ಇವತ್ತಿನ ಪರಿಸ್ಥಿತಿಯಲ್ಲಿ 6ನೇ ವೇತನ ಜಾರಿ ಸಾಧ್ಯವೇ ಇಲ್ಲ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದು, ಹಠ ಬಿಟ್ಟು ಬಂದು ಕರ್ತವ್ಯದಲ್ಲಿ ತೊಡಗಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ. ಇವತ್ತಿನಿಂದ ನಿಮ್ಮ ಬಸ್‌ಗಳನ್ನ ಓಡಿಸೋಕೆ ಶುರು ಮಾಡಬೇಕು, ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿರುವಾಗ ಈ ರೀತಿ ಹಠ ಮಾಡೋದು ಎಷ್ಟರ ಮಟ್ಟಿಗೆ ಸರಿ ಎಂದು ನೀವೇ ಯೋಚನೆ ಮಾಡಿ. ಮತ್ತೊಮ್ಮೆ ಮನವಿ ಮಾಡುತ್ತೇನೆ, ಹಠ ಬಿಟ್ಟು ಬನ್ನಿ ಎಂದು ಬಿಎಸ್ವೈ ನೌಕರರಲ್ಲಿ ಮನವಿ ಮಾಡಿದ್ದಾರೆ.
DAY-3 ಸಾರಿಗೆ ನೌಕರರ ಮುಷ್ಕರ: ಹಠ ಬಿಟ್ಟು ಕರ್ತವ್ಯದಲ್ಲಿ ತೊಡಗಿಕೊಳ್ಳಿ- ಸಿಎಂ ಮನವಿ - transportation staffs strike
11:42 April 09
ಹಠ ಬಿಟ್ಟು ಬನ್ನಿ ಎಂದು ಸಿಎಂ ಯಡಿಯೂರಪ್ಪ ಮನವಿ
10:22 April 09
ಇಬ್ಬರು ಸಾರಿಗೆ ನೌಕರರ ಬಂಧನ
ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಬಳ್ಳಾರಿಯಲ್ಲಿ ಇಬ್ಬರು ಸಾರಿಗೆ ನೌಕರರನ್ನು ಬಂಧಿಸಲಾಗಿದೆ. ಕರ್ತವ್ಯಕ್ಕೆ ಹಾಜರಾಗಿದ್ದ ದೇವೆಂದ್ರ ಮಡಿವಾಳ ಎಂಬುವವರಿಗೆ ಮುಷ್ಕರಕ್ಕೆ ಬೆಂಬಲಿಸಬೇಕೆಂದು ತಾಕೀತು ಮಾಡಿ ಬಸ್ಗೆ ಕಲ್ಲು ತೂರಿ ಗಾಜು ಪುಡಿ-ಪುಡಿ ಮಾಡಿದ್ದಾರೆ. ಈ ಹಿನ್ನೆಲೆ ರಾಜ್ಯ ಸರ್ಕಾರದ ಆಸ್ತಿಗೆ ನಷ್ಟವುಂಟು ಮಾಡಿದ್ದರ ಕುರಿತು ಸಂಡೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ಇಬ್ಬರು ಆರೋಪಿತರನ್ನ ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
09:54 April 09
ಸಾರಿಗೆ ನೌಕರ ಆತ್ಮಹತ್ಯೆಗೆ ಯತ್ನ
- ಕೆಲಸಕ್ಕೆ ಹಾಜರಾಗುವಂತೆ ಒತ್ತಡ ಆರೋಪ
- ಅಧಿಕಾರಿಗಳ ಒತ್ತಡದಿಂದ ಸಾರಿಗೆ ನೌಕರ ಆತ್ಮಹತ್ಯೆ ಯತ್ನ
- ಮನನೊಂದು ಗದಗದಲ್ಲಿ ಸಾರಿಗೆ ಸಿಬ್ಬಂದಿ ಆತ್ಮಹತ್ಯೆ ಯತ್ನ
- ವಸಂತ ರಾಮದುರ್ಗ(48) ಆತ್ಮಹತ್ಯೆಗೆ ಯತ್ನಿಸಿದ ಚಾಲಕ
- ವಿಷ ಸೇವಿಸಿ ಬಸ್ ಚಾಲಕ ಆತ್ಮಹತ್ಯೆ ಯತ್ನ
- ಜಿಲ್ಲಾ ಸಾರಿಗೆ ನೌಕರರ ಸಂಘದ ಮುಖ್ಯಸ್ಥರಾಗಿರುವ ವಸಂತ
- ಹಿರಿಯ ಅಧಿಕಾರಿಗಳಿಂದ ಕರ್ತವ್ಯಕ್ಕೆ ಹಾಜರಾಗುವಂತೆ ಒತ್ತಡ
- ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಸಂತ ರಾಮದುರ್ಗ
09:46 April 09
ಬಸ್ ಚಲಾಯಿಸಿದ ನೌಕರನಿಗೆ ಶ್ರದ್ಧಾಂಜಲಿ
- ಮುಷ್ಕರ ಬಿಟ್ಟು ಕರ್ತವ್ಯಕ್ಕೆ ಮರಳಿದ ಸಿಬ್ಬಂದಿಗೆ ಶ್ರದ್ಧಾಂಜಲಿ
- ಬಳ್ಳಾರಿಯಿಂದ ಗುಂತಕಲ್ಲುಗೆ ಬಸ್ ಚಾಲನೆ ಮಾಡಿದ ಸಿಬ್ಬಂದಿ
- ಅಧಿಕಾರಿಗಳ ಮಾತಿಗೆ ಮಣಿದು ಬಸ್ ಚಾಲನೆ
- ಬಸ್ ಚಲಾಯಿಸಿದ್ದಕ್ಕೆ ಕೋಪಗೊಂಡು ಪ್ರತಿಭಟನಾಕಾರರಿಂದ ಶ್ರದ್ಧಾಂಜಲಿ
- ಸಹೋದ್ಯೋಗಿಗಳಿಂದಲೇ ಬಸ್ ಓಡಿಸಿದವರಿಗೆ ಶ್ರದ್ಧಾಂಜಲಿ ಸಲ್ಲಿಕೆ
- ಶ್ರದ್ಧಾಂಜಲಿ ಸಲ್ಲಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ನೌಕರರು
09:39 April 09
ಆತ್ಮಹತ್ಯೆಗೆ ಶರಣಾದ ಸಾರಿಗೆ ನೌಕರ
- ಸಾರಿಗೆ ಸಚಿವರ ತವರು ಜಿಲ್ಲೆಯಲ್ಲಿ ಸಾರಿಗೆ ನೌಕರ ಆತ್ಮಹತ್ಯೆ
- ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗುವಂತೆ ಹಿರಿಯ ಅಧಿಕಾರಿಗಳಿಂದ ಕಿರುಕುಳ ಆರೋಪ
- ಚಾಲಕ ಕಂ ನಿರ್ವಾಹಕರಾಗಿದ್ದ ಶಿವಕುಮಾರ್ ನೀಲಗಾರ ಆತ್ಮಹತ್ಯೆ
- ಬೆಳಗಾವಿ ಜಿಲ್ಲೆಯ ಸವದತ್ತಿ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿವಕುಮಾರ್
- ಕಳೆದ 12 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಶಿವಕುಮಾರ್
- ಸವದತ್ತಿ ಪಟ್ಟಣದ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ
09:31 April 09
ನೌಕರರ ಮನವೊಲಿಸಲು ದಿನಕ್ಕೆ 200 ರೂ.
- ನೌಕರರ ಮನವೊಲಿಸಲು ದಿನಕ್ಕೆ 200 ರೂ. ನೀಡಲು ಮುಂದಾದ ಸಾರಿಗೆ ಸಂಸ್ಥೆ
- 200 ರೂ. ನೀಡಲು ಮುಂದಾದ ಹೊಸಪೇಟೆಯ ಎನ್ಈಕೆಎಸ್ಆರ್ಟಿಸಿ ವಿಭಾಗ
09:03 April 09
ಮುಂದುವರಿದ ಮುಷ್ಕರ
- ಮೂರನೇ ದಿನವೂ ಮುಂದುವರೆದ ಸಾರಿಗೆ ನೌಕರರ ಮುಷ್ಕರ
- ಮೆಜೆಸ್ಟಿಕ್ನಲ್ಲಿ ರಸ್ತೆಗಿಳಿಯದ ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್
- ಬಸ್ಗಳಿಗಾಗಿ ಮೆಜೆಸ್ಟಿಕ್ ನಿಲ್ದಾಣದಲ್ಲಿ ಕಾದುಕುಳಿತ ಪ್ರಯಾಣಿಕರು
- ಖಾಸಗಿ ಬಸ್, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್, ಆಟೋಗಳಿಗೆ ಜನರ ಮೊರೆ
- ಸರ್ಕಾರ ಸೂಚಿಸಿದ ರೂಟ್ ಮ್ಯಾಪ್ನಂತೆಯೇ ಖಾಸಗಿ ವಾಹನಗಳ ಸಂಚಾರ
- ಖುದ್ದು ಸ್ಥಳದಲ್ಲೇ ಇದ್ದು ಅಧಿಕಾರಿಗಳಿಂದ ಪರಿಶೀಲನೆ
- ಇಂದು ಕೆಲಸಕ್ಕೆ ಹಾಜರಾಗದಿದ್ದರೆ ಕೆಲಸದಿಂದ ವಜಾ
- ಸಾರಿಗೆ ನೌಕರರಿಗೆ ಡೆಡ್ಲೈನ್ ಕೊಟ್ಟ ರಾಜ್ಯಸರ್ಕಾರ