ಕರ್ನಾಟಕ

karnataka

ETV Bharat / state

ಶೀಘ್ರದಲ್ಲೇ ಭೂ ದಾಖಲೆಗಳಲ್ಲಿ ಬಳಸುವ ಪರ್ಷಿಯನ್​, ಅರಬಿಕ್​ ಪದಗಳಿಗೆ ಗುಡ್​ ಬೈ... - Land records Persian origin words

ನಮ್ಮ ಭೂ ದಾಖಲೆಗಳಲ್ಲಿ ಅನೇಕ ಪರ್ಷಿಯಾ, ಉರ್ದು ಮತ್ತು ಅರೆಬಿಕ್ ಪದಗಳು ಬಳಸಲಾಗುತ್ತಿದೆ. ಅಂತಹ ಚಾಲ್ತಿಯಲ್ಲಿರುವ ಕೆಲವು ಪದಗಳನ್ನು ಬದಲಾವಣೆ ಮಾಡಲು ಕಂದಾಯ ಇಲಾಖೆ ಮುಂದಾಗಿದೆ.

Persian origin words
Persian origin words

By

Published : Jan 28, 2020, 2:39 AM IST

ಬೆಂಗಳೂರು: ರಾಜ್ಯದ ಭೂ ದಾಖಲೆಗಳ ವ್ಯವಹಾರ ನಡೆಸಿದವರಿಗೆ ‌ಕೆಲ‌ ಪದಗಳೇ ತಲೆನೋವಾಗಿ ಪರಿಣಮಿಸುತ್ತಿರುತ್ತದೆ. ಅದನ್ನು ಅರ್ಥ ಮಾಡುವುದೇ ದೊಡ್ಡ ತಲೆನೋವು. ಇದಕ್ಕೆ ಈಗ ಮುಕ್ತಿ ನೀಡಲು ಕಂದಾಯ ಇಲಾಖೆ ಮುಂದಾಗಿದೆ.

ಹೌದು, ನಮ್ಮ ಭೂ ದಾಖಲೆ, ಕಡತಗಳನ್ನು ಹೊಕ್ಕರೆ ಅನೇಕ ಕ್ಲಿಸ್ಟಕರ ಪದಗಳ ದರ್ಶನವಾಗುತ್ತೆ. ಅದನ್ನು ಅರ್ಥ ಮಾಡಿಕೊಳ್ಳುವುದೇ ಒಂದು ದೊಡ್ಡ ತಲೆ ನೋವು ವಿಚಾರ. ಅದರಲ್ಲೂ ಹೊಸಬರಿಗೆ ಭೂ ದಾಖಲೆಗಳಲ್ಲಿನ ಆ ಕ್ಲಿಷ್ಟ ಪದಗಳನ್ನು ಡಿಕೋಡ್ ಮಾಡುವುದಂತು ಕಬ್ಬಿಣದ ಕಡಲೆಯೇ ಸರಿ. ಜನಸಾಮಾನ್ಯರಿಗೆ ಭೂ ದಾಖಲೆಗಳನ್ನು ಓದಿ ಅರ್ಥ ಮಾಡುವುದು ಬಹಳ ತ್ರಾಸದ ಕೆಲಸ.

ಪರ್ಷಿಯನ್, ಅರೆಬಿಕ್ ಪದಗಳ ಬಳಕೆ:

ನಮ್ಮ ಭೂ ದಾಖಲೆಗಳಲ್ಲಿ ಅನೇಕ ಪರ್ಷಿಯಾ, ಉರ್ದು ಮತ್ತು ಅರೆಬಿಕ್ ಪದಗಳು ಬಳಸಲಾಗುತ್ತಿದೆ. ಹೊಸದಾಗಿ ಭೂ ದಾಖಲೆಗಳನ್ನು ನೋಡುವವನಿಗೆ ಆ‌ ಪದಗಳನ್ನು ಅರ್ಥೈಸುವುದೇ ದೊಡ್ಡ ಟೆನ್ಷನ್. ಬ್ರಿಟೀಷರ ಕಾಲದಿಂದಲೂ ಭೂ ದಾಖಲೆಗಳಲ್ಲಿ ಇದೇ ಪದಗಳನ್ನು ಬಳಸಲಾಗುತ್ತಿದೆ. ದಶಕಗಳಿಂದ ಬಳಸಲಾಗುವ ಆ ಪರ್ಷಿಯನ್ ಹಾಗೂ ಅರೆಬಿಕ್ ಪದಗಳು ರಾಜ್ಯದ ಭೂ ದಾಖಲೆಗಳಲ್ಲಿ ಕಾಣ ಸಿಗುತ್ತದೆ. ಈ ಪದಗಳನ್ನು ಏಕೆ ಕನ್ನಡಕ್ಕೆ ಭಾಷಾಂತರಿಸಿಲ್ಲ ಎಂಬುದಕ್ಕೆ ಯಾವುದೇ ಉತ್ತರ ಇಲ್ಲ.

ಆ ಪದಗಳ ಸರಳೀಕರಣಕ್ಕೆ ನಿರ್ಧಾರ:

ಇದೀಗ ಕಂದಾಯ ಇಲಾಖೆ ಆ ಕ್ಲಿಷ್ಟಕರ ಪದಗಳ ಸರಳೀಕರಣಕ್ಕೆ ಮುಂದಾಗಿದೆ.

ಜನಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಭೂ ದಾಖಲೆಗಳಲ್ಲಿನ ಪರ್ಷಿಯನ್ ಹಾಗೂ ಅರೆಬಿಕ್ ಪದಗಳನ್ನು ಸರಳಗೊಳಿಸಲು ಕಂದಾಯ ಇಲಾಖೆ ಚಿಂತನೆ ನಡೆಸಿದೆ. ಈ ಸಂಬಂಧ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಭೂ ದಾಖಲೆಗಳಲ್ಲಿನ ಪರ್ಷಿಯನ್, ಅರೆಬಿಕ್ ಪದಗಳನ್ನು ಸರಳೀಕರಣಗೊಳಿಸಲು ಬಿಜೆಪಿ ನಾಯಕರಿಂದಲೂ ಒತ್ತಡ ಬರುತ್ತಿತ್ತು. ಇದೀಗ ಕಂದಾಯ ಸಚಿವ ಆರ್.ಅಶೋಕ್ ಪರ್ಷಿಯನ್ ಹಾಗೂ ಅರೆಬಿಕ್ ಪದಗಳನ್ನು ತೆಗೆದು, ಜನಸಾಮಾನ್ಯರಿಗೆ ಅರ್ಥವಾಗುವಂಥ ಸರಳ ಪದಗಳನ್ನು ಬಳಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ನಮ್ಮ ಭೂ ದಾಖಲೆಗಳಲ್ಲಿ ಸುಮಾರು 100 ಕ್ಕೂ ಹೆಚ್ಚು ಪರ್ಷಿಯನ್ ಹಾಗೂ ಅರೆಬಿಕ್ ಪದಗಳನ್ನು ಬಳಸಲಾಗುತ್ತಿದೆ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.

ಬದಲಾಗಲಿರುವ ಕೆಲ ಜಟಿಲ ಪದ:

ಪೋಡಿ- ವರ್ಗ ಭೂಮಿ

ಧರ್ಕಾಸ್ತ್ ಭೂಮಿ- ಸರ್ಕಾರಿ ಗ್ರಾಂಟ್ ಭೂಮಿ

ಖುಷ್ಕಿ- ಒಣ‌ಭೂಮಿ

ದರ್ಯ- ನದಿ

ಕುಮ್ಕಿ- ಹುಲ್ಲು ಬೆಳೆಯುವ ಸರ್ಕಾರಿ ಭೂಮಿ

ಖರಾಬ್ ಭೂಮಿ- ವ್ಯವಸಾಯಕ್ಕೆ ಯೋಗ್ಯವಲ್ಲದ ಭೂಮಿ

ಚಕ್ ಬಂಧಿ- ಭೂಮಿಯ ನಕ್ಷೆ

ಆಕಾರ್ ಬಂಧ್- ಸರ್ವೆ ನಂ. ಭೂಮಿಯ ವ್ಯಾಪ್ತಿ, ಕೃಷಿ ಭೂಮಿ, ಭೂ ದರಗಳ ವಿವರ

ಪಟ್ಟಾ ಭೂಮಿ- ಹಕ್ಕುಪತ್ರ ದಾಖಲೆಗಳು

ಪರಂಬೋಕ್ ಭೂಮಿ- ಕಂದಾಯ ದಾಖಲೆಗಳಲ್ಲಿಲ್ಲದ ಭೂಮಿ

ಪೋತಿ ಖಾತೆ- ಪೂರ್ವಜರ ಜಮೀನನ್ನು ತಮ್ಮ ಹೆಸರಿಗೆ ನೋಂದಾಯಿಸುವುದು

ಪೈಕಿ ಭೂಮಿ- ಸರ್ವೆ ಮ್ಯಾಪ್ ಇಲ್ಲದೆ ವಿಎ ಸಿದ್ಧಪಡಿಸಿದ ಭೂ ದಾಖಲೆ

ABOUT THE AUTHOR

...view details