ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನ ಪ್ರಸಿದ್ಧ ಸ್ಥಳದಲ್ಲಿ ಲಾಲ್ಬಾಗ್ ಕೂಡ ಒಂದು. ಕೊರೊನಾ ಹಿನ್ನೆಲೆ ಒಂದೂವರೆ ತಿಂಗಳ ಬಳಿಕ ಈಗ ಸಾರ್ವಜನಿಕರಿಗೆ ಮುಕ್ತವಾಗಿದೆ.
ಸಾರ್ವಜನಿಕರಿಗೆ ಮುಕ್ತವಾದ ಲಾಲ್ಬಾಗ್: ಪ್ರವೇಶಕ್ಕೆ ಮಾಸ್ಕ್ ಕಡ್ಡಾಯ - bangalore news
ಕೊರೊನಾ ಹರಡುವಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಲಾಲ್ಬಾಗ್ಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಲಾಕ್ಡೌನ್ 4.0 ಜಾರಿಯಾದ ಬಳಿಕ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಳಿಸಲಾಗಿದೆ.
ಸಾರ್ವಜನಿಕರಿಗೆ ಮುಕ್ತವಾದ ಲಾಲ್ಬಾಗ್
ಕೊರೊನಾ ಹರಡುವಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಲಾಲ್ಬಾಗ್ಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಲಾಕ್ಡೌನ್ 4.0 ಜಾರಿಯಾದ ಬಳಿಕ ಪ್ರವೇಶಮುಕ್ತಗೊಳಿಸಲಾಗಿದೆ.
ನಗರದ ಭಾಗಶಃ ಪಾರ್ಕ್ಗಳು ಬೆಳಗ್ಗೆ 7 ಗಂಟೆಯಿಂದ ತೆರೆದಿವೆ. ಇನ್ನು ಲಾಲ್ಬಾಗ್ಗೆ ಸಾರ್ವಜನಿಕರು ಭೇಟಿ ನೀಡುತ್ತಿದ್ದು, ಒಳಗೆ ಎಂಟ್ರಿ ಕೊಡಬೇಕು ಅಂದ್ರೆ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಥರ್ಮಲ್ ಸ್ಕ್ರೀನಿಂಗ್ ಮಾಡಿ, ರೋಗ ಲಕ್ಷಣಗಳ ಪರೀಕ್ಷೆ ನಂತರವೇ ಒಳಗೆ ಬಿಡಲಾಗುತ್ತಿದೆ.ಜೊತೆಗೆ ಸ್ವಚ್ಛತೆ ದೃಷ್ಟಿಯಿಂದ ಕೈಗಳಿಗೆ ಸ್ಯಾನಿಟೈಸರ್ ಕೂಡ ಹಾಕಲಾಗುತ್ತದೆ.
Last Updated : May 19, 2020, 12:06 PM IST