ಬೆಂಗಳೂರು: ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಗಲಭೆ ನಡೆಸಿದ ಆರೋಪಿಗಳನ್ನು ಮಟ್ಟ ಹಾಕುವ ಕೆಲಸ ಬಿರುಸಿನಿಂದ ಸಾಗುತ್ತಿದೆ. ಇತ್ತ ಪೊಲೀಸರಿಗೆ ಪ್ರಮುಖ ವ್ಯಕ್ತಿಗಳ ಮೊಬೈಲ್ ರಿಟ್ರೀವ್ ಮಾಡಲು ಹಿನ್ನೆಡೆಯಾಗ್ತಿದೆ. ಗೌರಿ ಲಂಕೇಶ್ ಹತ್ಯೆ ನಡೆದಾಗ ಪ್ರಮುಖ ಆರೋಪಿಗಳನ್ನು ಬಂಧಿಸಲು ಸಹಾಯಕವಾದ ಮಡಿವಾಳದ ಎಫ್ಎಸ್ಎಲ್ ತಂಡ ಸದ್ಯ ಡಿ.ಜೆ.ಹಳ್ಳಿ ಗಲಭೆ ಪ್ರಕರಣದಲ್ಲಿ ಹಿನ್ನೆಡೆ ಕಂಡಿದೆ.
ಗಲಭೆ ಸಂಬಂಧ ಕಾಂಗ್ರೆಸ್ ಕಾರ್ಪೋರೇಟರ್ ಹಾಗು ಮಾಜಿ ಮೇಯರ್ ಸಂಪತ್ ರಾಜ್, ಜಾಕೀರ್ ಹುಸೇನ್ ಹಾಗೂ ಸಂಪತ್ ಪಿಎ ಅರುಣ್ ಮೊಬೈಲನ್ನು ಜಪ್ತಿ ಮಾಡಲಾಗಿದೆ. ಜಪ್ತಿ ಮಾಡಿ ಆರೋಪಿಗಳ ಜೊತೆ ಇವರು ಹೇಗೆ ಸಂಪರ್ಕ ಹೊಂದಿದ್ದರು?. ಯಾರಿಗೆಲ್ಲಾ ವಾಟ್ಸ್ ಆ್ಯಪ್ ಮೂಲಕ ಹಾಗೂ ಕರೆ ಮೂಲಕ ಸಂಪರ್ಕಿಸಿದ್ಧಾರೆ ಎಂಬೆಲ್ಲಾ ಮಾಹಿತಿ ಕಲೆಹಾಕಲು ತಯಾರಿ ನಡೆಸಲಾಗುತ್ತಿದೆ.