ಬೆಂಗಳೂರು : ಕೊರೊನಾದಿಂದ ಅಂತಾರಾಜ್ಯ ಸಾರಿಗೆ ಸೇವೆ ಸ್ಥಗಿತಗೊಂಡಿತ್ತು. ಇದೀಗ ಹಂತ ಹಂತವಾಗಿ ಲಾಕ್ಡೌನ್ ಸಡಿಲಿಕೆ ಮಾಡುತ್ತಿರುವ ಸಂಬಂಧ ಕೆಎಸ್ಆರ್ಟಿಸಿ ಬಸ್ಗಳು ಅಂತಾರಾಜ್ಯ ಸಂಚಾರ ಆರಂಭಿಸಿವೆ.
ಕರ್ನಾಟಕದಿಂದ ತಮಿಳುನಾಡಿಗೆ ಕೆಎಸ್ಆರ್ಟಿಸಿ ಬಸ್ ಸಂಚಾರ ಆರಂಭ.. - Interstate Transport Service Breakdown
ಇದರ ಸದುಪಯೋಗವನ್ನು ಅಂತಾರಾಜ್ಯ ಪ್ರಯಾಣಿಕರು ಪಡೆಯಬಹುದು. ಇನ್ನು, ಕೋವಿಡ್ ಸೋಂಕು ಹಿನ್ನೆಲೆ, ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಪಾಡುವುದು ಕಡ್ಡಾಯ..

ಕೆಎಸ್ಆರ್ಟಿಸಿ
ಈವರೆಗೆ ತಮಿಳುನಾಡು ಸಂಚಾರಕ್ಕೆ ಅಲ್ಲಿನ ಸರ್ಕಾರ ಅನುಮತಿ ನೀಡಿರಲಿಲ್ಲ. ಆದರೆ, ಇದೀಗ ಅನುಮತಿ ಸಿಕ್ಕಿದ್ದು, ಕೆಎಸ್ಆರ್ಟಿಸಿಯು ಇಂದಿನಿಂದಲೇ ತಮಿಳುನಾಡಿಗೆ ಬಸ್ಗಳ ಸಂಚಾರ ಪ್ರಾರಂಭಿಸಿವೆ. ಇದರ ಸದುಪಯೋಗವನ್ನು ಅಂತಾರಾಜ್ಯ ಪ್ರಯಾಣಿಕರು ಪಡೆಯಬಹುದು. ಇನ್ನು, ಕೋವಿಡ್ ಸೋಂಕು ಹಿನ್ನೆಲೆ, ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಪಾಡುವುದು ಕಡ್ಡಾಯವಾಗಿದೆ.