ಕರ್ನಾಟಕ

karnataka

ETV Bharat / state

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಫ್ರೀಡಂ ಪಾರ್ಕ್​​​ನಲ್ಲಿ ಸಾರಿಗೆ ನೌಕರರ ಮುಷ್ಕರ..!

ಇಂದು ರಾಜ್ಯ ಸಾರಿಗೆ ನೌಕರರು ನಗರದ ಫ್ರೀಡಂ ಪಾರ್ಕ್​​​ನಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಅಂದ ಹಾಗೇ, ವೇತನ ಸೇರಿದಂತೆ ಹಲವು ಬೇಡಿಕೆ ಈಡೇರಿಸುವಂತೆ 15 ದಿನ ಮುಷ್ಕರವನ್ನ ಈ ಹಿಂದೆ ನೌಕರರು ನಡೆಸಿದ್ದರು.

ಫ್ರೀಡಂ ಪಾರ್ಕ್ ನಲ್ಲಿ ಸಾರಿಗೆ ನೌಕರರ ಮುಷ್ಕರ
ಫ್ರೀಡಂ ಪಾರ್ಕ್ ನಲ್ಲಿ ಸಾರಿಗೆ ನೌಕರರ ಮುಷ್ಕರ

By

Published : Sep 20, 2021, 1:07 PM IST

ಬೆಂಗಳೂರು: ಏಪ್ರಿಲ್​​​ನಲ್ಲಿ ನಡೆದ ಮುಷ್ಕರದಲ್ಲಿ ಭಾಗವಹಿಸಿದ್ದ ಸಿಬ್ಬಂದಿಗಳನ್ನ ವಜಾ, ಅಮಾನತು, ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, ಈ ಪ್ರಕರಣಗಳನ್ನ ವಾಪಸ್​​ ಪಡೆಯುವಂತೆ ಸೇರಿದಂತೆ, ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ.‌

ಇಂದು ರಾಜ್ಯ ಸಾರಿಗೆ ನೌಕರರು ನಗರದ ಫ್ರೀಡಂ ಪಾರ್ಕ್​​​ನಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಅಂದಹಾಗೇ, ವೇತನ ಸೇರಿದಂತೆ ಹಲವು ಬೇಡಿಕೆ ಈಡೇರಿಸುವಂತೆ 15 ದಿನ ಮುಷ್ಕರವನ್ನ ಈ ಹಿಂದೆ ನೌಕರರು ನಡೆಸಿದ್ದರು.

ಫ್ರೀಡಂ ಪಾರ್ಕ್ ನಲ್ಲಿ ಸಾರಿಗೆ ನೌಕರರ ಮುಷ್ಕರ

ಈ ವೇಳೆ, ಬಸ್ ಸಂಚಾರ ವ್ಯತ್ಯಯದಿಂದ ನೌಕರರನ್ನ ವಜಾ, ಅಮಾನತು, ವರ್ಗಾವಣೆ ಮಾಡಿ ನಿಗಮಗಳು ಶಿಕ್ಷೆ ನೀಡಿದ್ದವು. ಹೀಗಾಗಿ ಮುಷ್ಕರ ವೇಳೆ ಅಮಾನತು, ವರ್ಗಾವಣೆ, ವಜಾ ಮಾಡಿದವರನ್ನ ಮತ್ತೆ ಸೇರ್ಪಡೆ ಮಾಡುವಂತೆ ಒತ್ತಾಯ ಮಾಡಲಾಗುತ್ತಿದೆ‌.

ಸಾರಿಗೆ ನೌಕರರಿಗೆ ಸಂಘಟನೆಗಳು ಬೆಂಬಲ ಕೊಟ್ಟಿದ್ದು, ನೌಕರರ ಮನೆಯ ಕಣ್ಣೀರಿನ ಶಾಪಕ್ಕೆ ಗುರಿಯಾಗಬೇಡಿ, ಕೂಡಲೇ ಸಮಸ್ಯೆ ಬಗೆಹರಿಸಿ ಎಂದು ಒತ್ತಾಯಿಸಿದರು. ಬಿಎಂಟಿಸಿ, ಕೆಎಸ್ಆರ್​ಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಮಗಮದ ನೌಕರರು ಧರಣಿಯಲ್ಲಿ ಭಾಗಿಯಾಗಿದ್ದಾರೆ.

ಸಾರಿಗೆ ನೌಕರರ ಬೇಡಿಕೆ:

  • ಸೇವೆಯಿಂದ ವಜಾ ಮಾಡಿರುವ ಎಲ್ಲ ಕಾರ್ಮಿಕರನ್ನ ಯಾವುದೇ ಷರತ್ತುಗಳಿಲ್ಲದೇ ಕೆಲಸಕ್ಕೆ ಪುನರ್ ನೇಮಕ
  • ವಿಭಾಗದಿಂದ ದೂರದ ವಿಭಾಗಗಳಿಗೆ ವರ್ಗಾವಣೆ ಮಾಡಿರುವ ನೌಕರರನ್ನ ಆಡಳಿತಾತ್ಮಕ ವರ್ಗಾವಣೆ ಎಂದು ಪರಿಗಣಿಸಿ ಯಾವ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರೋ ಆ ಘಟಕಕ್ಕೆ ನಿಯೋಜನೆ.
  • ಅಮಾನತು ಮಾಡಿರುವ ನೌಕರರನ್ನ ತೆರವುಗೊಳಿಸಬೇಕು. ಶಿಸ್ತು ಪ್ರಕ್ರಿಯೆ ಹೆಸರಿನ ಕಿರುಕುಳ ನಿಲ್ಲಬೇಕು.
  • ಮುಷ್ಕರ ಅವಧಿಯನ್ನ ಗೈರು ಹಾಜರಿ ಎಂದು ಪರಿಗಣಿಸಿ ಹಾಕುತ್ತಿರುವ ವಿಪರೀತ ದಂಡ, ಇಂಕ್ರಿಮೆಂಟ್ ಕಡಿತ ನಿಲ್ಲಬೇಕು.

ಬಸ್ ಸಂಚಾರದಲ್ಲಿ ಇಲ್ಲ ವ್ಯತ್ಯಯ :

ಇನ್ನು ನೌಕರರ ಮುಷ್ಕರದಿಂದ ಬಸ್ ಸಂಚಾರ ಇರುತ್ತೋ ಇಲ್ವೋ ಎಂಬ ಅನುಮಾನಗಳು ಮೂಡಿದ್ದವು‌. ‌ಆದರೆ, ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ ಎಂದು ನಿಗಮಗಳು ಪ್ರಕಟಣೆ ಹೊರಡಿಸಿವೆ. ಎಲ್ಲ ಭಾಗಗಳಿಗೂ ಎಂದಿನಂತೆ ಬಸ್ ನಿಲ್ದಾಣಗಳಿಂದ ಬಸ್​​​​ಗಳು ಸಂಚರಿಸುತ್ತವೆ ಎಂದು ಮಾಹಿತಿ ನೀಡಿವೆ.

ABOUT THE AUTHOR

...view details