ಕರ್ನಾಟಕ

karnataka

ETV Bharat / state

ಸಾರಿಗೆ ನೌಕರರ ಮುಷ್ಕರದ ಮುಂದಾಳತ್ವ ವಹಿಸಿದ್ದ ಸಿಬ್ಬಂದಿ ವಜಾ - KSRTC Employee who lead the strike was Dismissed

ಸಾರಿಗೆ ನೌಕರರ ಪ್ರತಿಭಟನೆಯ ಮುಂದಾಳತ್ವ ವಹಿಸಿಕೊಂಡಿದ್ದ ಸಾರಿಗೆ ನೌಕರರ ಒಕ್ಕೂಟದ ಮುಖಂಡರನ್ನು ಕೆಲಸದಿಂದ ವಜಾ ಮಾಡಲಾಗಿದೆ ಎನ್ನಲಾಗಿದೆ.

KSRTC Employee who lead the strike was Dismissed
ಸಾರಿಗೆ ನೌಕರರ ಮುಷ್ಕರದ ಮುಂದಾಳತ್ವ ವಹಿಸಿದ್ದ ಸಿಬ್ಬಂದಿ ವಜಾ..!

By

Published : Dec 30, 2020, 4:07 PM IST

Updated : Dec 30, 2020, 5:53 PM IST

ಬೆಂಗಳೂರು: ಕೆಲ ದಿನಗಳ ಹಿಂದೆ ನಮ್ಮನ್ನು ಸರ್ಕಾರಿ ನೌಕರರನ್ನಾಗಿ ಮಾಡಿ ಎಂದು ಸಾರಿಗೆ ಮುಷ್ಕರ ನಡೆಸಲಾಗಿತ್ತು. ನೌಕರರ ಪ್ರತಿಭಟನೆಯ ಮುಂದಾಳತ್ವ ವಹಿಸಿಕೊಂಡಿದ್ದ ಸಾರಿಗೆ ನೌಕರರ ಒಕ್ಕೂಟದ ಮುಖಂಡ ಆನಂದ್ ಅವರನ್ನ ಅಧಿಕಾರಿಗಳು ಕೆಲಸದಿಂದ ವಜಾ ಮಾಡಿದ್ದಾರೆ ಎನ್ನಲಾಗಿದೆ.

ಸಾರಿಗೆ ನೌಕರರ ಒಕ್ಕೂಟದ ಮುಖಂಡ ಆನಂದ್ ಹೇಳಿಕೆ

ಈ ಬಗ್ಗೆ ಸ್ವತಃ ಬಿಎಂಟಿಸಿ ಚಾಲಕ ಆನಂದ್ ಪ್ರತಿಕ್ರಿಯೆ ನೀಡಿದ್ದು, ಆಡಳಿತ ಮಂಡಳಿ ಸೇಡಿನ ಕ್ರಮದ ಮೂಲಕ ಕೆಲಸದಿಂದ ವಜಾ ಮಾಡಿದೆ. ಈ ವಿಚಾರವನ್ನು ಸಾರಿಗೆ ಸಚಿವರು ಹಾಗೂ ಅಧ್ಯಕ್ಷರ ಗಮನಕ್ಕೆ ತಂದಿದ್ದು, ಒಂದು ವಾರದ ಗಡವು ನೀಡಿದ್ದಾರೆ ಎಂದು ತಿಳಿಸಿದ್ದಾರೆ.

2014ರಲ್ಲಾದ ಪ್ರಕರಣದ ಕಾರಣ ನೀಡಿ ವಜಾ ಮಾಡಿದ್ದಾರೆ. 2014ರಲ್ಲಿ ನಿರ್ವಾಹಕನೊಬ್ಬ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಆಗ ಪರಿಹಾರವಾಗಿ ಕೇವಲ 50 ಸಾವಿರ ರೂ. ಕೊಡಲು ತೀರ್ಮಾನ ಮಾಡಲಾಗಿತ್ತು.‌ ಆಗ ನಾನು ಸ್ಥಳಕ್ಕೆ ಹೋಗಿ 10 ಲಕ್ಷ ಕೊಡುವಂತೆ ಒತ್ತಾಯ ಮಾಡಿದ್ದೆ. ಆಗ ನನ್ನ ಮೇಲೆ ಚಾರ್ಜ್ ಶೀಟ್ ಹಾಕಲಾಗಿತ್ತು. ಆದರೆ ಬಳಿಕ ಎಲ್ಲವೂ ಮುಗಿದು ಹೋಗಿತ್ತು. ಈಗ ಅದೇ ಕೇಸ್​ ರೀ ಓಪನ್ ಮಾಡಿ ಈ ರೀತಿ ದ್ವೇಷದ ಕ್ರಮ ಕೈಗೊಂಡಿದ್ದಾರೆ‌ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Last Updated : Dec 30, 2020, 5:53 PM IST

For All Latest Updates

ABOUT THE AUTHOR

...view details