ಬೆಂಗಳೂರು: ಅಂತೂ ಸರ್ಕಾರ ಮತ್ತು ಸಾರಿಗೆ ನೌಕರರ ಫೈಟ್ ಮುಗೀತು ಎಂದು ಸಾರ್ವಜನಿಕರು ನಿಟ್ಟುಸಿರು ಬಿಡುತ್ತಿದ್ದ ಹಾಗೆ ಮತ್ತೆ ಎಲ್ಲ ಬಸ್‌ಗಳು ಡಿಪೋ ಕಡೆಗೆ ಯೂಟರ್ನ್ ಹೊಡೆದಿವೆ.
ರಸ್ತೆಗಿಳಿದ ಬಸ್ಸುಗಳು ಮತ್ತೆ ಯೂ ಟರ್ನ್: ಪ್ರಯಾಣಿಕರು ಕಂಗಾಲು - bus start from majestic
ರಸ್ತೆಗಿಳಿದ ಬಸ್ಸುಗಳೆಲ್ಲವೂ ಕೆಲವೇ ನಿಮಿಷದಲ್ಲಿ ಮತ್ತೆ ಡಿಪೋ ಸೇರಿವೆ. ಈ ಮೂಲಕ ಕಣ್ಣರಳಿಸಿ ಕಾದು ಕುಳಿತಿದ್ದ ಪ್ರಯಾಣಿಕರು ಕಂಗಾಲಾಗುವಂತೆ ಮಾಡಿದೆ.

ಸಾರಿಗೆ ಮುಷ್ಕರ ಅಂತ್ಯ : ಬಸ್ ಸಂಚಾರ ಆರಂಭ
ಎರಡು ದಿನಗಳಿಂದ ನಗರದಲ್ಲಿ ಟ್ರೈನಿ ಚಾಲಕರಿಂದ ಬೆರಳೆಣಿಕೆಯಷ್ಟು ಬಸ್ಸುಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿತ್ತು. ಇಂದು ಮುಂಜಾನೆಯಿಂದ 124 ಕೆಎಸ್‌ಆರ್‌ಟಿಸಿ ಬಸ್ಸುಗಳು ರಾಜ್ಯದ ವಿವಿಧ ಸ್ಥಳಗಳಿಗೆ ಸಂಚರಿಸಿದ್ದವು. ಬಿಎಂಟಿಸಿಯ 93 ಬಸ್ಸುಗಳು ನಗರದೊಳಗೆ ಸಂಚಾರ ಮಾಡಿದ್ದವು. ಇದೀಗ ಮತ್ತೆ ಸಾರಿಗೆ ಮುಖಂಡರ ಹೇಳಿಕೆ ಗೊಂದಲ ಸೃಷ್ಟಿಸಿದೆ.
Last Updated : Dec 13, 2020, 10:01 PM IST