ಕರ್ನಾಟಕ

karnataka

ETV Bharat / state

ಶಾಸಕರ ಹೆಸರಿನಲ್ಲಿದ್ದ ನಿವೇಶನವನ್ನೇ ಲಪಟಾಯಿಸಿದ ಭೂಗಳ್ಳರು: ದೂರು ದಾಖಲಿಸಿದ ಗೂಳಿಹಟ್ಟಿ ಶೇಖರ್​ - ನಕಲಿ ದಾಖಲೆ ಸೃಷ್ಟಿ

ಶಾಸಕರ ಹೆಸರಿನಲ್ಲಿದ್ದ ನಿವೇಶನವನ್ನು ನಕಲಿ ದಾಖಲೆ ಸೃಷ್ಟಿಸಿ ತಮ್ಮ ಹೆಸರಿಗೆ ಮಾಡಿಕೊಂಡ 8 ಮಂದಿ ಭೂಗಳ್ಳರ ವಿರುದ್ಧ ಶಾಸಕ ಗೂಳುಹಟ್ಟಿ ಶೇಖರ್​ ದೂರು ನೀಡಿದ್ದಾರೆ.

MLA Gulihatti Shekhar
ಶಾಸಕ ಗೂಳಿಹಟ್ಟಿ ಶೇಖರ್​

By

Published : Jan 20, 2023, 4:19 PM IST

Updated : Jan 20, 2023, 4:40 PM IST

ಬೆಂಗಳೂರು: ಜನಸಾಮಾನ್ಯರಿಗೆ ಭೂಗಳ್ಳರು ವಂಚಿಸುವ ಪ್ರಕರಣಗಳನ್ನು ನೋಡಿದ್ದೇವೆ. ಆದರೆ ಶಾಸಕರಿಗೆ ಮಂಜೂರಾಗಿದ್ದ ನಿವೇಶನವನ್ನೇ ಭೂಗಳ್ಳರು ಕಬಳಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಶಾಸಕ ಗೂಳಿಹಟ್ಟಿ ಶೇಖರ್ ಹೆಸರಿನಲ್ಲಿ ಮಂಜೂರಾಗಿದ್ದ ಬಿಡಿಎ ನಿವೇಶನವನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂಗಳ್ಳರು ಕಬಳಿಸಿರುವ ಬಗ್ಗೆ ಸಂಜಯ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಜಯನಗರದ ಆರ್​ಎಂವಿ 2ನೇ ಹಂತದಲ್ಲಿ ತಮ್ಮ ಹೆಸರಿನಲ್ಲಿ 2015ರಲ್ಲಿ 50X80 ನಿವೇಶನ ಹಂಚಿಕೆಯಾಗಿತ್ತು. ಅದೇ ನಿವೇಶನದ ಮೇಲೆ ಜನತಾ ಕೋ ಆಪರೇಟಿವ್ ಬ್ಯಾಂಕ್​ನಲ್ಲಿ ಸಾಲವನ್ನು ಕೂಡಾ ಪಡೆದಿದ್ದೇನೆ. ಅದೇ ಬಡಾವಣೆಯಲ್ಲಿ‌ ಶಾಸಕರಾಗಿದ್ದ ಅಭಯ್ ಪಾಟೀಲ್, ಪಿ.ಎಂ. ನರೇಂದ್ರ ಅವರ ನಿವೇಶನಗಳೂ ಸಹ ಇವೆ. ಆದರೆ ನಕಲಿ ದಾಖಲೆ ಸೃಷ್ಟಿಸಿರುವ ರಾಮಮೂರ್ತಿ ಅಲಿಯಾಸ್ ಮಣಿವಣ್ಣನ್‌, ಅನುರಾಧಾ, ದೀಪಿಕಾ ಸೇರಿದಂತೆ 8 ಜನ ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದಾರೆ ಎಂದು ಗುಳಿಹಟ್ಟಿ ಶೇಖರ್ ಸ್ವತಃ ದೂರು ದಾಖಲಿಸಿದ್ದಾರೆ.

ಬಿಲ್ಡರ್ಸ್ ಹಾಗೂ ಡೆವಲಪರ್ಸ್​ಗಳೇ ಶಾಸಕರಿಗೆ ಗೊತ್ತಿಲ್ಲದಂತೆ ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದಾರೆ ಎನ್ನಲಾಗಿದ್ದು, ರಾಮಮೂರ್ತಿ ಅಲಿಯಾಸ್ ಮಣಿವಣ್ಣನ್‌, ಅನುರಾಧಾ, ದೀಪಿಕಾ ಸೇರಿದಂತೆ 8 ಜನರ ವಿರುದ್ಧ ಸಂಜಯನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಇದನ್ನೂ ಓದಿ:₹10 ಲಕ್ಷ ರೂ ದರೋಡೆ ಪ್ರಕರಣ: ಹಣ ದೋಚಿ ಕಳ್ಳತನದ ಕಥೆ ಕಟ್ಟಿದ ಶೂ ವ್ಯಾಪಾರಿ ಅರೆಸ್ಟ್​​

Last Updated : Jan 20, 2023, 4:40 PM IST

ABOUT THE AUTHOR

...view details