ಕರ್ನಾಟಕ

karnataka

ETV Bharat / state

ಕುಮಾರಸ್ವಾಮಿಯ ಅದೃಷ್ಟದ ಕೋಟಾ ಮುಗಿದಿದೆ: ಸಿಎಂ ಕಾಲೆಳೆದ ಸಿ ಟಿ ರವಿ - kannada news

ಕುಮಾರಸ್ವಾಮಿ‌ ತಾವು ಸಾಂಧರ್ಬಿಕ ಶಿಶು ಅಂತ ಅವರೇ ಹೇಳಿದ್ದರು. ಅದೃಷ್ಟದಿಂದ ಅವರು ಮುಖ್ಯಮಂತ್ರಿ ಆದವರು. 13 ತಿಂಗಳುಗಳಿಗೆ ಮಾತ್ರ ಅವರ ಅದೃಷ್ಣ ಇತ್ತು. ಈಗ ಆ ಅದೃಷ್ಟದ ಕೋಟಾ ಮುಗಿದಿದೆ ಎಂದು ಹೇಳುವ ಮೂಲಕ ಶಾಸಕ ಸಿ.ಟಿ. ರವಿ ಪರೋಕ್ಷವಾಗಿ ಸಿಎಂ ಕುಮಾರಸ್ವಾಮಿಯ ಕಾಳೆದರು.

ಶಾಸಕ ಸಿ.ಟಿ.ರವಿ

By

Published : Jul 9, 2019, 2:52 PM IST

ಬೆಂಗಳೂರು: ಸಿಎಂ ಕುಮಾರಸ್ವಾಮಿ ಹದಿಮೂರು ತಿಂಗಳಿಗೆ ಮಾತ್ರ ಅದೃಷ್ಟದ ಮುಖ್ಯಮಂತ್ರಿ ಎಂದು ಬಿಜೆಪಿ ಶಾಸಕ ಸಿ.ಟಿ. ರವಿ ವ್ಯಂಗ್ಯವಾಡಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ‌ ತಾನು ಸಾಂಧರ್ಬಿಕ ಶಿಶು ಅಂತ ಅವರೇ ಹೇಳಿದ್ದರು. ಅದೃಷ್ಟದಿಂದ ಅವರು ಮುಖ್ಯ ಮಂತ್ರಿ ಆಗಿದ್ದಾರೆ. 13 ತಿಂಗಳುಗಳಿಗೆ ಮಾತ್ರ ಅವರ ಅದೃಷ್ಟ ಇತ್ತು. ಈಗ ಅದೃಷ್ಟದ ಕೋಟಾ ಮುಗಿದಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಿಎಂ ಕುಮಾರಸ್ವಾಮಿಯ ಕಾಲೆಳೆದರು.

ಸಿ.ಟಿ. ರವಿ, ಶಾಸಕ

ಸರ್ಕಾರದ ದೌರ್ಬಲ್ಯವೇ ಇವತ್ತು ಕುಮಾರಸ್ವಾಮಿ ಅವರನ್ನು ಈ ಸ್ಥಿತಿಗೆ ತಂದಿದೆ. ಈ ಸರ್ಕಾರ ಜನರ ವಿಶ್ವಾಸದಿಂದ ಬಂದದ್ದು ಅಲ್ಲ. ಚುನಾವಣಾ ಪೂರ್ವ ಮೈತ್ರಿ ಇದಲ್ಲಾ. ಅವತ್ತು ರಾಹುಲ್ ಗಾಂಧಿ ಜೆಡಿಎಸ್ ನ್ನು ಬಿಜೆಪಿಯ ಬಿ ಟೀಂ ಎಂದಿದ್ದರು. ದೇವೇಗೌಡ್ರು ಕೂಡ ಸಿದ್ದರಾಮಯ್ಯ ಬಗ್ಗೆ ಇಂತಹ ನೀಚ ರಾಜಕಾರಣಿ ನಾನು ನೋಡಿಲ್ಲ ಎಂದಿದ್ದರು. ಈಗ ಅವರೆಲ್ಲ ಒಂದಾಗಿದ್ದಾರೆ ಎಂದು ಸಿ ಟಿ ರವಿ ಟೀಕಿಸಿದರು.

ನಾವು ಎಲ್ಲವನ್ನೂ ಗಮನಿಸುತ್ತಿದ್ದೇವೆ. ಬಿಜೆಪಿ ಪಾರ್ಲಿಮೆಂಟರಿ ಬೋರ್ಡ್ ನಮಗೆ ಸರ್ವೊಚ್ಛ, ಅವರು ತೆಗೆದುಕೊಳ್ಳುವ ನಿರ್ಧಾರದ ಮೇಲೆ‌ ನಮ್ಮ ಮುಂದಿನ‌ ನಡೆ ಇರುತ್ತದೆ. ಅಲ್ಲಿಯವರೆಗೂ ನಾವು ಕಾದು‌ ನೋಡ್ತಿವಿ ಎಂದು ಇದೇ ವೇಳೆ ರವಿ ಹೇಳಿದ್ರು.

ABOUT THE AUTHOR

...view details