ಕರ್ನಾಟಕ

karnataka

ETV Bharat / state

ಗಮನಿಸಿ: ಮೈಸೂರು ದಸರಾಗೆ ಕೆಎಸ್​ಆರ್​ಟಿಸಿಯಿಂದ ವಿಶೇಷ ಪ್ಯಾಕೇಜ್ - ಮೈಸೂರು ದಸರಾ

ರಾಜ್ಯದ ಮಾತ್ರವಲ್ಲದೆ ದೇಶದ ವಿವಿದೆಡೆಗಳಿಂದ ದಸರಾ ವೀಕ್ಷಣೆಗೆ ಮೈಸೂರು ನಗರಕ್ಕೆ ಬರುವ ಪ್ರವಾಸಿಗರ ಹಾಗೂ ರಜೆಗಳ ಪ್ರಯುಕ್ತ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್​ಆರ್​ಟಿಸಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ.

ಕೆಎಸ್​ಆರ್​ಟಿಸಿಯಿಂದ ವಿಶೇಷ ಪ್ಯಾಕೇಜ್

By

Published : Sep 19, 2019, 5:09 AM IST

ಬೆಂಗಳೂರು:ಮೈಸೂರು ದಸರಾ ಎಷ್ಟೊಂದು ಸುಂದರ ಅಂತ ಹಾಡುತ್ತಲೇ ದಸರಾ ಟೂರ್​ಗೆ ಸಿದ್ದರಾಗಿ.. ಯಾಕೆಂದರೆ ನಿಮಗಾಗಿಯೇ ಕೆಎಸ್​ಆರ್​ಟಿಸಿ ವಿಶೇಷ ಪ್ಯಾಕೇಜ್ ಟೂರ್ ವ್ಯವಸ್ಥೆ ಮಾಡಿದೆ.

ರಾಜ್ಯದ ಮಾತ್ರವಲ್ಲದೆ ದೇಶದ ವಿವಿದೆಡೆಗಳಿಂದ ದಸರಾ ವೀಕ್ಷಣೆಗೆ ಮೈಸೂರು ನಗರಕ್ಕೆ ಬರುವ ಪ್ರವಾಸಿಗರ ಹಾಗೂ ರಜೆಗಳ ಪ್ರಯುಕ್ತ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವೇಗದೂತ, ರಾಜಹಂಸ, ಐರಾವತ ಹಾಗೂ ಐರಾವತ ಕ್ಲಬ್ ಕ್ಲಾಸ್ (ಮಲ್ಟಿ ಆ್ಯಕ್ಸಲ್) ಸಾರಿಗೆ ಸೇವೆಗಳ ಜೊತೆಗೆ ವಿಶೇಷ ಪ್ಯಾಕೇಜ್ ಟೂರ್ ಸೇವೆಗಳ ಸೌಲಭ್ಯವನ್ನು ಒದಗಿಸಲು ಮುಂದಾಗಿದೆ.

ಮೈಸೂರಿಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಕರ್ನಾಟಕ ಸಾರಿಗೆ ವಾಹನಗಳಿಂದ ಒಂದು ದಿನದ ವಿಶೇಷ ಪ್ರವಾಸ ವ್ಯವಸ್ಥೆ ಮಾಡಿದೆ.

  • ಗಿರಿದರ್ಶಿನಿ: ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ನಂಜನಗೂಡು ಮತ್ತು ಚಾಮುಂಡಿ ಬೆಟ್ಟ (ಪ್ರಯಾಣ ದರ ವಯಸ್ಕರಿಗೆ: ರೂ.350/- ಮತ್ತು ಮಕ್ಕಳಿಗೆ ರೂ.175/-)
  • ಜಲದರ್ಶಿನಿ: ಗೋಲ್ಡನ್ ಟೆಂಪಲ್ (ಬೈಲಕುಪ್ಪೆ), ದುಬಾರೆ ಅರಣ್ಯ ನಿಸರ್ಗಧಾಮ,
  • ರಾಜಸೀಟ್, ಹಾರಂಗಿ ಜಲಾಶಯ ಮತ್ತು ಕೆ.ಆರ್.ಎಸ್.(ಪ್ರಯಾಣ ದರ ವಯಸ್ಕರಿಗೆ ರೂ.375/- ಮತ್ತು ಮಕ್ಕಳಿಗೆ: ರೂ.190/-)
  • ದೇವದರ್ಶಿನಿ: ನಂಜನಗೂಡು, ಬ್ಲಫ್, ಮುಡುಕುತೊರೆ, ತಲಕಾಡು, ಸೋಮನಾಥಪುರ, ಶ್ರೀರಂಗಪಟ್ಟಣ (ಪ್ರಯಾಣ ದರ ವಯಸ್ಕರಿಗೆ: ರೂ.275/- ಮತ್ತು ಮಕ್ಕಳಿಗೆ: ರೂ.140/-)

ಮೈಸೂರಿಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಐರಾವತ ಕ್ಲಬ್ ಕ್ಲಾಸ್ ವಾಹನಗಳಿಂದ ಒಂದು ದಿನದ ವಿಶೇಷ ಪ್ರವಾಸ

  • ಮಡಿಕೇರಿ ಪ್ಯಾಕೇಜ್: ನಿಸರ್ಗಧಾಮ-ಗೋಲ್ಡನ್ ಟೆಂಪಲ್-ಹಾರಂಗಿ ಜಲಾಶಯ-ರಾಜಾ ಸೀಟ್-ಅಬ್ಬೀಫಾಲ್ಸ್ (ಪ್ರಯಾಣ ದರ ವಯಸ್ಕರಿಗೆ: ರೂ.1200/- ಮತ್ತು ಮಕ್ಕಳಿಗೆ: ರೂ.900/-)
  • ಬಂಡೀಪುರ ಪ್ಯಾಕೇಜ್ :ಸೋಮನಾಥಪುರ-ತಲಕಾಡು-ಗೋಪಾಲಸ್ವಾಮಿ ಬೆಟ್ಟ-ಬಂಡೀಪುರ-ನಂಜನಗೂಡು (ಪ್ರಯಾಣ ದರ ವಯಸ್ಕರಿಗೆ: ರೂ.1000/- ಮತ್ತು ಮಕ್ಕಳಿಗೆ: ರೂ.750/-)
  • ಶಿಂಷಾ ಪ್ಯಾಕೇಜ್: ಶಿವನಸಮುದ್ರ-ಶ್ರೀರಂಗಪಟ್ಟಣ-ರಂಗನತಿಟ್ಟು-ಬಲಮುರಿ ಫಾಲ್ಸ್-ಕೆ.ಆರ್.ಎಸ್ (ಪ್ರಯಾಣ ದರ ವಯಸ್ಕರಿಗೆ: ರೂ.800/- ಮತ್ತು ಮಕ್ಕಳಿಗೆ: ರೂ.600/-)
  • ಊಟಿ ಪ್ಯಾಕೇಜ್: ಊಟಿ-ಬಟಾನಿಕಲ್ ಗಾರ್ಡನ್-ಇಟಾಲಿಯನ್ & ರೋಸ್ ಗಾರ್ಡನ್-ಬೋಟ್ ಹೌಸ್ (ಪ್ರಯಾಣ ದರ ವಯಸ್ಕರಿಗೆ: ರೂ.1600/- ಮತ್ತು ಮಕ್ಕಳಿಗೆ: ರೂ.1200/-

ಈ ಎಲ್ಲ ಸಾರಿಗೆಗಳು ಬೆಳಿಗ್ಗೆ ಮೈಸೂರಿನಿಂದ ಹೊರಟು ನಂತರ ಸಾಯಂಕಾಲ ಮೈಸೂರಿಗೆ ವಾಪಸ್ಸಾಗುತ್ತವೆ. ಈ ಎಲ್ಲ ವಿಶೇಷ ಪ್ಯಾಕೇಜ್ ಟೂರ್, ಸೆಪ್ಟೆಂಬರ್ 29ರಿಂದ ಅಕ್ಟೋಬರ್ 13 ರವರೆಗೆ ಇರಲಿದೆ. ಪ್ಯಾಕೇಜ್ ಟೂರ್​​​ಗಳ ಟಿಕೆಟ್‍ಗಳನ್ನು ಕೆಎಸ್​ಆರ್​ಟಿಸಿ ವೆಬ್​​​​​ಸೈಟ್​​ನಲ್ಲಿಇಲ್ಲವೇ ನಿಗಮದ ಮುಂಗಡ ಟಿಕೆಟ್ ಕಾಯ್ದಿರಿಸುವ ಕೌಂಟರ್​​ಗಳ ಮೂಲಕ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ABOUT THE AUTHOR

...view details