ಬೆಂಗಳೂರು : ಲಾಕ್ಡೌನ್ ನಿಯಮಗಳನ್ನು ಸಡಿಲಿಕೆ ಮಾಡಿದ ಸರ್ಕಾರ, ಕೈಗಾರಿಕೆಗಳನ್ನು ಪ್ರರಂಭಿಸಲು ಹಸಿರು ನಿಶಾನೆ ತೋರಿದೆ. ಆದರೆ, ವಲಸೆ ಕಾರ್ಮಿಕರು ಊರುಗಳಿಗೆ ತೆರಳಿರುವುದರಿಂದ ಕೈಗಾರಿಕೆಗಳಲ್ಲಿ ಕಾರ್ಮಿಕರ ಕೊರತೆ ಹೆಚ್ಚಾಗಿದೆ.
ವಲಸೆ ಕಾರ್ಮಿಕರನ್ನು ತಮ್ಮ ಸ್ವಂತ ಊರಿಗೆ ತೆರಳಲು ಅವಕಾಶ ಕಲ್ಪಿಸಿದ್ದು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಕಾರ್ಮಿಕರಿಲ್ಲದೇ ಉತ್ಪಾದನೆ ಮಾಡುವುದು ಅಸಾಧ್ಯವಾಗಿದೆ. ಸದ್ಯ ಪೀಣ್ಯ, ಕಾಮಾಕ್ಷಿಪಾಳ್ಯ, ರಾಜಾಜಿನಗರ, ಬಿಡದಿ ಪ್ರದೇಶಗಳಲ್ಲಿ ಶೇಕಡ 25 ರಿಂದ 30 ರಷ್ಟು ಕೈಗಾರಿಕೆಗಳು ಮಾತ್ರ ಪ್ರಾರಂಭಗೊಂಡಿವೆ. ಈ ಕೈಗಾರಿಕೆಗಳಲ್ಲಿ ಶೇ 30 ರಷ್ಟು ಕಾರ್ಮಿಕರು ಮಾತ್ರ ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಇಷ್ಟಲ್ಲದೇ ಊರಿಗೆ ತೆರಳಿದ ಕಾರ್ಮಿಕರು 14 ದಿನ ಕ್ಯಾರಂಟೈನ್ನಲ್ಲಿ ಇಡಬೇಕು ಹೀಗಾದರೆ ಕೈಗಾರಿಕೆಗಳನ್ನು ನಡೆಸುವುದು ಕಷ್ಟ ಎಂದು ಕಾಸಿಯಾ ಸಂಘದ ಅಧ್ಯಕ್ಷ ರಾಜು ಬೇಸರ ವ್ಯಕ್ತಪಡಿಸಿದ್ದಾರೆ.