ಬೆಂಗಳೂರು: ನಾಗರಿಕರ ಜಂಘಾಬಲವನ್ನೇ ಕಸಿದುಕೊಂಡಿರುವ ಕೊರೊನಾ ಸೋಂಕಿನಿಂದ ಪ್ರಪಂಚವೇ ಆತಂಕಗೊಂಡಿದೆ. ಇದರ ಕರಿನೆರಳು ಅಗತ್ಯ ಆಹಾರ ಪದಾರ್ಥ ಸಾಗಣೆ ಮಾಡುವ ಲಾರಿ ಚಾಲಕರ ಮೇಲೂ ಬಿದ್ದಿದೆ. ಇದರಿಂದ ನಿಗದಿತ ವೇಳೆಗೆ ಅಗತ್ಯ ವಸ್ತುಗಳನ್ನು ಸಾಗಿಸಲು ಹರಸಾಹಸ ಪಡುವಂತಾಗಿದೆ ಎಂದು ರಾಜ್ಯ ಸರಕು ಸಾಗಣೆ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಬಿ.ಚನ್ನಾರೆಡ್ಡಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರಕು ಮಾಲೀಕರ ಸಂಘದ ಅಧ್ಯಕ್ಷ ಬಿ.ಚೆನ್ನಾರೆಡ್ಡಿ ಅಗತ್ಯ ಸೇವೆಗಳ ಪೂರೈಕೆಗೆ ಯಾವುದೇ ನಿರ್ಬಂಧಗಳಿಲ್ಲ. ಆದರೆ ಸಾಮಗ್ರಿಗಳನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸುವ ಲಾರಿ ಚಾಲಕರ ಕೊರೆತೆ ಇದೆ. ಹೀಗಾಗಿ ತರಕಾರಿ, ದಿನಸಿ ಸಾಗಿಸುವಲ್ಲಿ ವಿಳಂಬವಾಗುತ್ತಿದೆ ಎಂದು ಹೇಳಿದರು.
ದುಪ್ಪಟ್ಟು ಹಣ ಕೊಟ್ಟರೂ ಲಾರಿ ಚಾಲಕರು ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ.
ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಲಾರಿಗಳ ಚಾಲಕರೂ ಊರುಗಳಿಗೆ ತೆರಳಿದ್ದು, ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದು ಪೆಟ್ರೋಲ್ ಟ್ಯಾಂಕರ್ ಮಾಲೀಕರ ಸಂಘದ ಅಧ್ಯಕ್ಷ ಶ್ರೀರಾಮ್ ತಿಳಿಸಿದ್ದಾರೆ.
ಸದ್ಯ ಸರಕು ಸಾಗಣೆ ಲಾರಿ ಸಂಚಾರ ಹೇಗಿದೆ?
ಒಟ್ಟು ಸರಕು ಲಾರಿಗಳು- 7 ಲಕ್ಷ
ಲಾರಿ ಚಾಲಕರ ಕೊರತೆ- ಶೇ. 80-90
ಸದ್ಯ ರಾಜ್ಯದಲ್ಲಿ ಲಾರಿ ಸಂಚಾರ- 400-500
ಬೆಂಗಳೂರಲ್ಲಿ ಸರಕು ಸಾಗಣೆ ಲಾರಿ ಸಂಚಾರ- 60-80
ಪೆಟ್ರೋಲ್, ಎಲ್‌ಪಿಜಿ ಲಾರಿ ಸಂಚಾರ ಹೇಗಿದೆ?:
ಬೆಂ.ಜಿಲ್ಲೆಯಲ್ಲಿ ಎಲ್‌ಪಿಜಿ ಲಾರಿ ಸಂಚಾರ-400
ಈ ಪೈಕಿ ಲಾರಿ ಚಾಲಕರ ಕೊರತೆ- ಶೇ. 30-40
ಸ್ಥಗಿತವಾದ ವಾಣಿಜ್ಯ ಎಲ್‌ಪಿಜಿ ಲಾರಿ- 50-60
ಪೆಟ್ರೋಲ್, ಡೀಸೆಲ್ ಲಾರಿಗಳು- 400
ಈ ಪೈಕಿ ಚಾಲಕರ ಕೊರತೆ- 150-200