ಬೆಂಗಳೂರು :ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ದಿವಾಳಿ ಹಂತಕ್ಕೆ ತಲುಪಿ ಬಿಡ್ತಾ? ದೇಶದ ನಂಬರ್ ಒನ್ ಸಂಸ್ಥೆ ಕೆಎಸ್ಆರ್ಟಿಸಿ ಸಾಲದ ಚಕ್ರಸುಳಿಯಲ್ಲಿ ಸಿಲುಕಿ ತತ್ತರಿಸಿದೆ. ಈ ಮೂಲಕ ಸರ್ಕಾರದ ಪಾಲಿಗೆ ರಾಜ್ಯ ಸಾರಿಗೆ ನಿಗಮಗಳು ಬಿಳಿಯಾನೆಯಾಗಿವೆ. ಕೆಎಸ್ಆರ್ಟಿಸಿಯಲ್ಲಿ ಹದಗೆಟ್ಟ ಆರ್ಥಿಕ ಪರಿಸ್ಥಿತಿಯಿಂದಾಗಿ ಸದ್ಯ ಸಾಲಕ್ಕಾಗಿ ಬ್ಯಾಂಕ್ಗಳ ಹುಡುಕಾಟ ನಡೆಯುತ್ತಿದೆ.
ಕೆಎಸ್ಆರ್ಟಿಸಿ ಸ್ಟಾಪ್ ಅಂಡ್ ವರ್ಕ್ಸ್ ಫೆಡರೇಷನ್ ಕಾರ್ಯದರ್ಶಿ ನಾಗರಾಜ್ ಪ್ರತಿಕ್ರಿಯೆ ನೀಡಿರುವುದು.. ಈಗಾಗಲೇ ಬಿಎಂಟಿಸಿ ನಿಗಮವೂ ಸಾಲಕ್ಕಾಗಿ ಶಾಂತಿನಗರ ಟಿಟಿಎಂಸಿ ಅಡಮಾನ ಇಟ್ಟಿದ್ದು ಆಯಿತು. ಇದೀಗ ಕೆಎಸ್ಆರ್ಟಿಸಿ ಸರದಿ ಶುರುವಾಗಿದೆ. ತಾನಿರುವ ಕಟ್ಟಡವನ್ನೇ ಸಾಲಕ್ಕಾಗಿ ಅಡಮಾನ ಇಡಲು ಮುಂದಾಗಿದ್ದು, ಇದಕ್ಕಾಗಿ ಜಾಹೀರಾತು ಹೊರಡಿಸಿದೆ.
ಕಡಿಮೆ ಬಡ್ಡಿದರಲ್ಲಿ ಸಾಲ ನೀಡುವ ಬ್ಯಾಂಕ್ಗಳ ಬಾಗಿಲು ತಟ್ಟಿರುವ ಕೆಎಸ್ಆರ್ಟಿಸಿ ಅಧಿಕಾರಿಗಳು, ನಮ್ಮ ಷರತ್ತುಗಳ ಅನ್ವಯ ಆಸಕ್ತ ರಾಷ್ಟ್ರೀಕೃತ ಬ್ಯಾಂಕ್‌ಗಳು ಟೆಂಡರ್‌ನಲ್ಲಿ ಭಾಗವಹಿಸಿ ಸಾಲ ನೀಡುವಂತೆ ಕೆಎಸ್ಆರ್ಟಿಸಿ ಮನವಿ ಮಾಡಿದೆ.
ಅಕ್ಷರಶಃ ಮುಳುಗುವ ಹಡಗಿನಂತಾಗಿರುವ ದೇಶದ ಅತ್ಯುತ್ತಮ ಸಾರಿಗೆ ನಿಗಮ, ಬಾಕಿ ಹೊಣೆಗಾರಿಕೆ ಪಾವತಿ ಮಾಡಲು 220 ಕೋಟಿ ಸಾಲ ಬೇಕೆಂದು ತಿಳಿಸಿದೆ. ಸಾಲದ ಭದ್ರತೆಯಾಗಿ ನಿಗಮದ ಒಡೆತನದ ಸ್ಥಿರಾಸ್ತಿಯನ್ನೇ ಅಡಮಾನ ಇಟ್ಟಿವೆ.
ಸಾಲದ ಮೊತ್ತವನ್ನು ಒಂದೇ ಕಂತಿನಲ್ಲಿ ಪಡೆಯಲಾಗುವುದು. ಸಾಲದ ಮರುಪಾವತಿ ಅವಧಿ 7 ವರ್ಷಗಳಿಗೆ ನಿಗದಿಪಡಿಸಲಾಗಿದ್ದು, ಸಾಲ ಮರು ಪಾವತಿ ಅವಧಿ 6 ತಿಂಗಳ ನಂತರ ಪ್ರಾರಂಭವಾಗುವುದು. ಎಲ್ಲಾ ಷೆಡ್ಯೂಲ್ಡ್ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳು ಈ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗಿಯಾಗುವಂತೆ ಮನವಿ ಮಾಡಿದೆ.
ಕೆಎಸ್ಆರ್ಟಿಸಿ ಸಂಸ್ಥೆಗೆ ಸಾಲ ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಸಾಲ ನೀಡುವ ಪ್ರಸ್ತಾವನೆಯನ್ನು ಫೆಬ್ರವರಿ 8ರ ಸಂಜೆ 4 ಗಂಟೆಯೊಳಗೆ ಕಳಿಸುವಂತೆ ಜಾಹೀರಾತಿನಲ್ಲಿ ತಿಳಿಸಲಾಗಿದೆ. ಈಗಾಗಲೇ ಬಿಎಂಟಿಸಿ ನಿಗಮವೂ ಅಡಮಾನ ಇಟ್ಟಿರುವ ಶಾಂತಿನಗರ ಬಸ್ ಡಿಪೋ ಬಡ್ಡಿ ಕಟ್ಟೋದಕ್ಕೆ ಪರದಾಡ್ತಿದೆ. ಇದರ ನಡುವೆ ನಷ್ಟದಿಂದ ಪಾರಾಗಲು ಕೋಟಿ ಕೋಟಿ ಸಾಲ ಪಡೆಯಲು ಕೆಎಸ್ಆರ್ಟಿಸಿ ಮುಂದಾಗ್ತಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಕೆಎಸ್ಆರ್ಟಿಸಿ ಸ್ಟಾಪ್ ಅಂಡ್ ವರ್ಕ್ಸ್ ಫೆಡರೇಷನ್ ಕಾರ್ಯದರ್ಶಿ ನಾಗರಾಜ್, ಈಗಾಗಲೇ ಬಿಎಂಟಿಸಿ ತನ್ನ ಕಟ್ಟಡವನ್ನ, ಡಿಪೋವನ್ನ ಅಡಮಾನ ಇಟ್ಟಿದೆ. ಇದೀಗ ಕೆಎಸ್ಆರ್ಟಿಸಿ ಅಡಮಾನ ಇಡಲು ಮುಂದಾಗ್ತಿದೆ. ಈ ಪರಿಸ್ಥಿತಿ ಬರಲು ಪ್ರಮುಖ ಕಾರಣವಾಗಿರುವುದು ಸಚಿವರು, ಸಂಸ್ಥೆಯನ್ನ ಬೆಳೆಸಲು ಸರಿಯಾದ ಪ್ರಯತ್ನ ಮಾಡಬೇಕಿತ್ತು. ಆದರೆ, ಅದನ್ನ ಯಾರು ಮಾಡಲಿಲ್ಲ ಅಂತಾ ಬೇಸರ ವ್ಯಕ್ತಪಡಿಸಿದರು.
ಓದಿ:ಕೇಂದ್ರ ಬಜೆಟ್ ಸಮತೋಲಿತ ; ಎಲ್ಲ ಕ್ಷೇತ್ರಗಳಿಗೂ ನ್ಯಾಯ ಒದಗಿಸುವ ಕಾರ್ಯವಾಗಿದೆ - ಐ ಎಸ್ ಪ್ರಸಾದ್