ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ಕೆಎಸ್​ಆರ್​ಟಿಸಿ ಬಸ್ ಪಲ್ಟಿ: ಬಾಲಕಿಯ ಅಂಗೈ ಕಟ್​ - Ksrtc bus falldown

ನಗರದ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ಕೆಎಸ್​ಆರ್​ಟಿಸಿ ಬಸ್ ಪಲ್ಟಿಯಾಗಿದೆ. ಘಟನೆಯಲ್ಲಿ ಪುಟ್ಟ ಬಾಲಕಿಯ ಕೈ ತುಂಡಾಗಿದ್ದು, ಬಸ್​ನಲ್ಲಿದ್ದ ಚಾಲಕ, ಕಂಡಕ್ಟರ್ ಸೇರಿದಂತೆ ಒಟ್ಟು 12 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದಾರೆ.

ಕೆಎಸ್​ಆರ್​ಟಿಸಿ ಬಸ್ ಪಲ್ಟಿ: ಪುಟ್ಟ ಬಾಲಕಿಯ ಎಡಭಾಗದ ಅಂಗೈ ಕಟ್​

By

Published : Aug 9, 2019, 8:21 PM IST

ಬೆಂಗಳೂರು:ನಗರದ ಸ್ಯಾಟಲೈಟ್ ಬಸ್ ಸ್ಟಾಪ್​ನಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ಕೆಎಸ್​ಆರ್​ಟಿಸಿ ಬಸ್ ಪಲ್ಟಿಯಾಗಿದೆ. ಘಟನೆಯಲ್ಲಿ ಬಾಲಕಿವೋರ್ವಳ ಎಡಭಾಗದ ಅಂಗೈ ತುಂಡಾಗಿದ್ದು, ಬಸ್​ನಲ್ಲಿದ್ದ ಚಾಲಕ, ಕಂಡಕ್ಟರ್ ಸೇರಿದಂತೆ ಒಟ್ಟು 12 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದಾರೆ.

ಕೆಎಸ್​ಆರ್​ಟಿಸಿ ಬಸ್ ಪಲ್ಟಿ: ಪುಟ್ಟ ಬಾಲಕಿಯ ಅಂಗೈ ಕಟ್​

ಇಂದು ಮಹಾಲಕ್ಷ್ಮಿ ಹಬ್ಬವಾಗಿದ್ದ ಕಾರಣ ಕೆಲವರು ಸ್ಯಾಟಲೈಟ್ ಬಸ್ ಸ್ಟಾಪ್ ನಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದರು. ಬಸ್ ಮೈಸೂರು ಮುಖ್ಯ ರಸ್ತೆಯ ನೆಕ್ಸಾ ಶೋ ರೂಂ ಬಳಿ ಬರುತ್ತಿದ್ದಂತೆ ಚಾಲಕ ಇನ್ನೊಂದು ವಾಹನವನ್ನ ಓವರ್ ಟೇಕ್ ಮಾಡುವ ಧಾವಂತದಲ್ಲಿ ಬಸ್​ ಡಿವೈಡರ್​ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ರಾಜರಾಜೇಶ್ವರಿ ನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಸ್​ನಲ್ಲಿ ಡಿಯಾ ಪ್ರಸಾದ್ ಎಂಬ ಪುಟ್ಟ ಬಾಲಕಿ​ ತನ್ನ ತಂದೆ-ತಾಯಿ ಜೊತೆ ಪ್ರಯಾಣ ಮಾಡ್ತಿದ್ದಳು. ಈ ಘಟನೆಯಲ್ಲಿ ಡಿಯಾಳ ಎಡಭಾಗದ ಅಂಗೈ ತುಂಡಾಗಿದ್ದು, ಸದ್ಯ ಬಾಲಕಿ ಜೈನ್ ಆಸ್ಪತ್ರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ABOUT THE AUTHOR

...view details