ಕರ್ನಾಟಕ

karnataka

ETV Bharat / state

ಲಾಲ್​​​​​ಬಾಗ್ ಫಲಪುಷ್ಪ ಪ್ರದರ್ಶನ: ಮೆಟ್ರೋ ಟಿಕೆಟ್ ದರದಲ್ಲಿ ರಿಯಾಯಿತಿ, ಪೇಪರ್ ಟಿಕೆಟ್ ಲಭ್ಯ

ಲಾಲ್ ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಭೇಟಿ ಕೊಡುವ ಮೆಟ್ರೋ ಪ್ರಯಾಣಿಕರಿಗೆ ಮೂರು ದಿನ ಟಿಕೆಟ್ ದರದಲ್ಲಿ ರಿಯಾಯಿತಿ ನೀಡಲಾಗಿದೆ.

Discount in Metro Ticket Fare
ಮೆಟ್ರೋ ಟಿಕೆಟ್ ದರದಲ್ಲಿ ರಿಯಾಯಿತಿ

By

Published : Aug 12, 2022, 7:53 AM IST

ಬೆಂಗಳೂರು: ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಹಿನ್ನೆಲೆ ಆಯೋಜನೆಗೊಂಡಿರುವ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಭೇಟಿ ಕೊಡುವ ಮೆಟ್ರೋ ಪ್ರಯಾಣಿಕರಿಗೆ ಮೂರು ದಿನ ಟಿಕೆಟ್ ದರದಲ್ಲಿ ರಿಯಾಯಿತಿ ನೀಡಲಾಗಿದ್ದು, ದರ 30 ರೂ.ಗೆ ನಿಗದಿ ಮಾಡಲಾಗಿದೆ.

ಪೇಪರ್ ಟಿಕೆಟ್ : ಆ.13 ರಿಂದ ಆ.15ರ ವರೆಗೆ ಮೂರು ದಿನ ರಿಟರ್ನ್ ಜರ್ನಿಗಾಗಿ ಪೇಪರ್ ಟಿಕೆಟ್ ಕೊಡಲಾಗುವುದು. ಆ ದಿನ ಬೆಳಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಲಾಲ್‌ಬಾಗ್ ಮೆಟ್ರೋ ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಲು ಟಿಕೆಟ್ ದರವನ್ನು ರೂ.30ಗೆ ನಿಗದಿಪಡಿಸಲಾಗಿದೆ. ಜೊತೆಗೆ ಪೇಪರ್ ಟಿಕೆಟ್ ಆ ದಿನದ ಒಂದು ಪ್ರಯಾಣಕ್ಕೆ, ಲಾಲ್‌ಬಾಗ್​ನಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಲು ಮಾನ್ಯವಾಗಿರುತ್ತದೆ.

ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಮೂರು ದಿನ ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪೇಪರ್ ಟಿಕೆಟ್‌ಗಳನ್ನು ಖರೀದಿಸಬಹುದಾಗಿದೆ. ಲಾಲ್‌ಬಾಗ್ ಮೆಟ್ರೋ ನಿಲ್ದಾಣದಲ್ಲಿ ಈ ಸದರಿ ಪೇಪರ್ ಟಿಕೆಟ್ ರಾತ್ರಿ 8 ಗಂಟೆಯವರೆಗೆ ಲಭ್ಯವಿರುತ್ತದೆ. ಎಲ್ಲ ಮೆಟ್ರೋ ಪ್ರಯಾಣಿಕರು ತ್ವರಿತ ಪ್ರಯಾಣಕ್ಕಾಗಿ ರಿಟರ್ನ್ ಜರ್ನಿ ಪೇಪರ್ ಟಿಕೆಟ್​​​ಗಳನ್ನು ಬಳಸಬೇಕು ಮತ್ತು ಲಾಲ್‌ಬಾಗ್ ನಿಲ್ದಾಣದಲ್ಲಿ ಪ್ರವೇಶಿಸಲು ಮತ್ತು ಯಾವುದೇ ನಿಲ್ದಾಣದಿಂದ ನಿರ್ಗಮಿಸಲು ಪೇಪರ್‌ ಟಿಕೆಟ್‌ನ್ನು ಹಾಜರಿಪಡಿಸಬೇಕು.

ಇದನ್ನೂ ಓದಿ:ಮಂಗಳೂರಿನಲ್ಲಿ ಸೂರ್ಯನಿಗೊಂದು ದೇವಸ್ಥಾನ: ಕಣ್ಮನ ಸೆಳೆಯುವ ಕೆತ್ತನೆಯ ವೈಭವ

ಯಾವುದೇ ನಿಲ್ದಾಣದಿಂದ ಲಾಲ್‌ಬಾಗ್ ನಿಲ್ದಾಣಕ್ಕೆ ಪ್ರಯಾಣಿಸಲು ಚಾಲ್ತಿಯಲ್ಲಿ ಇರುವ ದರದಲ್ಲಿ ಟೋಕನ್ ಮತ್ತು ಸ್ಮಾರ್ಟ್ ಕಾರ್ಡ್​​​​ಗಳನ್ನು ಬಳಸಿ ಪಯಾಣಿಸಬೇಕಾಗುತ್ತದೆ. ಸ್ಮಾರ್ಟ್ ಕಾರ್ಡ್ ಪ್ರಯಾಣಕ್ಕೆ ಚಾಲ್ತಿಯಲ್ಲಿರುವ ರಿಯಾಯಿತಿ ದರವು ಅನ್ವಯವಾಗುತ್ತದೆ.

ABOUT THE AUTHOR

...view details