ಕರ್ನಾಟಕ

karnataka

ETV Bharat / state

ಬೆಂಗಳೂರು: ಹಾಡಹಗಲು ಮನೆಮಂದಿ ಇರುವಾಗಲೇ ಲ್ಯಾಪ್ ಟಾಪ್ ಕಳವು - ಅಪಾರ್ಟ್​​ಮೆಂಟ್​ನಲ್ಲಿ ಕಳ್ಳತನ

ಬೆಂಗಳೂರಿನ ಗೋವಿಂದಪುರ ಠಾಣಾ ವ್ಯಾಪ್ತಿಯ ಅಪಾರ್ಟ್​​ಮೆಂಟ್​ನಲ್ಲಿ ಈ ಕಳ್ಳತನ ಪ್ರಕರಣ ನಡೆದಿದೆ.

laptop theft at a Apartment
ಖದೀಮನ ಕೈ ಚಳಕದ ಸಿಸಿಟಿವಿ ದೃಶ್ಯ

By

Published : Jul 11, 2021, 2:44 PM IST

ಬೆಂಗಳೂರು: ಅನ್​ಲಾಕ್ ಬಳಿಕ ಸಿಲಿಕಾನ್ ಸಿಟಿಯಲ್ಲಿ ಕಳ್ಳರ ಹಾವಳಿ ಹೆಚ್ಚಾಗುತ್ತಿದೆ. ಹಗಲು ಹೊತ್ತಿನಲ್ಲೇ ರಾಜಾರೋಷವಾಗಿ ಬಂದು ಕಳ್ಳತನ ಮಾಡುವ ಘಟನೆಗಳು ಬೆಳಕಿಗೆ ಬರ್ತಿವೆ.

ಇದೀಗ ಅಂತಹದ್ದೇ ಘಟನೆ ನಗರದ ಗೋವಿಂದಪುರ ಠಾಣಾ ವ್ಯಾಪ್ತಿಯ ವೀರನಪಾಳ್ಯದಲ್ಲಿ ನಡೆದಿದೆ. ಇಲ್ಲಿನ ಸೋನಾ ಟವರ್ ಅಪಾರ್ಟ್​​ಮೆಂಟ್​ನ ಫ್ಲ್ಯಾಟ್ ಒಂದರ ಮನೆಯಲ್ಲಿ ಜನರು ಇರುವಾಗಲೇ ಕಳ್ಳ ಲ್ಯಾಪ್‌ಟಾಪ್ ಎಗರಿಸಿದ್ದಾನೆ. ಮನೆಯವರು ಬಾಗಿಲು ತೆರೆದಿಟ್ಟು ಹೋಗಿದ್ದಾಗ ಘಟನೆ ನಡೆದಿದೆ.

ಖದೀಮನ ಕೈ ಚಳಕದ ಸಿಸಿಟಿವಿ ದೃಶ್ಯ

ಘಟನೆಯ ಮತ್ತಷ್ಟು ವಿವರ:

ಸೋನಾ ಟವರ್ ಅಪಾರ್ಟ್​​ಮೆಂಟ್​ನ ನಿವಾಸಿಸ್ನೇಹ ಎಂಬಾಕೆ ಮನೆಯ ಬಾಗಿಲು ತೆರೆದಿಟ್ಟು ಬಾಲ್ಕನಿಯಲ್ಲಿ ನಿಂತಿದ್ದರು. ಆಕೆಯ ತಾಯಿ ಬೆಡ್ ರೂಂನಲ್ಲಿ ಮಲಗಿದ್ದರು. ಈ ವೇಳೆ ಹಾಲ್​ನಲ್ಲಿ ಯಾರೂ ಇಲ್ಲದನ್ನು ಗಮನಿಸಿದ ಖದೀಮ, ಕಿಟಕಿಯ ಮೂಲಕ ನೋಡಿ ಖಾತರಿಪಡಿಸಿಕೊಂಡು ಒಳನುಗ್ಗಿ ಡೈನಿಂಗ್ ಟೇಬಲ್​ ಮೇಲಿದ್ದ ಲ್ಯಾಪ್ ಟಾಪ್ ಕದ್ದುಕೊಂಡು ಹೋಗಿದ್ದಾನೆ.

ಜುಲೈ 7 ಬುಧವಾರದಂದು ಸಂಜೆ ಸುಮಾರು 4 ಗಂಟೆ ಸುಮಾರಿಗೆ ಈ ನಡೆದ ಘಟನೆ ನೆಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ದೃಶ್ಯ ಅಪಾರ್ಟ್​​ಮೆಂಟ್​ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗೋವಿಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂಓದಿ: ನಿಶ್ಚಯವಾಗಿದ್ದ ಮದುವೆ ನಿರಾಕರಿಸಿದ ತಂಗಿಗೆ ಅಣ್ಣನ ಕೊಡಲಿ ಏಟು.. ದೇವದುರ್ಗದಲ್ಲಿ ಹರಿಯಿತು ನೆತ್ತರು!

ಜುಲೈ 10 ರಂದು ಶನಿವಾರ ಕೂಡ ಸೋನಾ ಟವರ್ ಅಪಾರ್ಟ್​​ಮೆಂಟ್​ನಲ್ಲಿ ಕಳ್ಳತನ ನಡೆದಿರುವ ಬಗ್ಗೆ ಮಾಹಿತಿ ದೊರೆತಿದೆ. ಮುಂಜಾನೆ 5.30 ರ ಸುಮಾರಿಗೆ ಕಳ್ಳನೊಬ್ಬ ಮೊಬೈಲ್ ಕದ್ದೊಯ್ದಿದ್ದಾನೆ ಎನ್ನಲಾಗ್ತಿದೆ. ಲ್ಯಾಪ್ ಟಾಪ್ ಎಗರಿಸಿದ ಅದೇ ವ್ಯಕ್ತಿಯೇ ಮೊಬೈಲ್ ಕಳವು ಮಾಡಿರಬಹುದು ಎಂದು ಪೊಲೀಸರು ಮತ್ತು ಅಪಾರ್ಟ್​​ಮೆಂಟ್​ ನಿವಾಸಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details