ಬೆಂಗಳೂರು: ವಿವಿಧ ಸ್ಥಳಗಳಿಗೆ ಎಂದಿನಂತೆ ತೆರಳಬೇಕಿದ್ದ ಒಟ್ಟು 400 ಕೆಎಸ್ಆರ್ಟಿಸಿ ಬಸ್ಗಳ ಸೇವೆ ನಿಲ್ಲಿಸಲಾಗಿದೆ. 4129 ಸೀಟುಗಳನ್ನು ಬುಕ್ ಮಾಡಿ ನಂತರ ರದ್ದು ಮಾಡಿದ್ದು, ಪ್ರಯಾಣಿಕರಿಗೆ ಹಣ ವಾಪಸ್ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಒಂದು ಕಡೆ ನಿರಂತರ ಸುರಿಯುತ್ತಿರುವ ಮಳೆ, ಮತ್ತೊಂದು ಕಡೆ ಗುಡ್ಡ ಕುಸಿತ. ಇದರಿಂದಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು, ಇಂದು ಕೂಡಾ ಕೆಎಸ್ಆರ್ಟಿಸಿ ಬಸ್ ಸಂಚಾರ ರದ್ದು ಮಾಡಲಾಗಿತ್ತು. ಸಕಲೇಶಪುರ, ಮೂಡಿಗೆರೆ, ಕೊಪ್ಪ, ಚಾರ್ಮಾಡಿ ಘಾಟ್, ಶಿರಾಡಿ ಘಾಟ್ಗೆ ಬಸ್ ಸಂಚಾರ ಸ್ಥಗಿತವಾಗಿದ್ದು, ಇತ್ತ ಮೈಸೂರು-ನಂಜನಗೂಡಿಗೂ ಬಸ್ ಸಂಚಾರ ರದ್ದು ಮಾಡಲಾಗಿತ್ತು.