ಕರ್ನಾಟಕ

karnataka

ETV Bharat / state

ಬಸ್​ ಪ್ರಯಾಣಿಕರಿಗೆ ದರ ಏರಿಕೆ ಬಿಸಿ: ಪಾಸ್​ ಹೊಂದಿರುವವರಿಗಿಲ್ಲ ಸಮಸ್ಯೆ - ಕೆಎಸ್​ಆರ್​ಟಿಸಿ ಬಸ್​ ದರದಲ್ಲಿ ಹೆಚ್ಚಳ

2014ರ ಬಳಿಕ ಇದೀಗ ಕೆಎಸ್​ಆರ್​ಟಿಸಿ ತನ್ನ ಬಸ್​ ದರದಲ್ಲಿ ಹೆಚ್ಚಳ ಮಾಡಿದ್ದು, ಪರಿಷ್ಕೃತ ದರ ಫೆ.25ರ ಮಧ್ಯ ರಾತ್ರಿಯಿಂದಲೇ ಜಾರಿಗೆ ಬರಲಿದೆ. ಆದರೆ, ಈ ಬಾರಿಯ ದರ ಪರಿಷ್ಕರಣೆಯಲ್ಲಿ ಪ್ರಮುಖವಾಗಿ ವಿದ್ಯಾರ್ಥಿ ರಿಯಾಯಿತಿ ಬಸ್ ಪಾಸ್ ಮತ್ತು ವಿಕಲಚೇತನರ ಬಸ್ ಪಾಸ್ ದರಗಳನ್ನು ಹೆಚ್ಚಳ ಮಾಡಿಲ್ಲ. ಹಾಗಾಗಿ ಪಾಸ್​ ಹೊಂದಿರುವವರು ದರ ಪರಿಷ್ಕರಣೆಯ ಬಗ್ಗೆ ಚಿಂತೆ ಮಾಡುವ ಅವಶ್ಯಕತೆಯಿಲ್ಲ.

KSRTC bus ticket rate hike
ಬಸ್​ ದರ

By

Published : Feb 25, 2020, 11:30 PM IST

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್​ಆರ್​ಟಿಸಿ)ವು ದೇಶದಲ್ಲಿಯೇ ಅತ್ಯುತ್ತಮ ಸಾರಿಗೆ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರಯಾಣಿಕರಿಗೆ ಉತ್ತಮ ದರ್ಜೆಯ ಸೌಕರ್ಯಗಳನ್ನು ಒದಗಿಸುವ ಉದ್ದೇಶದಿಂದ ನೂತನ ಮಾದರಿಯ ಹೊಸ ಬಸ್​​​ಗಳ ಅಳವಡಿಕೆ, ಹೊಸ ಘಟಕ ಮತ್ತು ಬಸ್ ನಿಲ್ದಾಣಗಳ ನಿರ್ಮಾಣ, ನೂತನ ತಂತ್ರಜ್ಞಾನ ಅಳವಡಿಕೆ ಮತ್ತು ಬಸ್ ನಿಲ್ದಾಣಗಳ ನವೀಕರಣಗಳಂತಹ ಕಾರ್ಯಕ್ರಮಗಳ ಮೂಲಕ ಪ್ರಯಾಣಿಕರನ್ನು ತನ್ನತ್ತ ಆಕರ್ಷಿಸಿಸುವಲ್ಲಿ ಕೆಸ್​ಆರ್​ಟಿಸಿ ಯಶಸ್ವಿಯಾಗಿದೆ.

ಅಂದ ಹಾಗೆ 2014ರಲ್ಲಿ ಬಸ್ ಪ್ರಯಾಣ ದರ ಹೆಚ್ಚಳ ಮಾಡಲಾಗಿತ್ತು. ಇದೀಗ 5 ವರ್ಷಗಳ ಬಳಿಕ ಶೇ.12 ರಷ್ಟು ಟಿಕೆಟ್ ದರ ಏರಿಕೆ ಮಾಡಿಲಾಗಿದೆ.‌ ಇದಕ್ಕೆಲ್ಲ ಮುಖ್ಯ ಕಾರಣ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡೀಸೆಲ್ ಬೆಲೆ ಹೆಚ್ಚಳವಾಗುತ್ತಿರುವುದು. ಕಳೆದ ಬಾರಿಯ ಪ್ರಯಾಣ ದರ ಪರಿಷ್ಕರಣೆಯಿಂದ ಇದುವರೆಗೆ ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್‌ಗೆ ಒಟ್ಟು ರೂ.11.27 ರಷ್ಟು ಹೆಚ್ಚಳವಾಗಿದೆ‌. ಈ ಇಂಧನ ದರ ಪರಿಷ್ಕರಣೆಯಿಂದ ನಿಗಮಕ್ಕೆ ಪ್ರತಿ ವರ್ಷ ರೂ. 260.83 ಕೋಟಿ ಆರ್ಥಿಕ ಹೊರೆಯಾಗುತ್ತಿದೆ ಎಂದು ನಿಗಮ ತಿಳಿಸಿದೆ.

ಇದಲ್ಲದೆ, ಸರ್ಕಾರವು ದರ ಪರಿಷ್ಕರಣೆಗೆ ನಿಗದಿಪಡಿಸಿರುವ ಸೂತ್ರದಂತೆ, ನಿಗಮದ ನೌಕರರಿಗೆ ನೀಡಲಾಗುವ ತುಟ್ಟಿ ಭತ್ಯೆ ಪರಿಷ್ಕರಣೆಯು ಸಹ ಪರಿಗಣಿಸಬೇಕಾಗಿದೆ‌. ಇದರಿಂದಾಗಿ, ಕಾರ್ಯಾಚರಣೆಯ ವೆಚ್ಚದಲ್ಲಿ ರೂ. 340.38 ಕೋಟಿ ಅಧಿಕ ವೆಚ್ಚವಾಗುತ್ತಿದೆ. ಒಟ್ಟಾರೆ ವೆಚ್ಚವು ಪ್ರತಿ ವರ್ಷಕ್ಕೆ ರೂ. 601.21 ಕೋಟಿಗಳಷ್ಟಾಗಲಿದೆ. ನಿಗಮಕ್ಕೆ ಉಂಟಾಗಿರುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ಸಲುವಾಗಿ ಸಂಸ್ಥೆಯು ಪ್ರಯಾಣ ದರಗಳನ್ನು ಫೆ.25 ರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಪರಿಷ್ಕರಣೆ ಮಾಡಿದೆ.

ಪರಿಷ್ಕೃತ ದರ ಪಟ್ಟಿ

ಈ ಬಾರಿಯ ದರ ಪರಿಷ್ಕರಣೆಯಲ್ಲಿ ಪ್ರಮುಖವಾಗಿ ವಿದ್ಯಾರ್ಥಿ ರಿಯಾಯಿತಿ ಬಸ್ ಪಾಸ್ ಮತ್ತು ವಿಕಲಚೇತನರ ಬಸ್ ಪಾಸ್ ದರಗಳನ್ನು ಹೆಚ್ಚಳ ಮಾಡಿಲ್ಲ. ಗ್ರಾಮೀಣ ಪ್ರದೇಶಗಳ ಸಾರ್ವಜನಿಕ ಪ್ರಯಾಣಿಕರ ಮೇಲಿನ ಹೊರೆಯನ್ನು ಕಡಿಮೆಗೊಳಿಸಲು ಸಾಮಾನ್ಯ ಸಾರಿಗೆಗಳಲ್ಲಿ ಮೊದಲ 3 ಕಿ.ಮೀ ಗಳವರೆಗೆ ಪ್ರಯಾಣಿಸುವ ಪ್ರಯಾಣಿಕರ ಪ್ರಯಾಣ ದರ ಹಾಲಿ ರೂ. 7 ಇದ್ದು, ಈ ಹಂತದಲ್ಲಿ ಪ್ರಯಾಣ ದರ ರೂ. 2 ಕಡಿತಗೊಳಿಸಿ ಒಟ್ಟು ಪ್ರಯಾಣ ದರವನ್ನ ರೂ. 5 ಕ್ಕೆ ನಿಗದಿಪಡಿಸಿದೆ. ಅದರಂತೆ ಸಾಮಾನ್ಯ ಸಾರಿಗೆಗಳಲ್ಲಿ ಮೊದಲ 12 ಮತ್ತು 15 ಕಿ.ಮೀ ಪ್ರಯಾಣಿಸುವ ಪ್ರಯಾಣಿಕರ ಪ್ರಯಾಣ ದರ ಹೆಚ್ಚಳ ಮಾಡದೇ ಹಾಲಿ ದರದಲ್ಲಿಯೇ ಮುಂದುವರೆಸಲಾಗಿದೆ. ಇನ್ನು ವೇಗದೂತ ಸಾರಿಗೆಗಳಲ್ಲಿ ಮೊದಲ 6 ಕಿ.ಮೀ ಪ್ರಯಾಣಿಸುವ ಪ್ರಯಾಣಿಕರ ಪ್ರಯಾಣ ದರ ಹೆಚ್ಚಳ ಮಾಡದೇ ಈಗ ಇರುವ ದರದಲ್ಲಿಯೇ ಮುಂದುವರೆಸಲಾಗಿದೆ.

ABOUT THE AUTHOR

...view details