ಕರ್ನಾಟಕ

karnataka

ETV Bharat / state

ಡ್ರೋನ್​​​ ಮೂಲಕ ಗದಗ ಜಿಲ್ಲೆಯಲ್ಲಿ ‘ಮರು ಭೂ ಮಾಪನ ಯೋಜನೆ’ಗೆ ಚಾಲನೆ.. ಕೆಲ ಕ್ಷಣ ದಂಗಾದ ರೈತರಿಗೆ ಅಧಿಕಾರಿಗಳಿಂದ ಮಾಹಿತಿ - ಗದಗ ಜಿಲ್ಲೆಯಲ್ಲಿ ಮರು ಭೂ ಮಾಪನ ಯೋಜನೆ

ಡ್ರೋನ್​ ಮೂಲಕ ಮರು ಭೂ ಮಾಪನ ಯೋಜನೆಗೆ ಗದಗ ಜಿಲ್ಲೆಯಲ್ಲಿ ಚಾಲನೆ ನೀಡಲಾಗಿದೆ.

land-re-survey-project-started-in-gadag-district
ಡ್ರೋನ್​​​ ಮೂಲಕ ಗದಗ ಜಿಲ್ಲೆಯಲ್ಲಿ ‘ಮರು ಭೂ ಮಾಪನ ಯೋಜನೆ’ ಚಾಲನೆ

By

Published : Jun 24, 2023, 10:14 PM IST

ಡ್ರೋನ್​​​ ಮೂಲಕ ಗದಗ ಜಿಲ್ಲೆಯಲ್ಲಿ ‘ಮರು ಭೂ ಮಾಪನ ಯೋಜನೆ’ ಚಾಲನೆ

ಗದಗ: ಡ್ರೋನ್​ ಮೂಲಕ ಜಿಲ್ಲೆಯಲ್ಲಿ ‘ಮರು ಭೂ ಮಾಪನ ಯೋಜನೆ’ (ವೈಮಾನಿಕ ಭೂ ಸಮೀಕ್ಷೆ)ಗೆ ಚಾಲನೆ ನೀಡಲಾಗಿದೆ. ಈ ವೇಳೆ ಜಮೀನುಗಳಲ್ಲಿ ಮಿನಿ ವಿಮಾನ ಆಕಾರ ಹೋಲುವ ಡ್ರೋನ್​ ಹಾರಾಟ ನಡೆಸುತ್ತಿರುವುದನ್ನು ಕಂಡ ರೈತರು ಆತಂಕಗೊಂಡ ಘಟನೆ ನಡೆಯಿತು.

ಜಿಲ್ಲೆಯ ಮುಂಡರಗಿ ತಾಲೂಕಿನ ಹಲವು ರೈತರು ಡ್ರೋನ್​ ಹಾರಾಟವನ್ನು ಕಂಡಿದ್ದಾರೆ. ಕೆಲ ದಿನಗಳ ಹಿಂದೆ ದೊಡ್ಡ ವಿಮಾನ ಹಾರಾಟ ನಡೆಸಿ ಆತಂಕ ಸೃಷ್ಟಿಸಿದ್ದವು. ಇದರ ಬೆನ್ನಲ್ಲೇ ಈಗ ಚಿಕ್ಕ ವಿಮಾನ ಹಾರಾಟವನ್ನು ಗಮನಿಸಿ ಬೆಚ್ಚಿಬಿದ್ದಿದ್ದಾರೆ. ಯಾಕೆ ನಮ್ಮ ಜಮೀನುಗಳಲ್ಲಿ ಈ ವಿಮಾನ ಹಾರಿಸ್ತಿದ್ದೀರಿ ಎಂದು ಮುಂಡರಗಿಯ ಬರದೂರ ಬಳಿ ವಿಮಾನ ಹಾರಾಟ ನಡೆಸುತ್ತಿದ್ದ ಸಿಬ್ಬಂದಿ ಮೇಲೆ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಡ್ರೋನ್​​ ಮೂಲಕ ಜಿಲ್ಲೆಯಲ್ಲಿ ಭೂ ಮಾಪನ ಇಲಾಖೆಯಿಂದ ಸರ್ವೇ ಕಾರ್ಯ ನಡೆಯುತ್ತಿದೆ. ಇದು ವೈಮಾನಿಕ ಭೂ ಸಮೀಕ್ಷೆ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಪಷ್ಟನೆ ನೀಡಿದರು. ಆದರೂ ಇದನ್ನೂ ಕೇಳದ ರೈತರು, ಯಾವ ಕಾರಣಕ್ಕೆ ಈ ರೀತಿ ನಮ್ಮ ಜಮೀನುಗಳಲ್ಲಿಯೇ ಸರ್ವೇ ಮಾಡ್ತಿದಿರಿ. ಹಿಂದೆ ದೊಡ್ಡದೊಂದು ವಿಮಾನ ಹಾರಾಟ ನಡೆಸಿತ್ತು. ಅವತ್ತೂ ಇದೇ ರೀತಿ ಸರ್ವೇ ಕಾರ್ಯ ಎಂದು ಹೇಳಿದ್ರು. ಈಗ ಚಿಕ್ಕದೊಂದು ವಿಮಾನ ತಂದು ಇದೊಂದು ಡ್ರೋನ್ ಕ್ಯಾಮರಾ ಎಂದು ಹೇಳ್ತಿದ್ದೀರಿ. ಯಾವ ಕಾರಣಕ್ಕೆ, ಯಾವ ಇಲಾಖೆಯಿಂದ ಸರ್ವೇ ಮಾಡಲಾಗ್ತಿದೆ, ಯಾರು ಆದೇಶ ಮಾಡಿದ್ದಾರೆ ಅಂತೆಲ್ಲ ಪ್ರಶ್ನೆಗಳನ್ನು ಕೇಳತೊಡಗಿದರು.

ಇದನ್ನೂ ಓದಿ :ಜಮೀನು ಹದ್ದುಬಸ್ತಿನ ಪ್ರಕ್ರಿಯೆ ಹೇಗೆ, ಅರ್ಜಿ ಸಲ್ಲಿಸುವುದು ಎಲ್ಲಿ ?: ಇಲ್ಲಿದೆ ಸಂಪೂರ್ಣ ಮಾಹಿತಿ

ಇವರ ಪ್ರಶ್ನೆಗಳಿಗೆ ಅಲ್ಲಿದ್ದ ಸಿಬ್ಬಂದಿ ಉತ್ತರ ನೀಡಲು ಇನ್ನಿಲ್ಲದ ಹರಸಾಹಸ ಮಾಡಬೇಕಾಯಿತು. ಕೊನೆಗೆ ಕೆಲವು ದಾಖಲೆಗಳನ್ನು ರೈತರಿಗೆ ತೋರಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲಾಯಿತು. ಈ ವೈಮಾನಿಕ ಭೂ ಸಮೀಕ್ಷೆ ವೇಳೆ ನಡೆದ ಗೊಂದಲದ ಬಗ್ಗೆ ಮುಂಡರಗಿ ತಹಶೀಲ್ದಾರ್​ ಶೃತಿ ಮಳ್ಳಪ್ಪನವರ್ ಸ್ಪಷ್ಟನೆ ನೀಡಿದ್ದಾರೆ.

ಮರು ಭೂಮಾಪನ ಮಾಡಲು ಗದಗ ಜಿಲ್ಲೆಯಾದ್ಯಂತ ಸರ್ವೆ ನಡೆದಿದೆ. ಮುಂಡರಗಿ ತಾಲೂಕಿನಲ್ಲೂ ಈ ಸಮೀಕ್ಷೆ ಪ್ರಾರಂಭವಾಗಿದೆ. ಈ ಬಗ್ಗೆ ಯಾರು ಕೂಡ ಭಯಪಡುವ ಅಗತ್ಯವಿಲ್ಲ. ಕರ್ನಾಟಕ ಸರ್ಕಾರ 27/5/2022 ರ ಅನ್ವಯ ರಾಜ್ಯಾದ್ಯಂತ ಮರು ಭೂಮಾಪನ ಸರ್ವೇ ಕೈಗೊಂಡಿರುತ್ತದೆ. ಈ ಸರ್ವೇ ಪ್ರತಿ 30 ವರ್ಷಕ್ಕೊಮ್ಮೆ ಆಗುತ್ತದೆ. ಕಾರಣಾಂತರದಿಂದ 1964 ರಲ್ಲಿ ಆಗಿದ್ದು ಈಗ ಆಗುತ್ತಿದೆ. ಸರ್ವೆ ಆಫ್ ಇಂಡಿಯಾ ತಂಡದಿಂದ ಈ ಸರ್ವೇ ಕಾರ್ಯ ನಡೆಯುತ್ತಿದೆ. ಇದಕ್ಕೆ ಮೊದಲು ಗದಗ ಜಿಲ್ಲೆಯನ್ನು ಆಯ್ಕೆ ಮಾಡಲಾಗಿದೆ. ಮುಂಡರಗಿ ತಾಲೂಕಿನಲ್ಲಿ ಚಿಕ್ಕ ಡ್ರೋನ್ ವಿಮಾನ ಮೂಲಕ ಸಮೀಕ್ಷೆ ನಡೆಸಲಾಗುತ್ತಿದೆ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ :ಮೈಶುಗರ್ ಕಾರ್ಖಾನೆ ಅಧಿಕಾರಿಗಳೊಂದಿಗೆ ಶಾಸಕ ರವಿಕುಮಾರ್ ಸಭೆ.. ಶೀಘ್ರದಲ್ಲಿ ಕಬ್ಬು ಅರೆಯುವಿಕೆ ಆರಂಭಿಸುವಂತೆ ಸೂಚನೆ

ABOUT THE AUTHOR

...view details