ಕರ್ನಾಟಕ

karnataka

ETV Bharat / state

ಅಕ್ರಮ ಭೂಮಿ ಕಬಳಿಸಿ ಬ್ಯಾಂಕ್ ಸಾಲ ಪಡೆಯುತ್ತಿದ್ದ ಗ್ಯಾಂಗ್ ಅಂದರ್..! - ಬೆಂಗಳೂರು ಬೂ ಕಬಳಿಕೆ ಗ್ಯಾಂಗ್​ ಸುದ್ದಿ

ಬೆಂಗಳೂರು ನಗರದಲ್ಲಿ ರಾಜಾರೋಷವಾಗಿ ಲ್ಯಾಂಡ್​ ಮಾಫಿಯಾ ನಡೆಸುತ್ತಿದ್ದ ಗ್ಯಾಂಗ್​ ಒಂದನ್ನು ಬಂಧಿಸುವಲ್ಲಿ ಬಸವೇಶ್ವರ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

land-mafia-gang
ಮಾಫಿಯಾ ಗ್ಯಾಂಗ್ ಅಂದರ್

By

Published : Mar 18, 2020, 9:01 PM IST

ಬೆಂಗಳೂರು :ನಗರದಲ್ಲಿವ್ಯಾಪಕವಾಗಿ ಬೇರು ಬಿಟ್ಟಿರುವ ಲ್ಯಾಂಡ್ ಮಾಫಿಯಾ ಜಾಲದ ಗ್ಯಾಂಗ್ ಒಂದನ್ನು ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ.

ಮಾಫಿಯಾ ಗ್ಯಾಂಗ್ ಅಂದರ್

ವಿನಯ್ , ವಿಶ್ವನಾಥ್ , ಸೈಯದ್ ಯೂಸೂಫ್ , ಚಂದ್ರಶೇಖರ, ಹಾಗೂ ಶಿವಮ್ಮ ಬಂಧಿತ ಆರೋಪಿಗಳು. ಇವರುಗಳು ದೂರದ ಅಮೆರಿಕದಲ್ಲಿ ವಾಸವಿದ್ದ ಬೆಂಗಳೂರು ಮೂಲದ ರೂಪಲಕ್ಷ್ಮಿ ಎನ್ನುವವರ ಸೈಟ್ ರಾಜಾರೋಷವಾಗಿ ಕಬಳಿಸಿ, ನಕಲಿ ಬಾಂಡ್ ತಯಾರಿಸಿ ಆರೋಪಿ ಶೀವಮ್ಮಳನ್ನೇ ರೂಪಲಕ್ಷ್ಮಿ ಎಂದು ತೋರಿಸಿ ಸೈಟ್ ಕಬಳಿಸಿದ್ದರು, ಮಾತ್ರವಲ್ಲ ಅದನ್ನು ಬಸವರಾಜ್ ಯರಗಲ್ ಎನ್ನುವವರ ಹೆಸರಿಗೆ ಖರೀದಿ ಮಾಡಿಸಿ ಬ್ಯಾಂಕ್​ ನಲ್ಲಿ 75 ಲಕ್ಷ ರೂ. ಲೋನ್ ತೆಗೆದುಕೊಂಡಿದ್ದರು.

ಮಾಫಿಯಾ ಗ್ಯಾಂಗ್ ಅಂದರ್

ಅಕ್ರಮ ಭೂ ಕಬಳಿಕೆಗೆ ಬೇಕಾದ ಎಲ್ಲ ನಕಲಿ ದಾಖಲೆಗಳನ್ನ ಸಂಗ್ರಹಿಸಿ ಇಟ್ಟುಕೊಂಡಿದ್ದರು. ರೂಪಲಕ್ಷ್ಮಿ ದೂರಿನ ಆಧಾರದಲ್ಲಿ ಪ್ರರಕಣ ಬೆನ್ನಟ್ಟಿದ್ದ ಇನ್ಸ್​​ಪೆಕ್ಟರ್ ಎರ್ರಿಸ್ವಾಮಿಗೆ ಸ್ಟಾಂಪ್ ವಿನಯ್​ ಬಳಿ ಸಿಕ್ಕ ದಾಖಲೆಗಳನ್ನು ಕಂಡು ಖುದ್ದು ಶಾಕ್ ಆಗಿ ಬಿಟ್ಟಿದ್ದರು. ಇನ್ನು ಇದೆ ಆರೋಪಿಗಳು ಇತರ ಜಾಗದಲ್ಲಿ ಕೂಡ ಹೀಗೆ ಸೈಟ್ ಕಬಳಿಸಿದ್ದು ತನಿಖೆಯಲ್ಲಿ ಕಂಡುಬಂದಿದೆ.

ಮಾಫಿಯಾ ಗ್ಯಾಂಗ್ ಅಂದರ್

ಸದ್ಯ ಆರೋಪಿಗಳನ್ನ ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುವ ಸಲುವಾಗಿ ವಶಕ್ಕೆ ಪಡೆಯಲ್ಲಿದ್ದಾರೆ. ಆರೋಪಿಗಳು ಕೆಲ ರೌಡಿಗಳಿಗೂ ನಕಲಿ ದಾಖಲೆ ಸೃಷ್ಟಿಸಿ ಕೊಟ್ಟಿರುವ ಸಾಧ್ಯತೆ ಇದೆ. ಈ ಸಂಬಂಧ ಪೊಲೀಸರು ಇನ್ನೂ ಹೆಚ್ಚಿನ ತನಿಖೆ ಮುಂದುವರೆಸಿದ್ದು, ಇದರಲ್ಲಿ ಯಾರೆಲ್ಲ ಸಿಲುಕಿದ್ದಾರೆ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ.

ABOUT THE AUTHOR

...view details