ಕರ್ನಾಟಕ

karnataka

ETV Bharat / state

ಸೂರಿಲ್ಲದವರಿಗೆ ನಿವೇಶನ ನೀಡಲು ಆಗ್ರಹ: ಕರ್ನಾಟಕ ರಿಪಬ್ಲಿಕ್ ಸೇನೆಯಿಂದ ಪ್ರತಿಭಟನಾ ಜಾಥಾ - ಬೆಂಗಳೂರು ಇತ್ತೀಚಿನ ಸುದ್ದಿ

ವಸತಿ ರಹಿತರಿಗೆ ನಿವೇಶನ ನೀಡುವಂತೆ ಆಗ್ರಹಿಸಿ ಕರ್ನಾಟಕ ರಿಪಬ್ಲಿಕ್ ಸೇನೆ ಸಂಘಟನೆಯ ಕಾರ್ಯಕರ್ತರು ಕೆಆರ್ ಪುರ ವೆಂಗಯ್ಯನ ಕೆರೆಯಿಂದ ತಾಲೂಕು ಕಚೇರಿಯವರೆಗೂ ಪ್ರತಿಭಟನಾ ಜಾಥಾ ನಡೆಸಿದರು.

ಕರ್ನಾಟಕ ರಿಪಬ್ಲಿಕ್ ಸೇನೆ ಪ್ರತಿಭಟನೆ  ಕರ್ನಾಟಕ ರಿಪಬ್ಲಿಕ್ ಸೇನೆ ಪ್ರತಿಭಟನೆ
ಕರ್ನಾಟಕ ರಿಪಬ್ಲಿಕ್ ಸೇನೆ ಪ್ರತಿಭಟನೆ

By

Published : Nov 24, 2020, 8:52 PM IST

ಕೆಆರ್​ ಪುರ (ಬೆಂಗಳೂರು): ಸೂರಿಲ್ಲದ ಬಡವರಿಗೆ ಉಚಿತವಾಗಿ ನಿವೇಶನ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಿಪಬ್ಲಿಕ್ ಸೇನೆ ಸಂಘಟನೆಯ ಕಾರ್ಯಕರ್ತರು ಕೆಆರ್ ಪುರದ ತಾಲೂಕು ಕಚೇರಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಕೆಆರ್ ಪುರ ವೆಂಗಯ್ಯನ ಕೆರೆಯಿಂದ ತಾಲೂಕು ಕಚೇರಿಯವರೆಗೂ ವಸತಿ ರಹಿತ ಬಡವರಿಗೆ ಉಚಿತ ನಿವೇಶನ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿ ಜಾಥಾ ನಡೆಸಿದರು.

ಕರ್ನಾಟಕ ರಿಪಬ್ಲಿಕ್ ಸೇನೆಯ ರಾಜ್ಯಾಧ್ಯಕ್ಷ ಜಿಗಣಿ ಶಂಕರ್ ಮಾತನಾಡಿ, ಬಿದರಹಳ್ಳಿ ಹೋಬಳಿಯ ಬೈಯಪ್ಪನಹಳ್ಳಿ ಗ್ರಾಮದ ಸರ್ವೇ 27, ಹಿರಂಡಹಳ್ಳಿ ಗ್ರಾಮದ ಸರ್ವೇ 39, ಚಿಮಸಂದ್ರ ಗ್ರಾಮದ 77, ಚನ್ನಸಂದ್ರ ಗ್ರಾಮದ 115, ಕುಂಬೇನ ಆಗ್ರಹಾರ 36ಕ್ಕೆ ಸಂಬಂಧಿಸಿದ ಸರ್ಕಾರಿ ಜಮೀನಿನಲ್ಲಿ ನಿವೇಶನ ಮಂಜೂರು ಮಾಡುವಂತೆ ಒತ್ತಾಯಿಸಿದರು.

ತಾಲೂಕು ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿ ಸುಮಾರು ಒಂದು ಲಕ್ಷ ಎಕರೆ ಸರ್ಕಾರಿ ಭೂಮಿ ಒತ್ತುವರಿಯಾಗಿ ಭೂ ಮಾಫಿಯಾದವರಿಗೆ ಪರಭಾರೆಯಾಗಿದೆ. ಅಕ್ರಮದಲ್ಲಿ ಅಧಿಕಾರಿಗಳು ಕೂಡ ಶಾಮಿಲಾಗಿದ್ದಾರೆ ಎಂದು ಆರೋಪಿಸಿದರು. ಒತ್ತುವರಿ ಮಾಡಿಕೊಂಡಿರುವ ಶೇ. 10ರಷ್ಟು ಜಾಗವನ್ನು ತೆರವುಗೊಳಿಸಿ ಬಡವರಿಗೆ ಸೂರು ಕಲ್ಪಿಸಬೇಕು ಎಂದು ಆಗ್ರಹಿಸಿದರು.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳು ಕಳೆದರೂ ವ್ಯವಸ್ಥೆ ಬದಲಾಗಿಲ್ಲ. ಬಡವರು ಬಡವರಾಗಿ ಉಳಿದಿದ್ದಾರೆ. ನಿವೇಶನ ಇಲ್ಲದೆ ಪರದಾಡುವಂತಾಗಿದೆ. ನಿವೇಶನ ಇಲ್ಲದವರಿಗೆ ನಿವೇಶನ ಮಂಜೂರು ಬಗ್ಗೆ ಎಷ್ಟೇ ಅರ್ಜಿ ಸಲ್ಲಿಸಿದರು ಪ್ರಯೋಜನವಾಗುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಅರವಿಂದ ಲಿಂಬಾವಳಿಗೆ ಸಚಿವ ಸ್ಥಾನ ನೀಡಬೇಕು. ಲಿಂಬಾವಳಿ ಮುಖ್ಯಮಂತ್ರಿ ಸ್ಥಾನ ಪಡೆಯುವ ಎಲ್ಲಾ ಲಕ್ಷಣಗಳು ಹೊಂದಿರುವ ಅರ್ಹ ವ್ಯಕ್ತಿ. ಅವರಿಗೆ ಕನಿಷ್ಠ ಮಂತ್ರಿ ಸ್ಥಾನ ಕೂಡ ನೀಡದೆ ದಲಿತ ಶಾಸಕರಿಗೆ ಅನ್ಯಾಯ ಮಾಡಲಾಗಿದೆ ಎಂದು ದೂರಿದರು.

ಕೆಆರ್​ಎಸ್​ನ ಕಾರ್ಮಿಕ ರಾಜ್ಯಾಧ್ಯಕ್ಷ ಕನ್ನಲ್ಲಿ‌ ಕೃಷ್ಣಪ್ಪ ಮಾತನಾಡಿ, ಬಡವರಿಗೆ ನಿವೇಶನ ನೀಡುವಂತೆ ಸರ್ಕಾರಕ್ಕೆ ಹದಿನಾರು ವರ್ಷಗಳಿಂದ ಮನವಿ ಪತ್ರ ಸಲ್ಲಿಸಿದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಈಗ ಆಡಳಿತ ನಡೆಸುತ್ತಿರುವ ಸರ್ಕಾರ ಜನವಿರೋಧಿ ಸರ್ಕಾರ. ಬಡವರ ಬಗ್ಗೆ ಕಿಂಚಿತ್ತೂ ಕಾಳಜಿ ಹೊಂದಿಲ್ಲ. ಉದ್ಯೋಗ ಇಲ್ಲದೆ ನಿರುದ್ಯೋಗ ತಾಂಡವವಾಡುತ್ತಿದೆ. ಸರ್ಕಾರದ ಅರ್ಥಿಕ ಪರಿಸ್ಥಿತಿ ಸರಿಯಾಗಿಲ್ಲ. ಈ ಸರ್ಕಾರದಿಂದ ಬಡಜನರಿಗೆ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ. ಶ್ರೀಮಂತರ ಕೆಲಸಗಳು ಸುಲಲಿತವಾಗಿ ನಡೆಯುತ್ತಿದೆ. ಆದರೆ ಬಡ ಜನರಿಗೆ ಕೊರೊನಾ ನೆಪವೊಡ್ಡಲಾಗುತ್ತಿದೆ ಎಂದು ದೂರಿದರು.

ABOUT THE AUTHOR

...view details