ಬೆಂಗಳೂರು: ನೇಣು ಬಿಗಿದುಕೊಂಡು ನವ ವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸುಬ್ರಹ್ಮಣ್ಯನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಂಜು (26) ಆತ್ಮಹತ್ಯೆಗೆ ಶರಣಾದ ಮಹಿಳೆ. ಚಿಕ್ಕಮಗಳೂರು ಜಿಲ್ಲೆಯ ಬೋಳನಹಳ್ಳಿಯ ಮೂಲದ ಅಂಜು ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಅಗಿ ಕೆಲಸ ಮಾಡುತ್ತಿದ್ದರು.
4 ತಿಂಗಳ ಹಿಂದೆ ಪ್ರೇಮ ವಿವಾಹ: ಬೆಂಗಳೂರಿನಲ್ಲಿ ಯುವತಿ ಆತ್ಮಹತ್ಯೆ - ಆತ್ಮಹತ್ಯೆ
ನವ ವಿವಾಹಿತೆ ಅಂಜು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸುಬ್ರಹ್ಮಣ್ಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನಲ್ಲಿ ನೇಣಿಗೆ ಶರಣಾದ ನವ ವಿವಾಹಿತೆ
ನಾಲ್ಕು ತಿಂಗಳ ಹಿಂದೆ ಪೋಷಕರ ಸಮ್ಮತಿಯೊಂದಿಗೆ ಪ್ರೀತಿಸಿದ್ದ ಅಂಜನ್ ಕಣಿಯಾರ್ ಎಂಬುವವರ ಜೊತೆ ವಿವಾಹ ಮಾಡಿಕೊಂಡಿದ್ದರು. ನಿನ್ನೆ ಸಂಜೆ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಮನೆಯ ರೂಮಿನ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಜೆ ಪತಿ ಬಂದು ರೂಮಿನ ಒಳ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಸ್ಥಳ ಪರಿಶೀಲನೆ ನಡೆಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ:ಲಂಚ ಪಡೆಯುತ್ತಿದ್ದ ಇಎಸ್ಐ ಆಸ್ಪತ್ರೆಯ ಹಿರಿಯ ಫಾರ್ಮಸಿಸ್ಟ್ ಎಸಿಬಿ ಬಲೆಗೆ