ಕರ್ನಾಟಕ

karnataka

ETV Bharat / state

10ನೇ ದಿನಕ್ಕೆ ಕಾಲಿಟ್ಟ ಸಾರಿಗೆ ಮುಷ್ಕರ: 213 ಬಿಎಂಟಿಸಿ ಸಿಬ್ಬಂದಿ ಅಮಾನತು - ಕೆಎಸ್​ಆರ್​ಟಿಸಿ ಮುಷ್ಕರ

ಸಾರಿಗೆ ನೌಕರರ ಅನಿರ್ಧಿಷ್ಟಾವಧಿ ಮುಷ್ಕರ 10ನೇ ದಿನಕ್ಕೆ ಕಾಲಿಟ್ಟಿದ್ದು, ಬಿಎಂಟಿಸಿಯ 213 ಸಿಬ್ಬಂದಿಯನ್ನು ಮತ್ತೆ ಅಮಾನತು ಮಾಡಲಾಗಿದೆ.

ksrtc-protest-continues-on-tenth-day
10ನೇ ದಿನಕ್ಕೆ ಕಾಲಿಟ್ಟ ಸಾರಿಗೆ ಮುಷ್ಕರ

By

Published : Apr 16, 2021, 9:47 AM IST

ಬೆಂಗಳೂರು:ವೇತನ ಪರಿಷ್ಕರಿಸುವಂತೆ ಆಗ್ರಹಿಸಿರಾಜ್ಯದಲ್ಲಿ ಸಾರಿಗೆ ನೌಕರರ ಅನಿರ್ಧಿಷ್ಟಾವಧಿ ಮುಷ್ಕರ 10ನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರದ ವಿರುದ್ಧ ನೌಕರರ ಸಮರ ಮುಂದುವರೆದಿದ್ದು, ರಾಜ್ಯದಲ್ಲಿ ಇಂದೂ ಸಹ ಬಿಎಂಟಿಸಿ, ಕೆಎಸ್ಆರ್​ಟಿಸಿ ಬಸ್​ಗಳು ರಸ್ತೆಗಳಿದಿಲ್ಲ.‌ ಎಂದಿನಂತೆ ಖಾಸಗಿ ಬಸ್​ಗಳ ಕಾರ್ಯಾಚರಣೆ ಮುಂದುವರೆದಿದೆ.

ಇಂದು ಶಾಸಕರುಗಳ ಮನೆ ಮುಂದೆ ಪ್ರತಿಭಟನೆ

ಬೇಡಿಕೆ ಈಡೇರಿಸದ ಸರ್ಕಾರದ ವಿರುದ್ಧ ಇಂದು ಸಹ ನೌಕರರು ಬೀದಿಗಿಳಿಯಲಿದ್ದಾರೆ. ರಾಜ್ಯದ ಎಲ್ಲಾ ಶಾಸಕರ ಮನೆ ಮುಂದೆ ಪ್ರತಿಭಟನೆಗೆ ನಿರ್ಧಾರ ಮಾಡಿದ್ದು, ಈ ಮೂಲಕ ಆರನೇ ವೇತನ ಆಯೋಗ ಜಾರಿಗೆ ಆಗ್ರಹಿಸಲಿದ್ದಾರೆ.

ಇತ್ತ ಮುಷ್ಕರನಿರತ ಸಿಬ್ಬಂದಿ ಮೇಲೆ ಬಿಎಂಟಿಸಿ ಶಿಸ್ತು ಕ್ರಮ ಮುಂದುವರೆದಿದೆ. 213 ಸಿಬ್ಬಂದಿಯನ್ನು ಮತ್ತೆ ಸೇವೆಯಿಂದ ಅಮಾನತು ಮಾಡಿದೆ. ಕರ್ತವ್ಯಕ್ಕೆ ಬಾರದ ಸಿಬ್ಬಂದಿಯನ್ನು ಅಮಾನತು ಮಾಡಿ ಬಿಎಂಟಿಸಿ ಆದೇಶ ಹೊರಡಿಸಿದೆ.
ಕರ್ತವ್ಯಕ್ಕೆ ಗೈರು ಹಾಜರಾತಿ ಹಾಗೂ ಇತರೆ ನೌಕರರನ್ನು ಹಾಜರಾಗದಂತೆ ಪ್ರಚೋದನೆ ಮಾಡಿದ ನೌಕರರನ್ನೂ ಸಸ್ಪೆಂಡ್‌ ಮಾಡಲಾಗಿದೆ.

ABOUT THE AUTHOR

...view details