ಕರ್ನಾಟಕ

karnataka

ETV Bharat / state

ಕಾರ್ಮಿಕ ದಿನಾಚರಣೆ ಶುಭಾಶಯ ಕೋರಿದ ಜೆಡಿಎಸ್ ಮುಖಂಡರು.. - Labor Day

ಇಂದಿ ಕಾರ್ಮಿಕರ ದಿನಾಚರಣೆ ಹಿನ್ನೆಲೆ ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ ಶುಭಾಶಯ ಕೋರಿದ್ದಾರೆ.

Labor Day wishes from JDS leaders
ಹೆಚ್​ ಡಿ ಕುಮಾರಸ್ವಾಮಿ

By

Published : May 1, 2020, 9:55 AM IST

ಬೆಂಗಳೂರು: ಇಂದು ಕಾರ್ಮಿಕರ ದಿನ ಹಿನ್ನೆಲೆ ಮಾಜಿ ಸಿಎಂ ಹಾಗೂ ಮಾಜಿ ಪಿಎಂ ಜನರಿಗೆ ಶುಭಾಶಯ ತಿಳಿಸಿದ್ದಾರೆ.

ಕೊರೊನಾ ಗಂಡಾಂತರಕಾರಿ ಪರಿಸ್ಥಿತಿಯಲ್ಲಿ ಕಾರ್ಮಿಕ ಬಂಧುಗಳ ಮೊಗದಲ್ಲಿ ನಗೆ ಮಾಸಿರುವುದು ವಾಸ್ತವ. ಕಂಡರಿಯದ ಈ ವಿಪತ್ತಿನ ಕಾಲವನ್ನು ಗೆದ್ದು ಬರುವ ದೃಢಸಂಕಲ್ಪ ಕಾರ್ಮಿಕರಲ್ಲಿ ಮನೆ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಸೋತಿರುವ ದುಡಿಯುವ ಕೈಗಳಿಗೆ ಹೊಸ ಚೈತನ್ಯ ಬರಲಿ. ಒಳ್ಳೆಯ ದಿನಗಳ ನಿರೀಕ್ಷೆಯಲ್ಲಿ ಈ ಬಾರಿಯ ಕಾರ್ಮಿಕ ದಿನಾಚರಣೆ ಎದುರುಗೊಳ್ಳೋಣ ಎಂದಿದ್ದಾರೆ. ಕಾರ್ಮಿಕರ ಭವಿಷ್ಯದ ಆತಂಕ ದೂರವಾಗಲಿ ಎಂದು ಎಲ್ಲರಿಗೂ ಕಾರ್ಮಿಕ ದಿನಾಚರಣೆಯ ಶುಭಾಶಯ ಕೋರಿದ್ದಾರೆ.

ದಕ್ಷತೆಯಿಂದ ಕೂಡಿದ ಕಾರ್ಮಿಕ ವರ್ಗ ದೇಶದ ಆರ್ಥಿಕತೆಗೆ ಬೆನ್ನೆಲುಬು.‌ ಆದರೆ, ಇಂದು ಮಹಾಮಾರಿ ಕೊರೊನಾದಿಂದ ಶ್ರಮಿಕ ವರ್ಗ ದುಡಿಯಲು ಸಾಧ್ಯವಾಗದೇ ಕಂಗಾಲಾಗಿದೆ. ಈ ಸಂಕಷ್ಟ ಬಗೆಹರಿದು ದುಡಿಯುವ ಕೈಗಳಿಗೆ ಮತ್ತೆ ಕೆಲಸ ದೊರೆಯಲಿ ಶ್ರಮಿಕರ ಬದುಕು ಹಸನಾಗಲಿ ಎಂದು ಟ್ವೀಟ್ ಮೂಲಕ ಗೌಡರು ಪ್ರಾರ್ಥಿಸಿದ್ದಾರೆ.

ABOUT THE AUTHOR

...view details