ಕರ್ನಾಟಕ

karnataka

ETV Bharat / state

ಕೋವಿಡ್ ಭೀತಿ: ಸಾರಿಗೆ ನಿಗಮಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ ತಾತ್ಕಾಲಿಕ ಸ್ಥಗಿತ - ಕೆಎಸ್ಆರ್​​ಟಿಸಿ ಬಯೋಮೆಟ್ರಿಕ್ ಹಾಜರಾತಿ ಬಂದ್​

ಕೆಎಸ್ಆರ್​​ಟಿಸಿ ನಿಗಮದಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಯ ಬಯೋಮೆಟ್ರಿಕ್​ ಹಾಜರಾತಿ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ.

ksrtc-stops-biometric-attendance-system
ಸಾರಿಗೆ ನಿಗಮಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ ತಾತ್ಕಾಲಿಕ ಸ್ಥಗಿತ

By

Published : Jan 13, 2022, 9:52 PM IST

ಬೆಂಗಳೂರು:ಕೆಎಸ್ಆರ್​​ಟಿಸಿ ನಿಗಮದಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಯ ಬಯೋಮೆಟ್ರಿಕ್​ ಹಾಜರಾತಿ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಮುಂದಿನ ಆದೇಶದವರೆಗೂ ಸ್ಥಗಿತಗೊಳಿಸಿ ಆದೇಶ ಹೊರಡಿಸಲಾಗಿದೆ.

ಅಧಿಕಾರಿಗಳು ಹಾಗೂ ಸಿಬ್ಬಂದಿಯು ಕರ್ತವ್ಯಕ್ಕೆ ಬರುವ ಹಾಗೂ ಹೋಗುವ ಸಮಯದಲ್ಲಿ ಕಚೇರಿಯ ಮುಖ್ಯ ದ್ವಾರದಲ್ಲಿರುವ ಬಯೋಮೆಟ್ರಿಕ್ (Biometric Attendance System) ಯಂತ್ರದಲ್ಲಿ ಹಾಜರಾತಿ ನಮೂದಿಸುತ್ತಿದ್ದರು.‌ ಆದರೆ ಕೋವಿಡ್-19 ಮತ್ತು ಒಮಿಕ್ರಾನ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಕಾರಣ ಈ ಹಾಜರಾತಿ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ.

ಉಳಿದಂತೆ, ಆಯಾ ಇಲಾಖಾ ಮುಖ್ಯಸ್ಥರು ತಮ್ಮ ಇಲಾಖೆಗಳಿಗೆ ಸಂಬಂಧಪಟ್ಟ ಭೌತಿಕ ಹಾಜರಾತಿ ಪುಸ್ತಕವನ್ನು ನಿರ್ವಹಿಸುವಂತೆ ಕೆಎಸ್ಆರ್​​ಟಿಸಿ ಆದೇಶಿಸಿದೆ.

ರಾಜ್ಯದಲ್ಲಿ ಇಂದು 25,005 ಜನರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ‌. 2,01,704 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿತ್ತು. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,15,733ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ:ಕೋವಿಡ್​ ಅನ್ನೋದು ಒಂದು ಮೆಡಿಕಲ್​ ಮಾಫಿಯಾ: ಅಗ್ನಿ ಶ್ರೀಧರ್

For All Latest Updates

ABOUT THE AUTHOR

...view details