ಬೆಂಗಳೂರು:ಕೆ.ಎಸ್.ಆರ್.ಟಿ.ಸಿಯು ಇತ್ತೀಚೆಗೆ ನೂತನವಾಗಿ ಕಾರ್ಯಾಚರಣೆಗೊಳಿಸಿರುವ ಕನಸಿನೊಂದಿಗೆ ಪ್ರಯಾಣಿಸಿ ಎನ್ನುವ ಪದನಾಮೆಯನ್ನೊಳಗೊಂಡ ಅಂಬಾರಿ ಡ್ರೀಮ್ ಕ್ಲಾಸ್ ಮಲ್ಟಿ ಆಕ್ಸೆಲ್ ವೋಲ್ವೋ ಸ್ಲೀಪರ್ ಬಸ್ ಸೇವೆ ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರವಾಗಿದೆ.
ಕೆಎಸ್ಆರ್‌ಟಿಸಿಗೆ ಮತ್ತೊಂದು ಗರಿ: ಡ್ರೀಮ್ ಕ್ಲಾಸ್ ಸೇವೆಗೆ ಅಂತಾರಾಷ್ಟ್ರೀಯ ಪ್ರಶಸ್ತಿ - ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ
ದೇಶದ ಅತ್ಯತ್ತಮ ಸಾರಿಗೆ ಸಂಸ್ಥೆಗಳಲ್ಲಿ ಒಂದಾಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮುಕುಟಕ್ಕೆ ಮತ್ತೊಂದು ಗರಿ ಬಂದಿದೆ.
ಇತ್ತೀಚೆಗಷ್ಟೇ ಆರಂಭಿಸಿದ್ದ ನೂತನ ಡ್ರೀಮ್ ಕ್ಲಾಸ್ ಸೇವೆಗೆ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಅಂಬಾರಿ ಡ್ರೀಮ್ ಕ್ಲಾಸ್ ಉಪಕ್ರಮ ಅಂತಾರಾಷ್ಟ್ರೀಯ ಸಿ.ಎಂ.ಒ ಬ್ರಾಡಿಂಗ್ ಎಕ್ಸ್ಲೆನ್ಸ್ ಸಪ್ಲೈ ಚೈನ್ ಅಂಡ್ ಲಾಜಿಸ್ಟಿಕ್ ವರ್ಗದ ಪ್ರಶಸ್ತಿಗೆ ಭಾಜನವಾಗಿದೆ. ಸಿಂಗಾಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಕಾರ್ಯದರ್ಶಿ ಹಾಗೂ ಕೆಎಸ್ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಅವರಿಗೆ ಸಿಎಂಒ ಏಷ್ಯಾ ವತಿಯಿಂದ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಿಎಂಒ ಏಷ್ಯಾವು ಜಾಗತಿಕ ಮಟ್ಟದ ಬ್ರಾಡಿಂಗ್ ಕ್ಷೇತ್ರದ ಜಾಲವಾಗಿದ್ದು, ಬ್ರಾಡಿಂಗ್ ಕ್ಷೇತ್ರದಲ್ಲಿ ಉನ್ನತ ಮಟ್ಟದ ಜ್ಞಾನ ವಿನಿಮಯ ನಾಯಕತ್ವದ ವೇದಿಕೆಯಾಗಿದೆ. ಬ್ರಾಡಿಂಗ್ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂಸ್ಥೆಗಳ ಮುಖ್ಯಸ್ಥರು, ಬ್ರಾಂಡ್ ಪಾಲಕರು ಮತ್ತು ಸೃಜನಶೀಲ ನಾಯಕತ್ವವನ್ನು ಪ್ರೋತ್ಸಾಹಿಸಿ, ಗುರುತಿಸುವ ವ್ಯವಸ್ಥೆ ಇದಾಗಿದೆ.