ಬೆಂಗಳೂರು: ' ಕಾಲಲಿ ಕಟ್ಟಿದ ಗುಂಡು ಕೊರಳಲಿ ಕಟ್ಟಿದ ಬೆಂಡು, ತೇಲಲಿಯದು ಗುಂಡು, ಮುಳುಗಲಿಯದು ಬೆಂಡು. ಇಂತಪ್ಪ ಸಂಸಾರಶರಧಿಯ ದಾಂಟಿಸಿ ಕಾಲಾಂತಕನೆ ಕಾಯೋ ಕೂಡಲಸಂಗಮ. '
ಅನರ್ಹ ಶಾಸಕರಿಗೆ ಮಾಜಿ ಸಿಎಂ ಹೆಚ್ಡಿಕೆ ಕೊಟ್ಟ ಗುದ್ದು ಎಂತಹದ್ದು ಗೊತ್ತಾ!? - ಅನರ್ಹ ಶಾಸಕರಿಗೆ ಕುಮಾರಸ್ವಾಮಿ ಟ್ವೀಟ್
ಉಪ ಚುನಾವಣೆ ತಡೆಹಿಡಿದ ಹಿನ್ನೆಲೆಯಲ್ಲೇ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಅನರ್ಹ ಶಾಸಕರಿಗೆ ಟ್ವೀಟ್ ಮೂಲಕ ಸಖತ್ ಗುದ್ದು ನೀಡಿದ್ದಾರೆ.
ಕುಮಾರಸ್ವಾಮಿ ಗುದ್ದು
ಏನಿದು ಅಂತಿರಾ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಅನರ್ಹ ಶಾಸಕರ ಕುರಿತು ಮಾಡಿರುವ ಟ್ವೀಟ್.' ಅರ್ಹತೆ ಕಳೆದುಕೊಂಡ ಶಾಸಕರ ಪಾಡು ನೋಡಿ ಹೇಳಬೇಕೆನಿಸಿದ್ದು' ಎಂದು ಟ್ವೀಟ್ ನಲ್ಲಿ ಹೇಳಿದ್ದಾರೆ. ಸುಪ್ರೀಂಕೋರ್ಟ್ನಲ್ಲಿ ಇಂದು ಅನರ್ಹ ಶಾಸಕರ ಅರ್ಜಿ ವಿಚಾರಣೆ ಕುರಿತು ನಡೆದ ವಾದ-ಪ್ರತಿವಾದದ ಬಳಿಕ ರಾಜ್ಯದಲ್ಲಿ ಘೋಷಣೆಯಾಗಿದ್ದ 15 ಕ್ಷೇತ್ರಗಳ ಉಪಚುನಾವಣೆಗೆ ತಡೆಯಾಜ್ಞೆ ನೀಡಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದ್ದು, ಇದರ ಬೆನ್ನಲ್ಲೆ ಹೆಚ್ಡಿಕೆ ಈ ರೀತಿ ಟ್ವೀಟ್ ಮಾಡಿದ್ದಾರೆ.
Last Updated : Sep 26, 2019, 11:26 PM IST