ಬೆಂಗಳೂರು: ಕೊರೊನಾ ವೈರಸ್ ಹರಡುವಿಕೆ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಇಡೀ ಭಾರತವನ್ನೇ ಏಪ್ರಿಲ್ 14 ರ ವರೆಗೆ ಲಾಕ್ ಡೌನ್ ಮಾಡಲಾಗಿತ್ತು. ಹೇಗಿದ್ದರೂ ಏಪ್ರಿಲ್ 14ಕ್ಕೆ ಲಾಕ್ ಡೌನ್ ಮುಗಿಯುತ್ತೆ, ಎಂದಿನಂತೆ ಬಸ್ಸುಗಳ ಸಂಚಾರ ಇರುತ್ತೆ ಅನ್ನೋ ಕಾರಣಕ್ಕೆ ಕೆಎಸ್ಆರ್ಟಿಸಿ ಮುಂಗಡ ಕಾಯ್ದಿರಿಸುವ ಟಿಕೆಟ್ ಬುಕ್ಕಿಂಗ್ ತೆರೆದಿತ್ತು. ಅಂತರಾಜ್ಯ ಸೇರಿದಂತೆ ಹಲವು ಜಿಲ್ಲೆಗಳಿಂದ ಟಿಕೆಟ್ ರಿಸರ್ವೇಷನ್ ಮಾಡಿದ್ದರು.
ಏಪ್ರಿಲ್ 14ರ ನಂತರದ ಕೆಎಸ್ಆರ್ಟಿಸಿ ಟಿಕೆಟ್ ರಿಸರ್ವೇಶನ್ ಕ್ಯಾನ್ಸಲ್ - ಲಾಕ್ಡೌನ್ ಮಂದುವರಿಕೆ
ಲಾಕ್ಡೌನ್ ಏಪ್ರಿಲ್ 30ರ ವರೆಗೆ ಮುಂದುವರೆಯುವುದಾಗಿ ಘೋಷಣೆಯಾದ ಹಿನ್ನೆಲೆ ಕೆಎಸ್ಆರ್ಟಿಸಿ, ಸರ್ಕಾರದ ಮುಂದಿನ ಆದೇಶದವರೆಗೂ ರಿಸರ್ವೇಷನ್ ಅನ್ನು ರದ್ದುಗೊಳಿಸಿದೆ.
ಆದರೆ ನಿನ್ನೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಸಭೆ ನಡೆಸಿದ ಬಳಿಕ ಲಾಕ್ ಡೌನ್ ಅನ್ನು ಏಪ್ರಿಲ್ 30ರ ವರೆಗೆ ಮುಂದುವರಿಯುವುದಾಗಿ ಘೋಷಿಸಲಾಯಿತು. ಈ ನಿಟ್ಟಿನಲ್ಲಿ ಕೆಎಸ್ಆರ್ಟಿಸಿಯು ಮುಂದಿನ ಆದೇಶದವರೆಗೂ ರಿಸರ್ವೇಷನ್ ಅನ್ನು ರದ್ದುಗೊಳಿಸಿದೆ.
ಇನ್ನು ಏಪ್ರಿಲ್ 14 ರಿಂದ ಮುಂಗಡ ಟಿಕೆಟ್ 5,200 ಟಿಕೆಟ್ಗಳು ಬುಕ್ಕಿಂಗ್ ಆಗಿದ್ದು, ಇದರಲ್ಲಿ 4,600 ಟಿಕೆಟ್ಗಳು ಏಪ್ರಿಲ್ 15ಕ್ಕೆ ಬುಕ್ಕಿಂಗ್ ಆಗಿವೆ. ಸದ್ಯ ಬುಕ್ಕಿಂಗ್ ಆಗಿರುವ ಎಲ್ಲಾ ಟಿಕೆಟ್ ಗಳನ್ನು ರದ್ದುಗೊಳಿಸಿ ಹಣ ವಾಪಸ್ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು ಟಿಕೆಟ್ ಬುಕ್ಕಿಂಗ್ನಲ್ಲಿ ಬೆಂಗಳೂರಿಗೆ ಬರುವ ಮತ್ತು ಹೋಗುವ ಅಂತರರಾಜ್ಯ ಪ್ರಯಾಣಿಕರೇ ಹೆಚ್ಚು ಎನ್ನಲಾಗಿದೆ.