ಕರ್ನಾಟಕ

karnataka

ETV Bharat / state

ಕಾರ್ಮಿಕರ ಸಂಘ ಕಟ್ಟಿದ್ದರ ಪರಿಣಾಮ ಕೆಲಸದಿಂದ ಹೊರ ಹಾಕಿದ ಕಾರ್ಖಾನೆ ವಿರುದ್ಧ ಪ್ರತಿಭಟನೆ - ಕಾರ್ಮಿಕ ವಿರೋಧಿ‌ ನೀತಿ

ಆನೇಕಲ್ - ಇಂಡ್ಲವಾಡಿ ಮುಖ್ಯರಸ್ತೆಯಲ್ಲಿರುವ ಸ್ಟ್ರೈಡ್ಸ್ ಫಾರ್ಮಾ ಕಾರ್ಖಾನೆ ಮುಂಭಾಗ ಮುಂಜಾನೆ 5 ಗಂಟೆಯಿಂದ ಧರಣಿ ಕುಳಿತ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ದರ್ಪದ ವಿರುದ್ದ ದಿಕ್ಕಾರ ಕೂಗಿದ್ದಾರೆ.

ಕೆಲಸದಿಂದ ಹೊರ ಹಾಕಿದ ಕಾರ್ಖಾನೆ ವಿರುದ್ದ ಪ್ರತಿಭಟಿಸಿದ ಕಾರ್ಮಿಕರು
ಕೆಲಸದಿಂದ ಹೊರ ಹಾಕಿದ ಕಾರ್ಖಾನೆ ವಿರುದ್ದ ಪ್ರತಿಭಟಿಸಿದ ಕಾರ್ಮಿಕರು

By

Published : Sep 13, 2022, 9:45 PM IST

ಬೆಂಗಳೂರು:ಕಾರ್ಮಿಕರ ಸಂಘ ಕಟ್ಟಿದ್ದರ ಪರಿಣಾಮ ಕೆಲಸದಿಂದ ಹೊರ ಹಾಕಿದ ಕಾರ್ಖಾನೆ ವಿರುದ್ದ ಬೆಳ್ಳಂಬೆಳಗ್ಗೆ ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.

ಆನೇಕಲ್ - ಇಂಡ್ಲವಾಡಿ ಮುಖ್ಯರಸ್ತೆಯಲ್ಲಿರುವ ಸ್ಟ್ರೈಡ್ಸ್ ಫಾರ್ಮಾ ಕಾರ್ಖಾನೆ ಮುಂಭಾಗ ಮುಂಜಾನೆ 5 ಗಂಟೆಯಿಂದ ಧರಣಿ ಕುಳಿತ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ದರ್ಪದ ವಿರುದ್ದ ದಿಕ್ಕಾರ ಕೂಗಿದ್ದಾರೆ.

ಸರಿ ಸುಮಾರು 57 ಮಂದಿಯಲ್ಲಿ 28 ಮಹಿಳೆಯರನ್ನೂ ಒಳಗೊಂಡಂತೆ ಕಾರ್ಮಿಕರನ್ನು ಹೊರ ಹಾಕಿದ್ದು, ಈ ಕುರಿತಂತೆ ಕಾರ್ಮಿಕ ಇಲಾಖೆಯ ಮೆಟ್ಟಿಲನ್ನು ಕಾರ್ಮಿಕರು ಹತ್ತಿದ್ದಾರೆ. ವಿಚಾರಣೆಯಲ್ಲಿ ಕೆಲಸಕ್ಕೆ ತೆಗೆದುಕೊಳ್ಳುತ್ತೇವೆ ಎಂದು ಹೇಳಿ ಹೊರ ಬಂದ ನಂತರ ಈವರೆಗೆ ಕಾರ್ಖಾನೆ ಒಳಗಡೆ ಬಿಟ್ಟುಕೊಳ್ಳದೇ ಸತಾಯಿಸುತ್ತಿದ್ದಾರೆ.

ಗುತ್ತಿಗೆ ಆಧಾರದಲ್ಲಿ ಕಾರ್ಮಿಕರನ್ನು ನೇಮಿಸಿಕೊಂಡು ಹತ್ತು ಹಲವು ಕಾರ್ಮಿಕ ವಿರೋಧಿ‌ ನೀತಿಗಳನ್ನು ಅನುಸರಿಸುತ್ತಿದ್ದ ಕಾರ್ಖಾನೆಯ ನಡವಳಿಕೆ ವಿರುದ್ದ ಕಾರ್ಮಿಕ ಸಂಘಟನೆಯನ್ನು ಕಟ್ಟಿಕೊಂಡಿದ್ದೇ ಹೊಟ್ಟೆಪಾಡಿನ ಕೂಲಿಗೆ ಕಂಟಕ ಬಂದು ಕಾರ್ಮಿಕರು ಬೀದಿಗೆ ಬಿದ್ದಂತಾಗಿದೆ.

ಕೆಲಸದಿಂದ ಹೊರ ಹಾಕಿದ ಕಾರ್ಖಾನೆ ವಿರುದ್ದ ಪ್ರತಿಭಟಿಸಿದ ಕಾರ್ಮಿಕರು

ಕಳೆದ ಹತ್ತು ದಿನದಿಂದ ಕಾರಣವೂ ಕೊಡದೇ ಕಾರ್ಖಾನೆಯಲ್ಲಿನ ಎಲ್ಲ ಪ್ರವೇಶವನ್ನು ನಿರ್ಬಂದಿಸುವ ಮೂಲಕ ಕಾರ್ಮಿಕ ಹಕ್ಕುಗಳನ್ನು ಹತ್ತಿಕ್ಕಲಾಗುತ್ತಿದೆ ಎಂದು ಮಹಿಳಾ ಕಾರ್ಮಿಕರು ದೂರುತ್ತಿದ್ದಾರೆ.

ಕುಟುಂಬದಲ್ಲಿ ಮಹಿಳೆಯರೇ ದುಡಿಯುತ್ತಿದ್ದು, ಇದೀಗ ಕೆಲಸಕ್ಕೆ ಕುತ್ತು ಬಂದು ಕುಟುಂಬವೂ ಬೀದಿಗೆ ಬಿದ್ದಂತಾಗಿದೆ ಎಂದು ಅವಲತ್ತುಕೊಂಡಿದ್ದಾರೆ. ಇತ್ತ ಕಾರ್ಖಾನೆಯವರನ್ನ ಪ್ರತಿಕ್ರಿಯೆ ಕೇಳಿದ್ದಕ್ಕೆ ಉತ್ತರಿಸಲು ತಯಾರಿರಲಿಲ್ಲ. ಹೀಗಾಗಿ, ಕಾರ್ಮಿಕರು ಅನಿರ್ದಿಷ್ಟಾವಧಿಗೆ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.

ಆನೇಕಲ್ ಇನ್ಸ್​ಪೆಕ್ಟರ್​ ಮಧ್ಯಸ್ತಿಕೆಯಲ್ಲಿ ಕಾರ್ಖಾನೆ ಮಾಲೀಕರನ್ನು ಕರೆಸಿ ಮಾತುಕತೆ ನಡೆಸಿದ್ದು, ಮೂರು ದಿನ ಗಡುವು ಕೇಳಿದ ಬೆನ್ನಲ್ಲಿಯೇ ಹೋರಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಕಾರ್ಮಿಕ ಮುಖಂಡ ಸುರೇಶ್ ಅವರು ತಿಳಿಸಿದರು.

ಓದಿ:ಮಳೆಯಿಂದಾದ ಹಳ್ಳಕ್ಕೆ ಸಿಲುಕಿದ ಲಾರಿ - ಗುಂಡ್ಲುಪೇಟೆ ರಸ್ತೆಯಲ್ಲಿ 2 ತಾಸು ಟ್ರಾಫಿಕ್ ಕಿರಿಕಿರಿ

ABOUT THE AUTHOR

...view details