ಬೆಂಗಳೂರು:ರಾಜ್ಯದಲ್ಲಿ ಕೊರೊನಾ ಹೆಚ್ಚಾಗುತ್ತಾ ಇದೆ. ಆದರೆ, ಸರಳ ದಸರಾ ಹೆಸರಲ್ಲಿ, ಜನರ ಜೀವ ಮೊದಲು ಎಂದು ಹೇಳಿದ ಸರ್ಕಾರವೇ ಜನರ ಜೀವ ತೆಗೆಯಲು ಮುಂದಾಗಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅಸಮಾಧಾನ ಹೊರಹಾಕಿದ್ದಾರೆ.
ಅನೇಕ ಜನ ಈಗಾಗಲೇ ಕೊರೊನಾಗೆ ಬಲಿಯಾಗಿದ್ದಾರೆ. ಹೀಗಿರುವಾಗ, 20 ಕೋಟಿ ಖರ್ಚು ಮಾಡಿ ಮೈಸೂರು ದಸರಾ ಆಚರಣೆ ಮಾಡುವ ಅವಶ್ಯಕತೆ ಏನು, ಸರ್ಕಾರ ಯಾರ ಒತ್ತಡಕ್ಕೆ ಮಣಿದಿದೆ ಎಂದು ಪ್ರಶ್ನಿಸಿದ್ದಾರೆ.
ಕುರುಬೂರು ಶಾಂತಕುಮಾರ್ ಅಸಮಾಧಾನ ಮೂನ್ನೂರು ಜನ ಸೇರಿದರು ಕೊರೊನಾ ಹರಡಕಲು ದಾರಿ ಮಾಡಿಕೊಟ್ಟ ಹಾಗೆಯೇ ಆಗುತ್ತದೆ. ಕೊರೊನಾ ರೋಗ ತಗುಲಿ ಸತ್ತರೆ, ಅವರಿಗೆ ಮೂವತ್ತು ಲಕ್ಷ ಪರಿಹಾರ ಕೊಡಬೇಕಾಗುತ್ತದೆ. ಕೇರಳ ರಾಜ್ಯದಲ್ಲಿ ಓಣಂ ಹಬ್ಬ ಆಚರಿಸಿ, ನಿರ್ಲಕ್ಷ್ಯ ಮಾಡಿದ ಕಾರಣ ಅಲ್ಲಿ ಸಹಸ್ರಾರು ಜನ ಕೊರೊನಾಗೆ ಬಲಿಯಾಗಿದ್ದಾರೆ ಎಂದು ಹೇಳಿದ್ದಾರೆ.
ಅರಮನೆಯ ಸಂಪ್ರದಾಯದಂತೆ ಸರಳ ಪೂಜೆ ಮಾಡಲಿ. ಅನಾವಶ್ಯಕ ಮೆರವಣಿಗೆ ಜನಾಕರ್ಷಣೆ ಕಾರ್ಯಕ್ರಮ ಮಾಡಿದರೆ ಜನದ್ರೋಹಿ ಸರ್ಕಾರವಾಗುತ್ತೆ ಎಂದು ರೈತ ಮುಖಂಡ ಅದ್ದೂರಿ ದಸರಾ ಆಚರಣೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.