ಕರ್ನಾಟಕ

karnataka

ಸಾರಿಗೆ ನೌಕರರಿಗೆ ಗುಡ್​ನ್ಯೂಸ್.. ನಾಳೆಯಿಂದ ಶುರುವಾಗಲಿದೆ ಕೆಎಸ್ಆರ್​ಟಿಸಿ ಕೋವಿಡ್ ಆಸ್ಪತ್ರೆ..

By

Published : Sep 11, 2021, 3:21 PM IST

ದೇಶದ ಸಾರಿಗೆ ನಿಗಮಗಳಲ್ಲಿಯೇ ಮೊದಲ ಪ್ರಯತ್ನವಾಗಿ ಐಸಿಯು, ಆಕ್ಸಿಜನ್, ವೆಂಟಿಲೇಟರ್​ವುಳ್ಳ ಸಾರಿಗೆ ಸುರಕ್ಷಾ ಸಂಚಾರಿ ನಿರ್ಮಾಣ ಮಾಡಿದ್ದ ಕೆಎಸ್ಆರ್​ಟಿಸಿ, ಇದೀಗ ತನ್ನ ನೌಕರರಿಗಾಗಿ ಕೋವಿಡ್ ಆಸ್ಪತ್ರೆಯೊಂದನ್ನ ನಿರ್ಮಾಣ ಮಾಡಿದೆ.‌.

ಸಾರಿಗೆ ನೌಕರರಿಗಾಗಿ ಕೋವಿಡ್ ಆಸ್ಪತ್ರೆ
ಸಾರಿಗೆ ನೌಕರರಿಗಾಗಿ ಕೋವಿಡ್ ಆಸ್ಪತ್ರೆ

ಬೆಂಗಳೂರು :ಕೋವಿಡ್ 3ನೇ ಅಲೆ ಎದುರಿಸಲು ಕೆಎಸ್ಆರ್​ಟಿಸಿ ಸಿದ್ಧವಾಗಿದೆ. ಇದಕ್ಕಾಗಿ ಸುಸಜ್ಜಿತ ಕೋವಿಡ್ ಆಸ್ಪತ್ರೆಯನ್ನ ರಾಜಧಾನಿಯಲ್ಲಿ ನಿರ್ಮಾಣ ಮಾಡಲಾಗಿದೆ. ಕೊರೊನಾ ಸಂದರ್ಭದಲ್ಲಿ ಹೊಸ ಹೊಸ ಪ್ರಯೋಗಗಳ ಮೂಲಕ ಜನ ಸಾಮಾನ್ಯರ ಮೆಚ್ಚುಗೆಗೆ ನಿಗಮ ಕಾರಣವಾಗಿತ್ತು.

ಕೆಎಸ್ಆರ್​ಟಿಸಿ ಕೋವಿಡ್ ಆಸ್ಪತ್ರೆ

ತನ್ನ ಹಳೆಯ ಬಸ್​ಗಳನ್ನ ಉಪಯೋಗಿಸಿಕೊಂಡು 20 ಮೊಬೈಲ್ ಫೀವರ್ ಕ್ಲಿನಿಕ್ ನಿರ್ಮಾಣ, ಮಿನಿ ಬಸ್ ಬಳಸಿ ಸಾರಿಗೆ ಸಂಜೀವಿನಿ ಆ್ಯಂಬುಲೆನ್ಸ್, ತನ್ನ ನೌಕರರಿಗಾಗಿ ಬಸವೇಶ್ವರ ಬಸ್ ನಿಲ್ದಾಣದಲ್ಲಿ 200 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ನಿರ್ಮಾಣ ಮಾಡಿ ಅದೆಷ್ಟೋ ಸೋಂಕಿತರ ಚಿಕಿತ್ಸೆಗೆ ಸಹಕಾರಿಯಾಗಿತ್ತು‌.

ದೇಶದ ಸಾರಿಗೆ ನಿಗಮಗಳಲ್ಲಿಯೇ ಮೊದಲ ಪ್ರಯತ್ನವಾಗಿ ಐಸಿಯು, ಆಕ್ಸಿಜನ್, ವೆಂಟಿಲೇಟರ್​ವುಳ್ಳ ಸಾರಿಗೆ ಸುರಕ್ಷಾ ಸಂಚಾರಿ ನಿರ್ಮಾಣ ಮಾಡಿದ್ದ ಕೆಎಸ್ಆರ್​ಟಿಸಿ, ಇದೀಗ ತನ್ನ ನೌಕರರಿಗಾಗಿ ಕೋವಿಡ್ ಆಸ್ಪತ್ರೆಯೊಂದನ್ನ ನಿರ್ಮಾಣ ಮಾಡಿದೆ.‌

ನಗರದ ಜಯನಗರದ ಟಿ ಬ್ಲಾಕ್​ನಲ್ಲಿರುವ ಅತ್ಯುತ್ತಮ ಸೌಲಭ್ಯಗಳುಳ್ಳ ಕೋವಿಡ್ ಕೆಎಸ್ಆರ್​ಟಿಸಿ ಆಸ್ಪತ್ರೆಯ ಉದ್ಘಾಟನೆ ನಾಳೆ ಆಗಲಿದೆ. ಸುಮಾರು 99 ಲಕ್ಷ ರೂ. ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣವಾಗಿದ್ದು, 50 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. 3ನೇ ಅಲೆ ಎದುರಾದರೆ ತನ್ನ ನೌಕರರಿಗೆ ಉತ್ತಮ ಚಿಕಿತ್ಸೆ ನೀಡಲು ಈ ವ್ಯವಸ್ಥೆ ಮಾಡಲಾಗಿದೆ.

ನಾಲ್ಕು ಸಾರಿಗೆ ನಿಗಮದ ನೌಕರರು ಹಾಗೂ ಕುಟುಂಬದವರು ಈ ಆಸ್ಪತ್ರೆ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಇನ್ನು, ಇದರ ನಿರ್ವಹಣೆಯನ್ನ ಆರೋಗ್ಯ ಇಲಾಖೆ ಅಥವಾ ಬಿಬಿಎಂಪಿಗೆ ಹಸ್ತಾಂತರಿಸಲಿದೆ.

ಕೆಎಸ್ಆರ್​ಟಿಸಿ ಕೋವಿಡ್ ಆಸ್ಪತ್ರೆ

ಈ ಆಸ್ಪತ್ರೆಯಲ್ಲಿ ಜನ ಸಾಮಾನ್ಯರು ಕೂಡ ಚಿಕಿತ್ಸೆ ಪಡೆಯಬಹುದು. ಆದರೆ, ಇದರ ಮೊದಲ ಆದ್ಯತೆ ನಿಗಮದ ಸಿಬ್ಬಂದಿಗೆ ದೊರೆಯಲಿದೆ. ಈ ಕೋವಿಡ್ ಆಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆಗೆ ಹೈ ನೇಸಲ್ ಪ್ಲೋ ವ್ಯವಸ್ಥೆ, ಘಟಕ ನಿರ್ಮಾಣ ಮಾಡಲಾಗಿದೆ. ಸೋಂಕಿತರಿಗೆ ಉನ್ನತ ಚಿಕಿತ್ಸೆಯ ಅನಿರ್ವಾಯತೆ ಉಂಟಾದರೆ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರ ಮಾಡಬಹುದಾಗಿದೆ.

ಓದಿ :ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಮಾಲಿವುಡ್​ನ ಖ್ಯಾತ ನಟ

ABOUT THE AUTHOR

...view details