ಕರ್ನಾಟಕ

karnataka

ETV Bharat / state

ಕೊಡಗು ಪ್ರವಾಹ: ಸಾರಿಗೆ ನೌಕರರಿಂದ ಸಂಗ್ರಹಿಸಿದ್ದ 9.17 ಹಣ ಸಿಎಂ ವಿಕೋಪ ನಿಧಿಗೆ - undefined

ಕೆಎಸ್ಆರ್​ಟಿಸಿ ನಾಲ್ಕು ನಿಗಮಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ, ಮಡಿಕೇರಿ ಸಂತ್ರಸ್ತರಿಗೆ ನೆರವಾಗುವ ಸಲುವಾಗಿ ಸಿಎಂ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ 9.17 ಕೋಟಿ ರೂ. ಚೆಕ್ ಅನ್ನು ನಿಗಮದ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಸಲ್ಲಿಸಿದರು.

ಸಿಎಂ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಕೆಎಸ್ಆರ್​ಟಿಸಿಯಿಂದ 9.17 ಕೋಟಿ ರೂ. ಚೆಕ್ ಸಲ್ಲಿಕೆ

By

Published : May 9, 2019, 5:49 PM IST

ಬೆಂಗಳೂರು: ಕೊಡಗು ಪ್ರವಾಹ ಸಂತ್ರಸ್ಥರಿಗಾಗಿ ಕೆಎಸ್ಆರ್​ಟಿಸಿ ಸಂಗ್ರಹಿಸಿದ್ದ 9.17 ಕೋಟಿ ರೂ.ಗಳ ಚೆಕ್​ ಅನ್ನು ಸಿಎಂ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ನೀಡಲಾಯಿತು.

ರಾಜ್ಯ ರಸ್ತೆ ಸಾರಿಗೆಯ ನಾಲ್ಕು ನಿಗಮಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ, ತಮ್ಮ ಒಂದು ದಿನದ ಸಂಬಳದಿಂದ ಸಂಗ್ರಹವಾದ ಹಣವನ್ನು ಮಡಿಕೇರಿ ಸಂತ್ರಸ್ಥರ ನೆರವಿಗಾಗಿ ಸಿಎಂ ಕಚೇರಿಗೆ ಬಂದು ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಶಾಸಕರಾದ ಶಿವಲಿಂಗೇಗೌಡ, ಸತ್ಯನಾರಾಯಣ, ಕೆ.ಎಸ್.ಆರ್.ಟಿ.ಸಿ. ಹಿರಿಯ ಅಧಿಕಾರಿಗಳಾದ ಬಸವರಾಜು, ಶಿವಯೋಗಿ ಕಳಸದ, ಎನ್.ವಿ.ಪ್ರಸಾದ ಉಪಸ್ಥಿತರಿದ್ದರು. ಇದೇ ವೇಳೆ ಕೆಎಸ್ಆರ್​ಟಿಸಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಿಂದ 17.81 ಲಕ್ಷ ರೂ.ಗಳ ಪರಿಹಾರ ನಿಧಿ ಚೆಕ್ ಕೂಡ ಸ್ವೀಕರಿಸಲಾಯಿತು.

For All Latest Updates

TAGGED:

ABOUT THE AUTHOR

...view details