ಬೆಂಗಳೂರು: ಆರ್ ಆರ್ ನಗರ ಮತದಾನ ಹಿನ್ನೆಲೆ ಜೆ ಪಿ ವಾರ್ಡ್ ಮತಗಟ್ಟೆಗೆ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಭೇಟಿ ನೀಡಿದ್ದರು. ಎಲ್ಲರೂ ಧೈರ್ಯದಿಂದ ಮತದಾನ ಮಾಡುವಂತೆ ಕರೆ ನೀಡಿದರು.
ಯಾವುದೇ ಅಂಜಿಕೆ, ಭಯ ಬೇಡ: ಮತದಾರರಿಗೆ ಧೈರ್ಯ ತುಂಬಿದ ಕುಸುಮಾ ಹನುಮಂತರಾಯಪ್ಪ - rr nagar by election updates
ಕ್ಷೇತ್ರದ ಎಲ್ಲಾ ಮತಗಟ್ಟೆಗಳಿಗೆ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಭೇಟಿ ನೀಡುತ್ತಿದ್ದಾರೆ. ಚುನಾವಣಾ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಯಾವುದೇ ಅಂಜಿಕೆ, ಭಯ ಬೇಡ. ಹೊರಬಂದು ನಿಮ್ಮ ಹಕ್ಕು ಚಲಾಯಿಸಿ ಎಂದು ಕರೆ ನೀಡಿದರು.
ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ
ಎಲ್ಲಾ ಮತಗಟ್ಟೆಗಳಲ್ಲಿ ಮತದಾನವಾಗುತ್ತಿದ್ದು, ಸದ್ಯ ಮತದಾದರ ಸಂಖ್ಯೆ ಹೆಚ್ಚುತ್ತಿದೆ. ಹಾಗಾಗಿ ಹೊರಬಂದು ನಿಮ್ಮ ಹಕ್ಕನ್ನು ಚಲಾಯಿಸಿ. ಚುನಾವಣಾ ಅಧಿಕಾರಿಗಳು ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದಾರೆ. ಹಾಗಾಗಿ ಯಾವುದೇ ಅಂಜಿಕೆ, ಭಯ ಬೇಡ ಎಂದಿದ್ದಾರೆ.