ಬೆಂಗಳೂರು: ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿ ಹಾಗೂ ನೌಕರರ ಫೆಡರೇಷನ್ ಎಐಟಿಯುಸಿ ವತಿಯಿಂದ ಲಾಲ್ಭಾಗ್ ನಿಂದ, ಶಾಂತಿನಗರದ ಕೆಎಸ್ಆರ್ಟಿಸಿ ಡಿಪೋವರೆಗೆ ಬೆಂಗಳೂರು ಚಲೋ ಪ್ರತಿಭಟನಾ ಜಾಥ ನಡೆಸಿದ್ರು.
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕೆ.ಎಸ್.ಆರ್.ಟಿ.ಸಿ ನೌಕರರಿಂದ ಬೆಂಗಳೂರಲ್ಲಿ ಬೃಹತ್ ಜಾಥ - undefined
ನೌಕರರ ಮೇಲಿನ ದೌರ್ಜನ್ಯ ನಿಲ್ಲಿಸುವಂತೆ ಆಗ್ರಹಿಸಿ ಕೆ.ಎಸ್.ಆರ್.ಟಿ.ಸಿ ನೌಕರರು ಲಾಲ್ಬಾಗ್ ನಿಂದ ಶಾಂತಿನಗರದವರೆಗೆ ಬೃಹತ್ ಜಾಥ ನಡೆಸಿದರು.
ಸಾರಿಗೆ ಸಂಸ್ಥೆಯ ಎಲ್ಲಾ ನಾಲ್ಕು ರಸ್ತೆ ಸಾರಿಗೆ ನಿಗಮಗಳನ್ನು ವಿಲೀನಗೊಳಿಸಿ ಒಂದೇ ಸಂಸ್ಥೆ ಮಾಡಬೇಕು. ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಿ ಸವಲತ್ತುಗಳನ್ನು ನೀಡಬೇಕು. ಬಾಕಿ ಇರುವ ಪಿಎಫ್, ವಿಮಾ ಮೊತ್ತಗಳನ್ನು ಕೂಡಲೇ ಪಾವತಿಸಬೇಕು. ವಿವಿಧ ರೀತಿಯಲ್ಲಿ ನೌಕರರಿಗೆ ದಂಡ ವಿಧಿಸುತ್ತಿದ್ದು, ದಂಡದ ಪ್ರಮಾಣವನ್ನು ಕಡಿಮೆ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಅಲ್ಲದೆ ಸಾರಿಗೆ ಸಚಿವ ಡಿಸಿ ತಮ್ಮಣ್ಣ ಅವರಿಂದ ಭ್ರಷ್ಟಾಚಾರ ಹೆಚ್ಚಾಗುತ್ತಿದೆ ಎಂದು ಆರೋಪಿಸಿದ ನೌಕರರು ತಮ್ಮಣ್ಣ ಅವರನ್ನು ಸಚಿವ ಸ್ಥಾನದಿಂದ ತೆಗೆಯಬೇಕೆಂದು ಆಗ್ರಹಿಸಿದರು. ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದರಿಂದ ಬಸ್ ಸಂಚಾರ ವ್ಯತ್ಯಯವಾಗಲಿಲ್ಲ. ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ ಸಂಚಾರ ಯಥಾಸ್ಥಿತಿಯಲ್ಲಿದ್ದವು.