ಬೆಂಗಳೂರು: ರೌಡಿ ಲಕ್ಷ್ಮಣ ಕೊಲೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು ಮಂಡ್ಯ, ಮದ್ದೂರು ರಾಮನಗರ, ಚನ್ನಪಟ್ಟಣ ಸೇರಿದಂತೆ ಆ ಭಾಗದ ರೌಡಿಗಳನ್ನು ಕರೆಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಲಕ್ಷ್ಮಣ ಕೊಲೆ ಕೇಸ್: ಕೋತಿ ರಾಮ ಸೇರಿದಂತೆ ಮಂಡ್ಯ ಭಾಗದ ರೌಡಿಗಳ ವಿಚಾರಣೆ - ಸಿಸಿಬಿ ಪೊಲೀಸರು
ರೌಡಿ ಲಕ್ಷ್ಮಣ ಕೊಲೆಗೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಮಂಡ್ಯ ಭಾಗದಲ್ಲಿರುವ ರೌಡಿಗಳನ್ನು ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಕೇಸ್ನಲ್ಲಿ ಕೋತಿರಾಮನ ಹೆಸರು ಕೇಳಿ ಬಂದ ಕಾರಣ, ಅವನ ವಿಚಾರಣೆ ನಡೆಸಿದ್ದಾರೆ.
ಕೊಲೆಯಾದ ಲಕ್ಷ್ಮಣ
ಲಕ್ಷ್ಮಣ ಕೊಲೆ ಕೇಸ್ನಲ್ಲಿ ಕೋತಿರಾಮನ ಹೆಸರು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಕೋತಿರಾಮನನ್ನು ಸಿಸಿಬಿಗೆ ಕರೆಸಿ ನಿನ್ನೆ ಸಂಜೆ ಸುಮಾರು ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.
ಲಕ್ಷ್ಮಣ ಕೊಲೆ ಪ್ರಕರಣದಲ್ಲಿ ಮತ್ತೆ ಯಾರ್ಯಾರ ಕೈವಾಡವಿದೆಯೋ ಅವರೆನೆಲ್ಲಾ ಕರೆಸಿ ವಿಚಾರಣೆ ನಡೆಸಿದ್ದು, ಈಗಾಗಲೇ ಎಂಟು ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.