ಬೆಂಗಳೂರು: ಗ್ರಾಮಾಂತರ ಜಿಲ್ಲೆಯ ವೆಂಕಟಗಿರಿ ಗ್ರಾಮದಲ್ಲಿ 12 ಎಕರೆ ಆಸ್ತಿಗಾಗಿ ಸೊಸೆಗೆ ವಿಷ ಕುಡಿಸಿ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ.
ಆಸ್ತಿಗಾಗಿ ಸೊಸೆಗೆ ವಿಷ ಉಣಿಸಿದ್ರಾ?... ಮನೆ ಮುಂದೆ ಶವ ಇಟ್ಟು ಪೋಷಕರ ಪ್ರತಿಭಟನೆ - ಮನೆ ಮುಂದೆ ಶವ ಇಟ್ಟು ಪೋಷಕರ ಪ್ರತಿಭಟನೆ
ತಾಲೂಕಿನ ವೆಂಕಟಗಿರಿಕೋಟೆ ಗ್ರಾಮದಲ್ಲಿ ಸರೋಜಮ್ಮ ಎಂಬುವರು ಮೃತಪಟ್ಟಿದ್ದಾರೆ. ಇದೇ ಗ್ರಾಮದ ಮೃತಳ ಮಾವ ಚಿಕ್ಕಕೆಂಪಯ್ಯ, ಅತ್ತೆ ಸರಸ್ವತಮ್ಮ, ಭಾವ ಶಾಂತಕುಮಾರ್ ಹಾಗೂ ಆತನ ಸುನಿತಾ ಈ ಕೃತ್ಯ ವಿಷ ಉಣಿಸಿ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವೆಂಕಟಗಿರಿಕೋಟೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಸರೋಜಮ್ಮ ಎಂಬುವರು ಮೃತಪಟ್ಟಿದ್ದಾರೆ. ಇದೇ ಗ್ರಾಮದ ಮೃತಳ ಮಾವ ಚಿಕ್ಕಕೆಂಪಯ್ಯ, ಅತ್ತೆ ಸರಸ್ವತಮ್ಮ, ಭಾವ ಶಾಂತಕುಮಾರ್ ಹಾಗೂ ಆತನ ಸುನಿತಾ ಈ ಕೃತ್ಯ ವಿಷ ಉಣಿಸಿ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಸಂಬಂಧ ಸೂಕ್ತ ನ್ಯಾಯ ಒದಗಿಸಬೇಕು ಎಂದು ಮೃತಳ ಪೋಷಕರು ಚಿಕ್ಕಕೆಂಪಯ್ಯನ ಮನೆ ಮುಂದೆ ಮೌನ ಪ್ರತಿಭಟನೆ ಮಾಡುತ್ತಿದ್ದಾರೆ. ಕಳೆದ ಮಂಗಳವಾರ ಸರೋಜಮ್ಮ ವಿಷ ಸೇವಿಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ನಿನ್ನೆ ಸಂಜೆ ಸರೋಜಮ್ಮ ಸಾವನ್ನಪ್ಪಿದ್ದಾರೆ.ಈ ಕುರಿತು ವಿಜಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.