು ವಶಕ್ಕೆ ಪಡೆದಿದ್ದಾರೆ.

ABOUT THE AUTHOR

...view details