ಕರ್ನಾಟಕ

karnataka

ETV Bharat / state

ರೌಡಿಶೀಟರ್ ಕುಣಿಗಲ್ ಗಿರಿ ಬಂಧನ; ಪಾರ್ಟಿ ಮಾಡುತ್ತಿದ್ದ ವೇಳೆ ಪೊಲೀಸ್ ಬಲೆಗೆ - KN_BNG_06-GERI_7204498

ಪೋಲಿಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದ ರೌಡಿಶೀಟರ್ ಕುಣಿಗಲ್ ಗಿರಿ ಕೋರಮಂಗಲದ ಪಬ್ ಒಂದರಲ್ಲಿ ಸಿಕ್ಕಿ ಬಿದ್ದಿದ್ದಾನೆ.

ರೌಡಿಶೀಟರ್ ಕುಣಿಗಲ್ ಗಿರಿ ಪೊಲೀಸರ ಬಲೆಗೆ

By

Published : Jul 16, 2019, 12:29 PM IST

ಬೆಂಗಳೂರು: ಕೋರಮಂಗಲ ವ್ಯಾಪ್ತಿಯ ಪಬ್, ಬಾರ್‌ಗಳ ಮೇಲೆ ದಾಳಿ ನಡೆಸಿದ ಪೋಲಿಸರಿಗೆ ರೌಡಿ ಶೀಟರ್ ಕುಣಿಗಲ್‌ ಗಿರಿ ಸಿಕ್ಕಿಬಿದ್ದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ರೌಡಿಶೀಟರ್ ಕುಣಿಗಲ್ ಗಿರಿ ಪೊಲೀಸರ ಬಲೆಗೆ

ಬಹಳ ದಿನಗಳಿಂದ ತಲೆಮರೆಸಿಕೊಂಡಿದ್ದ ಕುಣಿಗಲ್ ಗಿರಿ ಕೋರಮಂಗಲ ಪಬ್ ಒಂದರಲ್ಲಿ ಪಾರ್ಟಿ ನಡೆಸುತ್ತಿರುವ ವಿಚಾರ ಗೊತ್ತಾಗಿದೆ. ಹೀಗಾಗಿ ಬಾರುಗಳ ಮೇಲೆ ಸ್ಪೆಷಲ್ ಡ್ರೈವ್ ಮಾಡ್ತಿದ್ದ ಪೊಲೀಸರ ಕಣ್ಣಿಗೆ ಕುಣಿಗಲ್ ಗಿರಿ ಬಿದ್ದಿದ್ದಾನೆ. ತಕ್ಷಣ ಅಲರ್ಟ್ ಆದ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.

ಇತ್ತೀಚೆಗಷ್ಟೇ ಗಿರಿ ಬರ್ತ್‌ಡೇ ದಿನ ಸಿಸಿಬಿ ಪೋಲಿಸರು ಡ್ಯಾನ್ಸ್ ಬಾರ್ ಮೇಲೆ ದಾಳಿ ಮಾಡಿದ್ದರು. ಆದರೆ ಪೊಲೀಸರ ಕಣ್ಣು ತಪ್ಪಿಸಿ ಎಸ್ಕೆಪ್ ಆಗಿದ್ದ ಈತ ಸದ್ಯ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಸಿಸಿಬಿ ಪೋಲಿಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ.

For All Latest Updates

ABOUT THE AUTHOR

...view details