ಕರ್ನಾಟಕ

karnataka

ETV Bharat / state

ಮುಷ್ಕರಕ್ಕೆ ಮೂಗುದಾರ! ಸಾರಿಗೆ ನೌಕರರ ರಜೆ ರದ್ದುಗೊಳಿಸಿ ಕೆಎಸ್ಆರ್​ಟಿಸಿ ಆದೇಶ

ಸಾರಿಗೆ ನೌಕರರ ರಜೆ ರದ್ದುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ವೀಕ್ ಆಫ್, ತುರ್ತು ರಜೆ ಬಿಟ್ಟು ಎಲ್ಲಾ ನೌಕರರ ರಜೆಗಳನ್ನು ರದ್ದುಪಡಿಸಲಾಗಿದೆ. ಬಿಎಂಟಿಸಿ ಈಗಾಗಲೇ ಈ ಕ್ರಮ ತೆಗೆದುಕೊಂಡಿದೆ.

ಸಾರಿಗೆ ನೌಕರರ ರಜೆ ರದ್ದುಗೊಳಿಸಿ ಕೆಎಸ್ಆರ್​ಟಿಸಿ ಆದೇಶ
ಸಾರಿಗೆ ನೌಕರರ ರಜೆ ರದ್ದುಗೊಳಿಸಿ ಕೆಎಸ್ಆರ್​ಟಿಸಿ ಆದೇಶ

By

Published : Apr 6, 2021, 1:27 PM IST

ಬೆಂಗಳೂರು:ನಾಳೆ ಸಾರಿಗೆ ನೌಕರರ ಮುಷ್ಕರದ ಅಸ್ತ್ರಕ್ಕೆ ಕೆಎಸ್ಆರ್​ಟಿಸಿ ಪ್ರತ್ಯಸ್ತ್ರ ಪ್ರಯೋಗಿಸಿದೆ.

ಸಾರಿಗೆ ನೌಕರರ ರಜೆ ರದ್ದುಗೊಳಿಸಿ ಆದೇಶ ಹೊರಡಿಸಿದೆ. ವೀಕ್ ಆಫ್, ತುರ್ತು ರಜೆ ಬಿಟ್ಟು ಎಲ್ಲಾ ನೌಕರರ ರಜೆಗಳನ್ನು ರದ್ದುಪಡಿಸಿದೆ. ಅನಗತ್ಯ ರಜೆ ಹಾಕಿದರೆ ವೇತನ ಕಟ್ ಮಾಡುವ ಎಚ್ಚರಿಕೆಯನ್ನು ಕೆಎಸ್‌ಆರ್‌ಟಿಸಿ ನೀಡಿದೆ. ನಾಳೆಯಿಂದ ಅನಗತ್ಯವಾಗಿ ರಜೆ ಹಾಕಿದರೆ ವೇತನ ನೀಡಲ್ಲ ಎಂದು ಸುತ್ತೋಲೆ ಹೊರಡಿಸಿದೆ.

ಇದನ್ನೂ ಓದಿ:ಎಸ್ಐಟಿಗೆ ನ್ಯಾಯಸಮ್ಮತವಾಗಿ ಕೆಲಸ ಮಾಡಲು ಸೂಚನೆ ನೀಡಿದ್ದೇನೆ: ಬೊಮ್ಮಾಯಿ

ಪರಿಸ್ಥಿತಿ ಸಹಜ ಸ್ಥಿತಿಗೆ ಬರುವವರೆಗೆ ಈ ಆದೇಶ ಅನ್ವಯವಾಗಲಿದೆ. ಅನಗತ್ಯವಾಗಿ ರಜೆ ಹಾಕಿದರೆ ಸಿಬ್ಬಂದಿ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಕೆಎಸ್ಆರ್​ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ಆದೇಶ ಹೊರಡಿಸಿದ್ದಾರೆ. ಈಗಾಗಲೇ ಬಿಎಂಟಿಸಿ ರಜೆ ರದ್ದುಗೊಳಿಸಿ ಎಂದು ಆದೇಶ ಹೊರಡಿಸಿದೆ‌‌.

ABOUT THE AUTHOR

...view details