ಬೆಂಗಳೂರು:ಸ್ವಾತಂತ್ರ್ಯೋತ್ಸವದ ಅಂಗವಾಗಿ ಲಾಲ್ ಬಾಗ್‌ನಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನದ ಕಡೆಯ ದಿನವಾದ ಇಂದು ಜನರು ಮುಗಿಬಿದ್ದು ವೀಕ್ಷಿಸಿದರು. ಅನೇಕರು ಮಕ್ಕಳೊಂದಿಗೆ ಕುಟುಂಬಸಮೇತರಾಗಿ ಆಗಮಿಸಿದ್ದರು. ಸರ್ಕಾರಿ ರಜೆ ಮತ್ತು ಕೊನೆಯ ದಿನವಾದ ಕಾರಣಕ್ಕೆ ಫ್ಲವರ್ ಶೋ ತುಂಬಿ ತುಳುಕುತ್ತಿತ್ತು.
ಡಾ.ರಾಜ್ ಕುಮಾರ್ ಅವರ ಗಾಜನೂರು ಮನೆ, ಪುನೀತ್ ನಡೆಸುತ್ತಿದ್ದ ಆಶ್ರಮ ಈ ಸಲದ ಫ್ಲವರ್ ಶೋ ವಿಶೇಷತೆಯಾಗಿದೆ. ಈ ಎರಡು ಕಟ್ಟಡಗಳ ಪ್ರತಿಕೃತಿಯನ್ನು ಸಂಪೂರ್ಣವಾಗಿ ಹೂಗಳಿಂದಲೇ ನಿರ್ಮಿಸಲಾಗಿತ್ತು. ಕಳೆದ ಒಂಬತ್ತು ದಿನಗಳಿಂದ 10 ಲಕ್ಷಕ್ಕೂ ಹೆಚ್ಚು ಜನರು ಪ್ರದರ್ಶನ ವೀಕ್ಷಿಸಿದ್ದಾರೆ. ಇಂದು ಒಂದೇ ದಿನ 2 ಲಕ್ಷಕ್ಕೂ ಅಧಿಕ ಜನ ಭೇಟಿ ಕೊಟ್ಟಿದ್ದಾರೆ.