ಬೆಂಗಳೂರು:ಯಲಹಂಕ ತಾಲೂಕಿನಲ್ಲಿ ಅನಧಿಕೃತ ಒತ್ತುವರಿ ಜಮೀನನ್ನು ತೆರವುಗೊಳಿಸುವ ಕಾರ್ಯಾಚರಣೆ ತಾಲೂಕು ದಂಡಾಧಿಕಾರಿಗಳ ನೇತೃತ್ವದಲ್ಲಿ ನಡೆಯಿತು.
ಯಲಹಂಕದಲ್ಲಿ 60 ಕೋಟಿ ರೂ. ಮೌಲ್ಯದ ಸರ್ಕಾರಿ ಜಮೀನು ಒತ್ತುವರಿ ತೆರವು! - ಯಲಹಂಕ ತಾಲೂಕಿನಲ್ಲಿ ಜಮೀನು ತೆರವು
ಬೆಂಗಳೂರಿನ ಯಲಹಂಕ ತಾಲೂಕಿನಲ್ಲಿ ಕಾರ್ಯಾಚರಣೆ ನಡೆಸಿ 30 ಎಕರೆ ಅನಧಿಕೃತ ಒತ್ತುವರಿ ಜಮೀನನ್ನು ತೆರವುಗೊಳಿಸಲಾಯ್ತು.
ತೆರವು ಕಾರ್ಯಾಚರಣೆಯಲ್ಲಿ ಒತ್ತುವರಿಯಾಗಿದ್ದ 60 ಕೋಟಿ ಮೌಲ್ಯದ 30 ಎಕರೆ ಸರ್ಕಾರಿ ಜಮೀನನ್ನು ಮತ್ತೆ ವಶಕ್ಕೆ ಪಡೆದುಕೊಳ್ಳಲಾಯ್ತು. ತಾಲೂಕಿನ ಬಾಗಲೂರು, ಉತ್ತನಹಳ್ಳಿ, ಬಿಲ್ಲಮಾರನಹಳ್ಳಿ ಮತ್ತು ಬೈಪನಹಳ್ಳಿಯಲ್ಲಿ ಒತ್ತುವರಿಯಾಗಿದ್ದ ಜಮೀನನ್ನು ತೆರವುಗೊಳಿಸಿದ ಜಮೀನಿನಲ್ಲಿ ಜೆಸಿಬಿಯ ಸಹಾಯದಿಂದ ಸರ್ಕಾರಿ ಬೋರ್ಡ್ ಹಾಕಲಾಯ್ತು. ಕೆಲವು ರೈತರು ಮತ್ತು ಕೆಲ ಪ್ರಭಾವಿಗಳು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಅವರಿಗೆ ನೋಟಿಸ್ ನೀಡಿ ಬಳಿಕ ವಶಪಡಿಸಿಕೊಳ್ಳಲಾಗುವುದು ಎಂದು ತಹಶೀಲ್ದಾರರು ತಿಳಿಸಿದ್ರು. ಕೆಲವು ಲೇಔಟ್ಗಳು ಅಕ್ರಮವಾಗಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿವೆ. ಆದ್ದರಿಂದ ಸರ್ಕಾರಿ ಜಮೀನನ್ನು ರಕ್ಷಣೆ ಮಾಡುವ ಮೂಲಕ ಒತ್ತುವರಿದಾರರಿಂದ ವಶಕ್ಕೆ ಪಡೆದುಕೊಳ್ಳಲಾಗುತ್ತದೆ ಎಂದು ಬೆಂಗಳೂರು ನಗರ ಜಿಲ್ಲೆಯ ಎಸಿ ದಯಾನಂದ ಬಂಡಾರಿ ತಿಳಿಸಿದ್ರು.