ಬೆಂಗಳೂರು: ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೋರ್ವ ಕಟ್ಟಡದಿಂದ ಕೆಳಗ್ಗೆ ಬಿದ್ದು ಸಾವ್ನನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ.
ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು
ನಿರ್ಮಾಣ ಹಂತದಲ್ಲಿರುವ ಕಟ್ಟಡವೊಂದರಿಂದ ವ್ಯಕ್ತಿವೋರ್ವ ಬಿದ್ದು ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ. ಭರತ್ ಮೃತ ಕಾರ್ಮಿಕ.
ಉತ್ತರ ಭಾರತ ಮೂಲದ ಭರತ್ ಮೃತ ಕಾರ್ಮಿಕ. ಹಲವು ತಿಂಗಳಿಂದ ಕೊಡಿಗೆಹಳ್ಳಿಯ ಬಳಿಯ ಮುಂಬೈ ಮೂಲದ ಪಾರ್ತ್ ಕನ್ಸ್ಟ್ರಕ್ಷನ್ ಹಾಗೂ ಡೆವಲಪರ್ಸ್ ವತಿಯಿಂದ ದೊಡ್ಡ ಮಟ್ಟದ ಅಪಾರ್ಟ್ಮೆಂಟ್ ನಿರ್ಮಾಣವಾಗುತ್ತಿತ್ತು. ಈ ಕಟ್ಟಡದಲ್ಲಿ ನೂರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದು, ಈ ವೇಳೆ ಕಟ್ಟಡದಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಭರತ್ ಎಂಬಾತ ಕಟ್ಟಡದಿಂದ ಬಿದ್ದು ಸಾವನ್ನಪ್ಪಿದ್ದಾನೆ.
ಕೆಲಸ ಮಾಡುವ ಜಾಗದಲ್ಲಿ ಸೂಕ್ತ ರಕ್ಷಣೆ ಇರಲಿಲ್ಲ ಎಂದು ಆರೋಪಿಸಿ ಅಲ್ಲಿನ ಸಿಬ್ಬಂದಿ ಕೆಲಸ ಮಾಡದಂತೆ ಆಗ್ರಹಿಸಿದ್ದಾರೆ. ಈ ಸಂಬಂಧ ಕೊಡಿಗೆಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.