ಕರ್ನಾಟಕ

karnataka

ETV Bharat / state

2 ಸಾವಿರ ಕೋಟಿ ರೂ. ನಷ್ಟದತ್ತ ರಾಜ್ಯ ಸಾರಿಗೆ ನಿಗಮಗಳು! - ಕೆಎಸ್‌ಆರ್‌ಟಿಸಿಗೆ 2 ಸಾವಿರ ಕೋಟಿ ನಷ್ಟ

ಕೆಎಸ್‌ಆರ್‌ಟಿಸಿ ಸೇರಿದಂತೆ ರಾಜ್ಯದ 4 ಸಾರಿಗೆ ನಿಗಮಗಗಳಿಂದ ಮಾರ್ಚ್ ಅಂತ್ಯದ ವೇಳೆ 2,130 ಕೋಟಿ ರೂ. ನಷ್ಟವಾಗಬಹುದು ಎಂದು ಅಂದಾಜಿಸಲಾಗಿದೆ.

KSRTC suffers loss
ನಷ್ಟದತ್ತ ರಾಜ್ಯ ಸಾರಿಗೆ ನಿಗಮಗಳು

By

Published : Jan 29, 2022, 7:46 AM IST

ಬೆಂಗಳೂರು: ಕೋವಿಡ್ ಸಾಂಕ್ರಾಮಿಕ, ಆಡಳಿತದಲ್ಲಿನ ಅವ್ಯವಸ್ಥೆ, ವ್ಯಾಪಕ ಭ್ರಷ್ಟಾಚಾರ ಕಾರಣ ಕೆಎಸ್‌ಆರ್‌ಟಿಸಿ ಸೇರಿದಂತೆ ರಾಜ್ಯದ 4 ಸಾರಿಗೆ ನಿಗಮಗಳಿಂದ ಮಾರ್ಚ್ ಅಂತ್ಯದ ವೇಳೆ 2,130 ಕೋಟಿ ರೂ. ನಷ್ಟವಾಗಬಹುದು ಎಂದು ಅಂದಾಜಿಸಲಾಗಿದೆ.

ನಷ್ಟದತ್ತ ರಾಜ್ಯ ಸಾರಿಗೆ ನಿಗಮಗಳು

ಮೂಲಗಳ ಪ್ರಕಾರ ಸಾರಿಗೆ ನಿಗಮಗಳ ನಷ್ಟ ದೂರವಾಗಿಸಿ, ಲಾಭದಾಯಕ ಹಾದಿ ಕಂಡು ಹಿಡಿಯಲು ವರದಿ ನೀಡುವಂತೆ ರಚಿಸಲಾದ ಸಮಿತಿಯ ಅಧ್ಯಕ್ಷ, ನಿವೃತ್ತ ಅಧಿಕಾರಿ ಎಂ. ಆರ್‌.ಶ್ರೀನಿವಾಸ ಮೂರ್ತಿ ಜನವರಿ 31ರವರೆಗೆ ಸಾರ್ವಜನಿಕ ಪ್ರತಿಕ್ರಿಯೆಗಳಿಗೆ ಕರೆ ನೀಡಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಕಳೆದ ಒಂದು ತಿಂಗಳಿನಲ್ಲೇ ಸಾಕಷ್ಟು ಸಭೆಗಳನ್ನು ನಡೆಸಿದ್ದಾರೆ. ಮೂರು ತಿಂಗಳಲ್ಲಿ ಸಮಿತಿಯ ಅಧಿಕಾರಾವಧಿ ಪೂರ್ಣಗೊಳ್ಳಲಿದ್ದು, ಮಾರ್ಚ್ 28 ರೊಳಗಾಗಿ ವರದಿ ಸಿದ್ಧಪಡಿಸಲು ಯೋಜನೆ ರೂಪಿಸಲಾಗುತ್ತಿದೆ. ಈಗಾಗಲೇ ಸಾಕಷ್ಟು ಸಲಹೆಗಳು ಬರುತ್ತಿದ್ದು, ಅವುಗಳನ್ನು ಪರಿಗಣಿಸಲಾಗುತ್ತಿದೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ತಿಳಿಸಿದ್ದಾರೆ.

ಸಾರಿಗೆ ನಿಗಮಗಳ ಪುನರ್ ರಚನೆ ಮಾಡುವಾಗ ಸಾಂಸ್ಥಿಕ ಶಕ್ತಿಯನ್ನು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯವಾಗುತ್ತದೆ. ಸೇವೆ ಸಲ್ಲಿಸಲು ನಾವಿಲ್ಲಿದ್ದೇವೆ. ಲಾಭಕ್ಕೆ ಹೆಚ್ಚಿನ ಆದ್ಯತೆ ನೀಡುವ ಘಟಕ ನಮ್ಮದಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:ಆರು ತಿಂಗಳ ಆಡಳಿತ ಪೂರೈಸಿರುವ ಬೊಮ್ಮಾಯಿ ಸರ್ಕಾರದ ಮೇಲಿವೆ ಹತ್ತಾರು ವೈಫಲ್ಯಗಳ ಛಾಯೆ!

ABOUT THE AUTHOR

...view details