ಕರ್ನಾಟಕ

karnataka

ETV Bharat / state

ದೃಶ್ಯ ಮಾಧ್ಯಮಗಳನ್ನು ಪರೋಕ್ಷವಾಗಿ ಮಾತಿನಿಂದಲೇ ಚುಚ್ಚಿದ ಹೆಚ್​ಡಿಕೆ - book releasse programme

ಈ ಹಿಂದೆ ಮಾಧ್ಯಮಗಳ ಮೆಲೆ ಗೌರವ ಇತ್ತು. ಆದರೆ ಈಗ ಮಾಧ್ಯಮದಲ್ಲೂ ಕಲುಷಿತ ವಾತಾವರಣ ನಿರ್ಮಾಣವಾಗಿದ್ಯಾ ಎಂದು ಅನಿಸುತ್ತಿದೆ. ಮಾಧ್ಯಮಗಳು‌ ಮೈ ಮರೆತು ಸುದ್ದಿ ಮಾಡಿದ್ರೆ ದೇಶಕ್ಕೆ ಅಪಾಯ ಇದೆ ಎಂದು ಎಚ್​ ಡಿ ಕುಮಾರಸ್ವಾಮಿ ಮಾಧ್ಯಮಗಳನ್ನು ದೂಷಿಸಿದರು.

hdk

By

Published : Oct 26, 2019, 4:35 PM IST

ಬೆಂಗಳೂರು: ಹಿರಿಯ ಪತ್ರಕರ್ತ ಆರ್ ವಿ ವಿಠ್ಠಲ್ ಮೂರ್ತಿ ಅವರ "ಇದೊಂಥರಾ ಆತ್ಮಕಥೆ" ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ದೃಶ್ಯ ಮಾಧ್ಯಮಗಳಿಗೆ ಪರೋಕ್ಷವಾಗಿ ಮಾತಿನಲ್ಲೇ ಚುಚ್ಚಿದರು.

ಅಂದು ಮಾಧ್ಯಮ ಹಾಗೂ ವರದಿಗಾರರ ಮೇಲೆ ಇರುವ ಗೌರವ ಇತ್ತು. ಆದರೆ ಈಗ ಭಯ, ಭಕ್ತಿ ಇದ್ಯಾ ಅನ್ನೋ ಪ್ರಶ್ನೆ ಬಂದಿದೆ. ಮಾಧ್ಯಮದಲ್ಲೂ ಕಲುಷಿತ ವಾತಾವರಣ ನಿರ್ಮಾಣವಾಗಿದ್ಯಾ ಎಂದು ಅನಿಸುತ್ತಿದೆ. ಸ್ವಾತಂತ್ರ್ಯ ಬಂದಾಗಿನಿಂದಲೂ ನಾಯಕರು ಅವರವರದೇ ಆದ ಕೊಡುಗೆ ಕೊಟ್ಟಿದ್ದಾರೆ ಎಂದು ಹೇಳಿದರು ಹಾಗೂ ಅಂದಿನ ಪತ್ರಕರ್ತರನ್ನು ಶ್ಲಾಘಿಸಿದರು.

ಮಾಜಿ ಮುಖ್ಯಮಂತ್ರಿ ಎಚ್​ಡಿಕೆ

ದೇಶದಲ್ಲಿ ದೊಡ್ಡ ಬದಲಾವಣೆ ತರುವ ಜವಾಬ್ದಾರಿ ಮಾಧ್ಯಮಕ್ಕೆ ಇದೆ. ರಾಜಕಾರಣದಲ್ಲಿ ನಾವು ಹಲವಾರು ತಪ್ಪು ಮಾಡ್ತೇವೆ, ಸಣ್ಣ ಪಕ್ಷ ನಡೆಸೋದು ಎಷ್ಟು ಸಮಸ್ಯೆ ಅನ್ನೋದು ನನಗೆ ಗೊತ್ತಿದೆ. ನಾನು ರಾಜಕಾರಣಕ್ಕೆ ಬಂದದ್ದೇ ಆಕಸ್ಮಿಕ. ನನಗೆ ಇಷ್ಟು ದೊಡ್ಡ ಸ್ಥಾನ ಸಿಗಲು ಕಾರಣ ಮಾಧ್ಯಮ ಕೂಡ ಹೌದು. ಈಗ ನಿಮ್ಮಿಂದಲೇ ನನ್ನ ರಾಜಕೀಯ ಪಥನವೂ ಆಯ್ತು ಅನ್ನೋ ಭಾವನೆ ಇದೆ. ನಾನು ಮುಖ್ಯಮಂತ್ರಿ ಆದಾಗಿನಿಂದಲೂ ಅದರ ವಿರುದ್ಧವಾಗಿ ಸುದ್ದಿ ಮಾಡುತ್ತಲೇ ಬಂದಿದ್ದೀರಿ. ನಾನು ಮಾಡಿದ ಅದೆಷ್ಟೋ ಕೆಲಸಗಳು‌ ಪ್ರಚಾರಕ್ಕೆ ಬಂದಿಲ್ಲ . ಈ ಬಾರಿ ನನ್ನ ಮೇಲೆ ಯಾಕೆ ಅಷ್ಟು ಆಕ್ರೋಶ ಆಯ್ತು‌ ಎಂದು ದೃಶ್ಯ ಮಾಧ್ಯಮಗಳನ್ನು ಪ್ರಶ್ನಿಸಿದರು.

ಜೈಲಿಗೆ ಹೋದ್ರೆ ಒಂದು ಸ್ಟೋರಿ, ಬಂದ್ರೆ ಒಂದು ಸ್ಟೋರಿ, ಜೈಲಿಂದ ಬಂದರೆ ವಿಜೃಂಭಿಸಿ ಒಂದು ಸ್ಟೋರಿ ಮಾಡಿಬಿಡ್ತೀರಿ. ಮಾಧ್ಯಮಗಳು‌ ಮೈ ಮರೆತು ಸುದ್ದಿ ಮಾಡಿದ್ರೆ ದೇಶಕ್ಕೆ ಅಪಾಯ ಇದೆ. ನೀವು ದಾರಿ ತಪ್ಪಿಸಿದರೆ, ಸಮಾಜವನ್ನ ಕಾಪಾಡೋದು ಕಷ್ಟ ಎಂದು ಮಾಧ್ಯಮಗಳ ವಿರುದ್ಧ ಹರಿಹಾಯ್ದರು.

ABOUT THE AUTHOR

...view details