ಬೆಂಗಳೂರು :ಆರ್ಥಿಕ ಚಟುವಟಿಕೆ ಆಮೇಲೆ. ಈಗ ಜನರ ಜೀವ ಉಳಿಯಬೇಕು. ಕಟ್ಟುನಿಟ್ಟಾದ ಕ್ರಮ ಕೈಗೊಳ್ಳದಿದ್ದರೆ ಜನರನ್ನ ಉಳಿಸುವುದು ಕಷ್ಟ ಎಂದು ಕುಣಿಗಲ್ ಶಾಸಕ ಡಾ.ರಂಗನಾಥ ಅಭಿಪ್ರಾಯ ಪಟ್ಟಿದ್ದಾರೆ.
ಬೆಂಗಳೂರಿನ ಸದಾಶಿವನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರೆಮ್ಡಿಸಿವರ್ ಕಾಳಸಂತೆಯಲ್ಲಿ ಮಾರಾಟ ಆಗ್ತಿದೆ. ಜನ ಸಮಾನ್ಯರಿಗೆ ಲಸಿಕೆ ಸಿಕ್ತಿಲ್ಲ. ಪಿಎಂ ಕೇರ್‌ನಲ್ಲಿ ಖರೀದಿ ಮಾಡಿದ ವೆಂಟಿಲೇಟರ್ಸ್ ಫೇಕ್. ನಾನು ಸರ್ಕಾರಕ್ಕೆ ಚಾಲೆಂಜ್ ಹಾಕ್ತೀನಿ ಒಂದು ಬೆಡ್ ಕೊಡಿಸಲಿ. ಕರೆ ಮಾಡಿದ್ರೆ ಬೆಡ್ ಇಲ್ಲ ಎಂದು ಹೇಳ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರದ ವಿರುದ್ಧ ಕುಣಿಗಲ್ ಶಾಸಕ ಡಾ.ರಂಗನಾಥ ಆಕ್ರೋಶ.. ಸಂಜೆ ವಿಡಿಯೋ ಕಾನ್ಫರೆನ್ಸ್ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವೈದ್ಯರ ಬಳಿ ಸಲಹೆ ಪಡೆಯುತ್ತಿದ್ದಾರೆ. ಮೊದಲ ಅಲೆ ಸೃಷ್ಟಿ ಆಗುವುದಕ್ಕೆ ಚೀನಾ ಕಾರಣ. ಎರಡನೇ ಅಲೆ ಸೃಷ್ಟಿ ಆಗುವುದಕ್ಕೆ ನಮ್ಮವರೇ ಕಾರಣ. ನಮ್ಮ ಸರ್ಕಾರಗಳ ನಿರ್ಲಕ್ಷ್ಯದಿಂದ 2ನೇ ಅಲೆ ಸೃಷ್ಟಿಯಾಗಿದೆ.
ಖಾಸಗಿ ಆಸ್ಪತ್ರೆಯವರು ಒಂದು ಬೆಡ್ ಕೊಡ್ತಿಲ್ಲ. ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೂಡಲೇ ಸರ್ಕಾರ ಬಿಗಿ ಕ್ರಮಕೈಗೊಳ್ಳಲಿ. ಇಲ್ಲದಿದ್ರೆ ಸಾವಿಗೆ ಸರ್ಕಾರವೇ ಹೊಣೆ ಆಗುತ್ತೆ ಎಂದರು. ಮೂವತ್ತು ವರ್ಷದ ಹೆಣ್ಣು ಮಗಳಿಗೆ ಬೆಡ್ ಕೊಡಿಸಕ್ಕೆ ಆಗಲಿಲ್ಲ.
ಕುಣಿಗಲ್ ಆಸ್ಪತ್ರೆಯಲ್ಲಿ ಹೊರಗಡೆ ಮಲಗಿಸಿ ಅವರಿಗೆ ಆಕ್ಸಿಜನ್ ವ್ಯವಸ್ಥೆ ಮಾಡಿದ್ದೇವೆ. ಆಸ್ಪತ್ರೆಗೆ ಕರೆ ಮಾಡಿದ್ರೆ ಡಾಕ್ಟರ್ಸ್ ಮತ್ತು ನರ್ಸ್ಗಳು ಇಲ್ಲ ಎಂದು ಹೇಳ್ತಾರೆ. ಕೊನೆಯ ವರ್ಷ ವ್ಯಾಸಂಗ ಮಾಡುತ್ತಿರುವವರನ್ನ ತೆಗೆದುಕೊಳ್ಳಲಿ. ಕೂಡಲೇ ಕಠಿಣ ಕ್ರಮಕೈಗೊಳ್ಳಲಿ ಎಂದು ಹೇಳಿದರು.